Advertisement
ದಿಲ್ಲಿಯಲ್ಲಿ ಶುಕ್ರವಾರ ಮಾತನಾಡಿದ ಪ್ರಧಾನಿ, ಆಪ್ ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಮಾತನಾಡಿರುವ ಕೇಜ್ರಿವಾಲ್, “ದಿಲ್ಲಿಯಲ್ಲಿ ಮೋದಿ ಅವರು 43 ನಿಮಿಷಗಳ ಕಾಲ ಮಾತನಾಡಿದರು. ಇದರಲ್ಲಿ 39 ನಿಮಿಷಗಳ ಕಾಲ ಚುನಾಯಿತ ಸರಕಾರವನ್ನು ತೆಗಳಲು ಬಳಸಿಕೊಂಡರು. ಕಳೆದ 10 ವರ್ಷದಲ್ಲಿ ಕೇಂದ್ರ ಸರಕಾರ ಜಾರಿ ಮಾಡಿರುವ ಅಭಿವೃದ್ಧಿ ಯೋಜನೆಗಳನ್ನು ಪಟ್ಟಿ ಮಾಡಲು ಕೇವಲ ಒಂದೆರಡು ಗಂಟೆಗಳು ಸಾಕು’ ಎಂದು ಹೇಳಿದರು.ಬಡವರ ವಿರೋಧಿ: ದಿಲ್ಲಿಯಲ್ಲಿರುವ ಸ್ಲಮ್‌ಗಳನ್ನು ನಾಶ ಮಾಡುವ ಮೂಲಕ ಲಕ್ಷಾಂತರ ಜನರ ಬದುಕನ್ನು ಬಿಜೆಪಿ ಸರಕಾರ ಬೀದಿಗೆ ತಂದಿದೆ. ಈ ಮೂಲಕ ತಾನು ಬಡವರ ವಿರೋಧಿ ಎಂಬುದನ್ನು ಮತ್ತೂಮ್ಮೆ ಸಾಬೀತು ಪಡಿಸಿದೆ ಎಂದಿದ್ದಾರೆ.
ಪ್ರಧಾನಿ 10 ಲಕ್ಷ ರೂ.ಗಳ ಸೂಟ್ ಹಾಕಿಕೊಳ್ಳುತ್ತಾರೆ. ಆದರೆ ಶೀಶ್ ಮಹಲ್ ಬಗ್ಗೆ ಮಾತನಾಡುತ್ತಾರೆ ಎಂದು ಪ್ರಧಾನಿ ಮೋದಿ ಅವರಿಗೆ ಅರವಿಂದ ಕೇಜ್ರಿವಾಲ್ ಅವರು ಟಾಂಗ್ ನೀಡಿದ್ದಾರೆ. ಕೇಜ್ರಿವಾಲ್ ತಮ್ಮ ನಿವಾಸದ ನವೀಕರಣಕ್ಕೆ ಕೋಟ್ಯಂತರ ರೂ. ಖರ್ಚು ಮಾಡಿದ್ದಾರೆ ಮೋದಿ ಎಂದು ಆರೋಪಿಸಿದ್ದರು.