Advertisement

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

01:08 AM Nov 29, 2024 | Team Udayavani |

ಮಂಗಳೂರು: ಮುರುಡೇಶ್ವರ- ಬೆಂಗಳೂರು ಮಧ್ಯೆ ಮಂಗಳೂರು ಮೂಲಕ ಸಂಚರಿಸುತ್ತಿರುವ 16585/86 ಬೆಂಗಳೂರು ಮುರುಡೇಶ್ವರ ಎಕ್ಸ್‌ಪ್ರೆಸ್‌ ರೈಲಿನ ಸಮಯ ಬದಲಾಯಿಸುವ ಪ್ರಸ್ತಾವಕ್ಕೆ ಮಂಗಳೂರಿನ ಯಾತ್ರಿ ಸಂಘದ ವರು ವಿರೋಧ ವ್ಯಕ್ತಪಡಿಸಿದ್ದಾರೆ.

Advertisement

ಮುರುಡೇಶ್ವರ ಸ್ಟೇಷನ್‌ನಲ್ಲಿ ನೀರು ತುಂಬಿಸುವುದು ಹಾಗೂ ಬೋಗಿ ನಿರ್ವಹಣೆ ಮಾಡುವುದಕ್ಕಾಗಿ ಮೂರು ಗಂಟೆಕಾಲ ಈ ರೈಲನ್ನು ನಿಲ್ಲಿಸುವಂತೆ ರೈಲ್ವೇ ಮಂಡಳಿಯು ರೈಲ್ವೇ ಇಲಾಖೆಗೆ ಸೂಚನೆ ನೀಡಿರುವುದರಿಂದ ಈ ಬದಲಾವಣೆಗೆ ಸಿದ್ಧತೆ ನಡೆಯುತ್ತಿರುವುದಾಗಿ ತಿಳಿದುಬಂದಿದೆ.

ಈ ರೀತಿ ಮುರುಡೇಶ್ವರದಲ್ಲಿ ರೈಲನ್ನು ತಡೆ ಹಿಡಿದರೆ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಬೇಕಾಗಿ ಬರುವುದಲ್ಲದೆ ರೈಲು ಮಂಗಳೂರು ಸೆಂಟ್ರಲ್‌ಗೆ ಬರದೇ ಮಂಗಳೂರು ಜಂಕ್ಷನ್‌ ಅಥವಾ ಪಡೀಲು ಮೂಲಕ ಹೋಗುವ ಸಾಧ್ಯತೆ ಇದೆ ಎನ್ನು ವುದು ಈ ಭಾಗದ ಪ್ರಯಾಣಿಕರ ಕಳವಳ.

ರೈಲಿನ ವೇಳಾಪಟ್ಟಿಯನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದು ಎಂದು ಅಭಿವೃದ್ಧಿ ಸಮಿತಿ ಅಧ್ಯಕ್ಷ ಹನುಮಂತ ಕಾಮತ್‌ ನೈಋತ್ಯ ರೈಲ್ವೆ ಪ್ರಧಾನ ಮುಖ್ಯ ನಿರ್ವಹಣ ಪ್ರಬಂಧಕರಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next