ಬೆಂಗಳೂರು: ಮೈ ಮೇಲೆ ದೇವರು ಬರುವುದಾಗಿ ನಂಬಿಸಿ ಕಾಯಿಲೆ ಗುಣಪಡಿಸುವ ಕಥೆ ಕಟ್ಟಿ ವ್ಯಕ್ತಿಯೊಬ್ಬರಿಂದ ಒಂದೂವರೆ ಲಕ್ಷಕ್ಕೂ ಅಧಿಕ ಹಣ ಪಡೆದು ವಂಚಿಸಿದ ಆರೋಪಿ ವಿರುದ್ಧ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಜುನಾಥ್ ಎಂಬುವವರು ಮಾದೇಶ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಮಂಜುನಾಥ್ ತಂದೆ ಕಾಯಿಲೆಗೆ ಒಳಗಾಗಿದ್ದರು. ಈ ವೇಳೆ ಮಂಜುನಾಥ ಅಣ್ಣನ ಸ್ನೇಹಿತನಾಗಿದ್ದ ಮಾದೇಶ ಅದನ್ನು ಗುಣಪಡಿಸುವುದಾಗಿ ಹೇಳಿದ್ದ. ಇದಕ್ಕೆ ಪೂಜೆ ಮಾಡಿಸಲು 50 ಸಾವಿರ ರೂ. ಪಡೆದಿದ್ದ.. ನಂತರ ಮಾದೇಶ್ವರ ಬೆಟ್ಟಕ್ಕೆ ರಾತ್ರಿ ಕರೆದೊಯ್ದು ಮೈ ಮೇಲೆ ದೇವರು ಬಂದಂತೆ ನಾಟಕವಾಡಿ ನಂಬಿಕೆ ಗಿಟ್ಟಿಸಿಕೊಂಡಿದ್ದ. ಇಷ್ಟಾದರೂ ತಂದೆಯ ಆರೋಗ್ಯದಲ್ಲಿ ಸುಧಾರಣೆ ಕಾಣದಿದ್ದಾಗ ಮನೆ ಬದಲಿಸಿದರೆ ಗುಣವಾಗಬಹುದು ಎಂದಿದ್ದ. ಆಗಲೂ ಮಂಜುನಾಥ್ ಹಣವಿಲ್ಲ ಎಂದಾಗ, ಮಾದೇಶ ಸಹಾಯದ ಮಾತುಗಳನ್ನಾಡಿ ಬ್ಯಾಂಕ್ನಲ್ಲಿ ಸಾಲ ಮಾಡಿಸಿ ಹಣ ಕೊಡಿಸಿದ್ದ. ನಾನು ಇಎಂಐ ಕಟ್ಟುವುದಾಗಿ ಹೇಳಿ ಮತ್ತೆ ಮಂಜುನಾಥ್ ಹೆಸರಲ್ಲಿ 1 ಲಕ್ಷ ರೂ. ಪಡೆದಿದ್ದ. ಇಷ್ಟೆಲ್ಲ ಆದ ಬಳಿಕವೂ ಮಂಜುನಾಥ್ ತಂದೆಗೆ ಆರೋಗ್ಯದಲ್ಲಿ ಚೇತರಿಕೆ ಕಾಣದಿದ್ದಾಗ ಮಾದೇಶ ನಾನು ಇವಾಗ ಮದುವೆಯಾಗಿದ್ದೀನಿ ಮೈ ಮೇಲೆ ದೇವರು ಬರುತ್ತಿಲ್ಲ ಎಂದ ಹೇಳಿ ಆತನನ್ನು ನಿರ್ಲಕ್ಷಿಸಿದ್ದ. ಮಾಡಿದ್ದ ಸಾಲಕ್ಕೆ ಇಎಂಐ ಕೂಡ ಕಟ್ಟಿರಲಿಲ್ಲ ಮಾದೇಶ್ಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.