Advertisement
ಭೂಸ್ವಾಧೀನ ಸಹಿತ ಕಾನೂನು ತೊಡಗಿನಿಂದಾಗಿ ಸದ್ಯಕ್ಕೆ ಈಶ್ವರ ನಗರದಿಂದ ಪರ್ಕಳವನ್ನು ಸಂಪರ್ಕಿಸುವ ಹೆದ್ದಾರಿ ಕಾಮಗಾರಿಗೆ ತಡೆಯಾಗಿದೆ. ಈಗ ಈಶ್ವರನಗರದವರೆಗೆ ನೇರವಾದ ಚತುಷ್ಪಥ ರಸ್ತೆ ಇದೆ. ಮುಂದಿನ ಹೊಸ ರಸ್ತೆ ಕಾಮಗಾರಿಯೂ ಇದೇ ನೇರದಲ್ಲಿ ನಡೆಯಬೇಕಾಗಿದೆ. ಆದರೆ, ಜಾಗ ಬಿಟ್ಟುಕೊಡದ ಕಾರಣ ಅಲ್ಲಿಂದ ಬಲಕ್ಕೆ ಡೈವರ್ಷನ್ ಪಡೆದು ಇಳಿಜಾರಿನಲ್ಲಿ ಇಳಿದು, ಮೇಲೆ ಹತ್ತಿ ಹೊಸ ಮಾರ್ಗವನ್ನು ಸಂಪರ್ಕಿಸಬೇಕು. ಮಣಿಪಾಲದಿಂದ ಈಶ್ವರನಗರ ಮೂಲಕ ಸಾಗುವ ರಸ್ತೆಯಲ್ಲಿ ವೇಗವಾಗಿ ಸಾಗುವ ವಾಹನಗಳಿಗೆ ಒಮ್ಮಿಂದೊಮ್ಮೆ ಡೈವರ್ಷನ್ ಇರುವುದು ಅರಿವಿಗೆ ಬಾರದೆ ನೇರವಾಗಿ ಸಾಗಿ ಅಲ್ಲಿರುವ ಪಂಪ್ ಹೌಸ್‌ಗೆ ಡಿಕ್ಕಿ ಹೊಡೆಯುವುದು, ಪಲ್ಟಿ ಹೊಡೆಯುವುದು ನಡೆಯುತ್ತಿದೆ. ಈ ವರ್ಷದಲ್ಲೇ 9 ಕಾರುಗಳು ಡಿಕ್ಕಿ ಹೊಡೆದು ಹಲವಾರು ಮಂದಿ ಗಾಯಗೊಂಡಿದ್ದಾರೆ.
Related Articles
1. ಮಣಿಪಾಲಕ್ಕಿಂತ ಸ್ವಲ್ಪ ಮುಂದೆ ಹೋಗುವಾಗಲೇ ಅಪಘಾತ ವಲಯ/ ನಿಧಾನವಾಗಿ ಚಲಿಸಿ/ಡೈವ ರ್ಷನ್ ಇದೆ ಎಂಬ ಎಚ್ಚರಿಕೆ ಫಲಕ ಹಾಕಬಹುದು.
2. ಅಪಘಾತ ನಡೆಯುವ ಜಾಗದಲ್ಲಿ ಎಚ್ಚರಿಕೆ ಫಲಕ ಇದ್ದರೂ ಅದಕ್ಕೇ ಢಿಕ್ಕಿ ಹೊಡೆದ ಪ್ರಸಂಗವೂ ನಡೆದಿದೆ. ಹೀಗಾಗಿ ಬೋರ್ಡ್ ದೊಡ್ಡದಾಗಿರಬೇಕು.
3. ಕಾಂಕ್ರಿಟ್ ರಸ್ತೆ ಮುಕ್ತಾಯವಾಗುವ ಮುನ್ನವೇ ಸ್ಪೀಡ್ ಬ್ರೇಕರ್ ಅಳವಡಿಸಿದರೆ ತಕ್ಕ ಮಟ್ಟಿಗೆ ವಾಹನ ಗಳು ಚಾಲಕರ ನಿಯಂತ್ರಣಕ್ಕೆ ಬರಲು ಸಾಧ್ಯವಿದೆ.
Advertisement