ರಾಯಚೂರು: ಕಳೆದ ನ.11ರಂದು ನಡೆದಿದ್ದ ಪಿಡಿಒ ಪರೀಕ್ಷೆಯ ಪ್ರಶ್ನೆ ಪತ್ರಿಕೆ ವಿತರಣೆ ತಡವಾಗಿದ್ದಕ್ಕೆ ಪರೀಕ್ಷಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ ಮಾಡಿದ್ದ ಘಟನೆಗೆ ಸಂಬಂಧಿಸಿದ ವೀಡಿಯೊ ಈಗ ವೈರಲ್ ಆಗುತ್ತಿದೆ.
ಜಿಲ್ಲೆಯ ಸಿಂಧನೂರಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಿಡಿಒ ಪರೀಕ್ಷೆ ನಡೆದಿತ್ತು. ಅಲ್ಲಿನ ಮುಖ್ಯಸ್ಥರು ಒಂದು ಕೋಣೆಗೆ 24ರಲ್ಲಿ 12 ಪ್ರಶ್ನೆ ಪತ್ರಿಕೆಗಳನ್ನು ಮಾತ್ರ ವಿತರಿಸಿದ್ದರು. ಅಲ್ಲದೇ, ವಿದ್ಯಾರ್ಥಿಗಳ ಮುಂದೆ ಲಕೋಟೆ ತೆರೆಯದೆ ಮೊದಲೇ ತೆಗೆದಿರುವುದು ಅನುಮಾಕ್ಕೆಡೆ ಮಾಡಿದೆ ಎಂದು ಪರೀಕ್ಷಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರಶ್ನೆ ಪತ್ರಿಕೆ ಸಿಕ್ಕವರಿಗೂ ಕೂಡ ಪರೀಕ್ಷೆ ಬರೆಯದಂತೆ ಸೂಚಿಸಿ ಪರೀಕ್ಷೆ ಬಹಿಷ್ಕರಿಸಿದ್ದರು. ನಂತರ ಪರೀಕ್ಷಾರ್ಥಿಗಳು ರಸ್ತೆ ತಡೆದು ಸಂಚಾರ ತಡೆದು ಪ್ರತಿಭಟನೆ ನಡೆಸಿದ್ದರು. ಆಗ ಪರೀಕ್ಷಾರ್ಥಿಯೊಬ್ಬ ಪ್ರಶ್ನೆ ಪತ್ರಿಕೆಗಳ ತರುತ್ತಿದ್ದ ಸಿಬ್ಬಂದಿಯನ್ನು ಪ್ರಶ್ನಿಸುತ್ತಿರುವ ವೀಡಿಯೋ ಮಾಡಿ ಹರಿಬಿಟ್ಟಿದ್ದು, ಈಗ ವೈರಲ್ ಆಗುತ್ತಿದೆ.
ಈಗಾಗಲೇ ಈ ಪರೀಕ್ಷಾ ಗೊಂದಲದ ಕುರಿತು ತನಿಖೆ ಕೆಪಿಎಸ್ಸಿಯಿಂದ ಸಮಿತಿ ಕೂಡ ರಚಿಸಲಾಗಿದೆ.