Advertisement

ಜನರ ಹೆಗಲ ಮೇಲೆ ರಾಯಚೂರು ಜಿಪಂ CEO ಸವಾರಿ;ವಿಧಾನಸಭೆಯಲ್ಲಿ ಪ್ರಸ್ತಾಪ

01:16 PM Mar 24, 2017 | Sharanya Alva |

ಬೆಂಗಳೂರು/ರಾಯಚೂರು:ನೀರಿನ ಅಭಾವ ಪರಿಶೀಲನೆಗೆ ತೆರಳಿದ್ದ ರಾಯಚೂರು ಸಿಇಒ ಕೂರ್ಮಾರಾವ್ ಜನರ ಹೆಗಲ ಮೇಲೆ ಕುಳಿತು ಸವಾರಿ ಮಾಡಿದ್ದ ಪ್ರಕರಣ ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ ಘಟನೆ ಶುಕ್ರವಾರ ನಡೆದಿದೆ.

Advertisement

ಪರಿಶೀಲನೆಗೆ ಆಗಮಿಸಿದ್ದ ಜಿಪಂ ಸಿಇಒ ಕೊಳಚೆ ನೀರಿನಲ್ಲಿ ನಡೆದುಕೊಂಡು ಹೋಗಲು ನಿರಾಕರಿಸಿದಾಗ ಜನರು, ಸಿಇಒ ಅವರನ್ನು ಹೆಗಲ ಮೇಲೆ ಹೊತ್ತೊಯ್ದಿರುವುದಾಗಿ ಜೆಡಿಎಸ್ ಶಾಸಕ ಮಾನಪ್ಪ ವಜ್ಜಲ್ ವಿಧಾನಸಭೆಯ ಕಲಾಪದ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ್ದರು.

ಸಿಇಒ ಅವರನ್ನು ಹೊತ್ತೊಯ್ಯುವಾಗ ಅವರ ಕಾಲಲ್ಲಿ ಶೂ ಕೂಡಾ ಇತ್ತು. ಇದು ರಾಜ್ಯದ ರೈತರಿಗೆ ಮತ್ತು ಜನರಿಗೆ ಮಾಡಿದ ಅಪಮಾನ, ಕೂಡಲೇ ಸಿಇಒ ಅನ್ನು ಅಮಾನತು ಮಾಡಬೇಕೆಂದು ವಿಪಕ್ಷಗಳು ಆಗ್ರಹಿಸಿದವು.

ಜನರ ಹೆಗಲ ಮೇಲೆ ಕುಳಿತು ಸವಾರಿ ಮಾಡಿದ ಸಿಇಒ ಘಟನೆ ಬಗ್ಗೆ ಕೂಡಲೇ ವರದಿ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಚಿವ ಜಯಚಂದ್ರ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next