Advertisement

ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ

06:16 PM Dec 06, 2024 | Team Udayavani |

ಶಿಕ್ಷಣ, ವೈದ್ಯಕೀಯ, ತಾಂತ್ರಿಕ ಶಿಕ್ಷಣಗಳಲ್ಲಿ ಅಭೂತಪೂರ್ವ ಪ್ರಗತಿಯೊಂದಿಗೆ ಮಾನವ ಸಂಪನ್ಮೂಲ ಸೃಷ್ಟಿಯಲ್ಲಿ ಗುರುತಿಸಿಕೊಂಡಿದೆ ಮಂಗಳೂರು ನಗರ. ಇಲ್ಲಿನ ಹಲವು ತಾಂತ್ರಿಕ ವಿದ್ಯಾಲಯಗಳಿಗೆ ಕ್ಯಾಂಪಸ್ ಆಯ್ಕೆಗಾಗಿ ಬರುವ ಬಹುರಾಷ್ಟಿ ಯ ಕಂಪನಿಗಳು ಈ ಭಾಗದ ವಿದ್ಯಾರ್ಥಿಗಳ ಮೇಲೆ ಹೆಚ್ಚು ವಿಶ್ವಾಸವಿರಿಸಿಕೊಂಡಿರುವುದು ಅವರ ಪ್ರತಿಭೆ ಹಾಗೂ ಕಠಿನ ದುಡಿಮೆಯ ಕಾರಣಕ್ಕೆ. ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಕೆಲಸ ಮಾಡುವ ಜತೆಗೆ ಭಾವನಾತ್ಮಕ ಬಾಂಧವ್ಯವನ್ನು ಹೊಂದಿರುವುದು ಕೂಡಾ ಅದಕ್ಕೆ ಕಾರಣ. ಆದರೆ ಕೆಲ ವರ್ಷಗಳಿಂದ, ಅದರಲ್ಲೂ ಕೋವಿಡ್ ನಂತರದ ಸನ್ನಿವೇಶ ಬದಲಾಗಿದೆ.

Advertisement

ಬೆಂಗಳೂರು ಅಥವಾ ಹೊರ ದೇಶಗಳಿಗೆ ತೆರಳದೆ ಊರಿನಲ್ಲೇ ಕುಳಿತು ಕೆಲಸ ಮಾಡುವ ಅವಕಾಶ ಬೇಕಿತ್ತು ಎಂದು ವಿಮಾನ ಏರುವ ಮುನ್ನ ಬಹುತೇಕ ಮಂದಿಗೆ ಅನಿಸತೊಡಗಿತ್ತು. ಇದಕ್ಕೆ ಪೂರಕವಾಗಿ ಸರಕಾರ ಮಂಗಳೂರಿನಲ್ಲಿ ಐಟಿ ಪಾರ್ಕ್ ನಂತಹ ಮೂಲಸೌಕರ್ಯ ನಿರ್ಮಿಸಲಿ ಎಂಬ ಬೇಡಿಕೆ ಕೂಡಾ ಇತ್ತು. ಇದೇ ಸನ್ನಿವೇಶದಲ್ಲಿ ಮುಕುಂದ್ ಎಂಜಿಎಂ ರಿಯಾಲ್ಟಿಯವರಿಂದ `ವರ್ಟೆಕ್ಸ್ ವರ್ಕ್ಸ್ ಸ್ಪೇಸ್’ ಎಂಬ ವಿಶಿಷ್ಟ ಪರಿಕಲ್ಪನೆ ಜಾರಿಗೆ ತರಲಾಯಿತು.‌

ಇಲ್ಲೇ ನೆಲೆ ನಿಂತು ವಿದೇಶಿ ಕಂಪೆನಿಗಳಿಗಾಗಿ ಕೆಲಸ ಮಾಡುವವರ ಅವಶ್ಯಕತೆಯನ್ನು ಸಾಕಾರಗೊಳಿಸಲು ಕೋವಿಡ್ ಕಾಲದಲ್ಲಿ ಮೊದಲ ಹೆಜ್ಜೆ ಇಡಲಾಯಿತು. ಕುಟುಂಬ ವರ್ಗ, ಊರಿನ ಸಂಬಂಧ, ಜೀವನ ಸಂಸ್ಕೃತಿಯಿಂದ ದೂರ ಉಳಿದು ಯೂರೋಪ್, ಅಮೇರಿಕಾ, ಸಿಂಗಾಪುರ, ಜಪಾನ್ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿದ್ದ ಐಟಿ ಕ್ಷೇತ್ರದ ಉದ್ಯೋಗಿಗಳು ಕೋವಿಡ್ ಬಳಿಕ ಮತ್ತೆ ಊರಿಗೆ ಮರಳಿದ್ದಾರೆ. ಈ ಸಂದರ್ಭ ಅವರು ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದರು. ವರ್ಕ್ ಫ್ರಮ್ ಹೋಮ್‌ನಲ್ಲಿ ಹೈಸ್ಪೀಡ್ ಇಂಟರ್ನೆಟ್, ತಡೆರಹಿತ ವಿದ್ಯುತ್ ಕನೆಕ್ಷನ್ ಮೊದಲಾದ ಸಮಸ್ಯೆ ಅನುಭವಿಸುತ್ತಿದ್ದ ಉದ್ಯೋಗಿಗಳಿಗೆ `ವರ್ಟೆಕ್ಸ್ ವರ್ಕ್ಸ್ ಸ್ಪೇಸ್’ ಹೊಸ ಅವಕಾಶ ಕಲ್ಪಿಸಿತು.‌

ರಾಜ್ಯ ಸರಕಾರ “ಕರ್ನಾಟಕ ಡಿಜಿಟಲ್ ಇಕಾನಮಿ ಮಿಷನ್’ ಕಾರ್ಯಕ್ರಮ ಯೋಜನೆಯನ್ನು ಸ್ಮಾರ್ಟ್ ಸಿಟಿ ಮಂಗಳೂರು ನಗರಕ್ಕೂ ವಿಸ್ತರಣೆ ಮಾಡುವಂತೆ ಘೋಷಿಸಿತು. ಇದರಿಂದ ಮಂಗಳೂರು ನಗರದಲ್ಲಿ ಕಳೆದ 3 ವರ್ಷಗಳಲ್ಲಿ 150ಕ್ಕಿಂತಲೂ ಹೊಸ ಐಟಿ, ಕಾಪೋರೇಟ್ ಸಂಸ್ಥೆಗಳು ತಮ್ಮ ನೆಲೆಯನ್ನು ಸ್ಥಾಪಿಸಿದ್ದು ಇದರಿಂದ 6000ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡಿವೆ.

ಇದಕ್ಕೆ ಸಿಂಹಪಾಲು ಎಂಬಂತೆ ಮುಕುಂದ್ ಎಂಜಿಎಂ ರಿಯಾಲ್ಟಿಯು `ವರ್ಟೆಕ್ಸ್ ವರ್ಕ್ಸ್‌ ಸ್ಪೇಸ್’ ಎಂಬ ಹೊಸ ಪರಿಕಲ್ಪನೆಯಲ್ಲಿ 1.50 ಲಕ್ಷ ಚ.ಅಡಿಯಲ್ಲಿ 35ಕ್ಕೂ ಹೆಚ್ಚು ಸಂಸ್ಥೆಗಳಿಗೆ ಉಪಕರಣಗಳು, ಉಪಯುಕ್ತತೆಗಳು ಮತ್ತು ಮೂಲಸೌಕರ್ಯಗಳನ್ನು ಕಲ್ಪಿಸಿ ಕೊಟ್ಟು 2,500ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಕಾರಣವಾಯಿತು. ಮಾತ್ರವಲ್ಲದೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸಾವಿರಾರು ಮಂದಿ ಇದೀಗ ಅದೇ ಕಂಪೆನಿಯಡಿ ಮಂಗಳೂರಿನಲ್ಲೇ ಕೆಲಸ ನಿರ್ವಹಿಸುತ್ತಿದ್ದಾರೆ.

Advertisement

ಇದರಿಂದ ಹಲವಾರು ಸಂಸ್ಥೆಗಳ ವೆಚ್ಚ ಉಳಿತಾಯದೊಂದಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದೆ. ಪ್ರಸ್ತುತ ಹೆಚ್ಚು ಜನಪ್ರಿಯತೆಯನ್ನು ಪಡೆದು ಇದೀಗ ಈ ಪರಿಕಲ್ಪನೆಗೆ 25ಕ್ಕೂ ಹೆಚ್ಚು ಸಂಸ್ಥೆಗಳಿಂದ ಬಹಳಷ್ಟು ಬೇಡಿಕೆ ಬರತೊಡಗಿದೆ. ವೇಗವಾಗಿ ಪ್ರಗತಿ ಸಾಧಿಸುತ್ತಿರುವ ಮಂಗಳೂರಿನಲ್ಲಿ 2025ರ ವೇಳೆಗೆ ಅನೇಕ ವಿದೇಶಿ ಕಂಪನಿಗಳು, ಐಟಿ ದೈತ್ಯ ಸಂಸ್ಥೆಗಳು ಕಾಲಿರಿಸುವ ನಿರೀಕ್ಷೆಯಿದೆ. ಈ ಮೂಲಕ ಮುಂದಿನ ಎರಡು ವರ್ಷಗಳಲ್ಲಿ 10 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಮುಕುಂದ್ ಎಂಜಿಎಂ ರಿಯಾಲ್ಟಿ ಸಂಸ್ಥೆಯ ಪಾಲುದಾರ ಗುರುದತ್ ಶೆಣೈ ತಿಳಿಸಿದ್ದಾರೆ.

ಅಶೋಕಾ ಬಿಸಿನೆಸ್ ಸೆಂಟರ್: ನಗರದ ಬಿಜೈ-ಕಾಪಿಕಾಡ್‌ನಲ್ಲಿ ಅಶೋಕಾದಂತಹ ಯೋಜನೆ 2025ರ ಮಧ್ಯಾಂತರದಲ್ಲಿ ಹಸ್ತಾಂತರ ಮಾಡಲು ವೇಗವಾಗಿ ಕೆಲಸ ನಡೆಯುತ್ತಿದೆ. ಮುಂದಿನ ಒಂದು ವರ್ಷದೊಳಗೆ 2 ಲಕ್ಷ ಚ.ಅಡಿ ವರ್ಕ್ಸ್ ಸ್ಪೇಸ್ ಸಿದ್ದಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು 2500ಕ್ಕೂ ಹೆಚ್ಚುವರಿ ಉದ್ಯೋಗಿಗಳು ಇಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಈ ಹೊಸ ಪರಿಕಲ್ಪನೆಯಲ್ಲಿ ಟ್ರಾಫಿಕ್ ಕಿರಿಕಿರಿ ರಹಿತ ವರ್ಕ್ ಏರಿಯಾ, ಪರಿಸರ ಸ್ನೇಹೀ ಗ್ರೀನ್ ಬಿಲ್ಡಿಂಗ್, ತಡೆರಹಿತ ಇಂಟರ್‌ನೆಟ್ ಮತ್ತು ವಿದ್ಯುತ್ ಮಾತ್ರವಲ್ಲದೆ, ಪ್ರಶಾಂತ ವಾತಾವರಣ ಹೊಂದಿರುವ ಹಸಿರೀಕರಣಕ್ಕೆ ಹೆಚ್ಚು ಒತ್ತು ನೀಡಿ ಅಶೋಕಾ ಬಿಸಿನೆಸ್ ಸೆಂಟರ್‌ನ ಕಾಮಗಾರಿ ಪ್ರಗತಿಯಲ್ಲಿದೆ.

ಇನ್‌ವೆಸ್ಟ್ ಸ್ಮಾರ್ಟ್-ಇನ್‌ವೆಸ್ಟ್ ಇನ್ ಮಂಗಳೂರು: ಅಭಿವೃದ್ಧಿಗೆ ಸಾಕಷ್ಟು ಅವಕಾಶ ಇರುವ ಎರಡನೇ ಸ್ತರದ ಮಂಗಳೂರಿನಂತಹ ನಗರಗಳಲ್ಲಿ ಅವಕಾಶಗಳನ್ನು ಶೋಧಿಸುವುದಕ್ಕೆ ರಾಜ್ಯ ಸರಕಾರ ಮಹತ್ವ ನೀಡಿದೆ. ಈ ನಿಟ್ಟಿನಲ್ಲಿ ಇನ್‌ವೆಸ್ಟ್ ಸ್ಮಾರ್ಟ್-ಇನ್‌ವೆಸ್ಟ್ ಇನ್ ಮಂಗಳೂರು ಎನ್ನುವ ಯೋಜನೆಯನ್ನು ಮುಕುಂದ್ ಎಂಜಿಎಂ ರಿಯಾಲ್ಟಿ ಅವರು ಹಾಕಿಕೊಂಡಿದ್ದಾರೆ. ಸಂಸ್ಥೆಯು ಮಂಗಳೂರಿನಲ್ಲಿ ಹೆಚ್ಚಿನ ಉದ್ಯೋಗ ಹಾಗೂ ವರ್ಕ್ಸ್ ಸ್ಪೇಸ್ ಸೃಷ್ಟಿಗೆ ಮುಂದಾಗಿದೆ. ಬಂಡವಾಳ ಹೂಡಿಕೆದಾರರೂ ಈ ವರ್ಕ್ಸ್ ಸ್ಪೇಸ್ ಗಳ ನಿರ್ಮಾಣಕ್ಕೆ ಮುಕುಂದ್ ಎಂಜಿಎಂ ರಿಯಾಲ್ಟಿ ಜತೆ ಕೈ ಜೋಡಿಸಬಹುದಾಗಿದ್ದು ವಿದೇಶಿ ಸಂಸ್ಥೆಗಳಿಂದ ಶೇ.8 ರಷ್ಟು ಬಾಡಿಗೆ ಆದಾಯ ಪಡೆಯಬಹುದಾದ ಸುವರ್ಣಾವಕಾಶ ತಮ್ಮದಾಗಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next