Advertisement
ಕೆಲವು ತಿಂಗಳ ಹಿಂದೆಯಷ್ಟೇ ಮಂಗಳೂರು ಸೆಂಟ್ರಲ್ ನಿಲ್ದಾಣದ ನಂ. 4 ಮತ್ತು 5 ಪ್ಲಾಟ್‌ಫಾರ್ಮ್ ಗಳು ಪೂರ್ಣಗೊಂಡಾಗ ಈ ಭಾಗಕ್ಕೆ ಬೆಂಗಳೂರು, ಮುಂಬಯಿಯ ರೈಲುಗಳು ವಿಸ್ತರಣೆಯಾಗುತ್ತವೆ ಎಂದು ನಿರೀಕ್ಷಿಸಲಾಗಿತ್ತು.
Related Articles
Advertisement
ಹೊಸದಾಗಿ ಓಡಾಟ ನಡೆಸಲಿರುವ ಮಂಗಳೂರು -ರಾಮೇಶ್ವರಂ ರೈಲು ಸಂಚಾರದಿಂದ ಗೋಮಟೇಶ್ವರ ಎಕ್ಸ್‌ಪ್ರಸ್ ರೈಲಿನ ವಿಸ್ತರಣೆ ಅಸಾಧ್ಯ ಎಂದು ಪತ್ರದಲ್ಲಿ ಹೇಳಲಾಗಿದೆ. ಅಲ್ಲದೆ ಮಂಗಳೂರು-ತಾಂಬರಂ, ಮಂಗಳೂರು-ಬರೌನಿ ರೈಲುಗಳ ಸಂಚಾರದಿಂದಾಗಿ ಸೆಂಟ್ರಲ್‌ನಲ್ಲಿ ಕರ್ನಾಟಕದ ರೈಲುಗಳಿಗೆ ಜಾಗವಿಲ್ಲ.
ಹಿಂದಿನಿಂದಲೂ ಅಡ್ಡಿ: ಡಿ.ವಿ. ಸದಾನಂದ ಗೌಡರು ರೈಲ್ವೇ ಸಚಿವರಾಗಿದ್ದಾಗ ಗೋಮಟೇಶ್ವರ ರೈಲಿಗೆ ಚಾಲನೆ ದೊರೆತಿದ್ದು, ಮಂಗಳೂರು ಸೆಂಟ್ರಲ್‌ನಿಂದಲೇ ಯಶವಂತಪುರಕ್ಕೆ ಹೋಗುವಂತೆ ವೇಳಾಪಟ್ಟಿ ಹೊಂದಿತ್ತು. 2017ರಲ್ಲಿ ಉದ್ಘಾಟನೆ ಸಮಯದಲ್ಲಿ ಇದಕ್ಕೆ ಒಪ್ಪದ ಪಾಲಕ್ಕಾಡ್ ವಿಭಾಗ ಈ ರೈಲನ್ನು ಮಂಗಳೂರು ಜಂಕ್ಷನ್‌ನಿಂದ ಸಂಚರಿಸುವಂತೆ ಮಾಡಿತು. ಇದು ಯಾತ್ರಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಮಂಗಳೂರು ಸೆಂಟ್ರಲ್‌ನಲ್ಲಿ ಹೊಸ ಪ್ಲಾಟ್‌ಫಾರ್ಮ್ ಆದ ಬಳಿಕ ಈ ರೈಲನ್ನು ಮಂ. ಸೆಂಟ್ರಲ್‌ಗೆ ವಿಸ್ತರಿಸುವುದಾಗಿ ಆಧಿಕಾರಿಗಳು ಹೇಳಿದ್ದರು.
ಈಗ ಮಂ. ಸೆಂಟ್ರಲ್ ನಿಲ್ದಾಣದಿಂದ ಕರ್ನಾಟಕ ಹಾಗೂ ಮುಂಬಯಿ ಕಡೆ ಹೆಚ್ಚಿನ ರೈಲುಗಳು ಆರಂಭ ಆಗಬೇಕೆಂಬ ಆಶಯದಿಂದ ಎರಡು ಹೊಸ ಪ್ಲಾಟ್‌ಫಾರ್ಮ್ ನಿರ್ಮಾಣವಾಗಿದೆ. ಆದರೆ ಸದ್ಯ ಈ ಎರಡು ಪ್ಲಾಟ್‌ಫಾರ್ಮ್ ಗಳನ್ನು ಕೇರಳದ ಕಡೆ ಮುಖ ಮಾಡಿ ಹೋಗುವ ರೈಲುಗಳ ಸಂಚಾರಕ್ಕೆ ಮೀಸಲಿಡುವ ಹುನ್ನಾರ ನಡೆದಿದೆ. ಹೀಗಾಗಿ ಬೆಂಗಳೂರು – ಮಂಗಳೂರು ಹಗಲು ರೈಲಿನ ಮಂಗಳೂರು ಸೆಂಟ್ರಲ್ ವಿಸ್ತರಣೆಗೆ ತಡೆ ಒಡ್ಡುವ ಪ್ರಯತ್ನ ನಡೆದಿದೆ ಎಂಬುದು ಹಲವರ ದೂರು.
ಗೋಮಟೇಶ್ವರ ರೈಲು ಸೆಂಟ್ರಲ್‌ಗೆ ವಿಸ್ತರಣೆಯಾಗು ತ್ತದೆ ಎನ್ನುವ ಆಶಾಭಾವನೆ ನಮ್ಮಲ್ಲಿತ್ತು. ಕರ್ನಾಟಕ, ಮುಂಬಯಿಯಿಂದ ಬರುವ ಇನ್ನಷ್ಟು ರೈಲುಗಳು ಸೆಂಟ್ರಲ್‌ಗೆ ಬರುವ ಸಾಧ್ಯತೆ ಕೇರಳ ಲಾಬಿಯಿಂದಾಗಿ ವಿಫಲವಾಗುತ್ತಿದೆ ಎನ್ನುತ್ತಾರೆ ಪಶ್ಚಿಮ ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿಯ ಸಂಚಾಲಕ ಅನಿಲ್ ಹೆಗ್ಡೆ.
ಮಂಗಳೂರಿಗೆ ಅನ್ಯಾಯವಾಗುತ್ತಿರುವ ಬಗ್ಗೆ ಅರಿವಿದೆ. ಈಗ ನಾನು ರೈಲ್ವೇ ಸಚಿವನಾಗಿ ದ್ದೇನೆ. ಕಳೆದ ಬಾರಿ ಮಂಗಳೂರಿನಲ್ಲೇ ಸಭೆ ನಡೆಸಿ, ಕೆಲವು ವಿಷಯಗಳನ್ನು ಸರಿ ಪಡಿಸುವ ಯತ್ನ ಮಾಡಿ ದ್ದೇನೆ. ಮಂಗಳೂರಿಗೆ ಪ್ರತ್ಯೇಕ ವಿಭಾಗವಾಗಬೇಕು ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡು ತ್ತಿದ್ದೇನೆ. ಪಾಲಕ್ಕಾಡ್ ಅಧಿಕಾರಿಗಳು ಹೊಸ ರೈಲಿಗಾಗಿ ಗೊಮ್ಮಟೇಶ್ವರ ರೈಲು ವಿಸ್ತರಣೆ ಅಸಾಧ್ಯ ಎನ್ನುತ್ತಿದ್ದಾರೆ, ಆದರೆ ಹಳೆ ರೈಲು ವಿಸ್ತರಣೆ ಮಾಡಬಾರದು ಎಂದೇನಿಲ್ಲ. ಇದನ್ನು ಸರಿಪಡಿಸಲು ಸಾಧ್ಯವಿದೆ.-ವಿ. ಸೋಮಣ್ಣ, ರೈಲ್ವೇ ಸಹಾಯಕ ಸಚಿವರು -ವೇಣುವಿನೋದ್ ಕೆ.ಎಸ್.