Advertisement

Manipal: ‘ಉದಯವಾಣಿ’ ಸದಭಿರುಚಿಯ ಓದುಗರ ಸೃಷ್ಟಿಸಿದೆ: ಜಯಪ್ರಕಾಶ್‌

03:04 AM Dec 17, 2024 | Team Udayavani |

ಮಣಿಪಾಲ: ಎಂಬತ್ತರ ದಶಕದಲ್ಲಿ ಅಂದಿನ ಓದುಗರಿಗೆ ಕನ್ನಡ ಸಾಹಿತ್ಯ, ಸಮಾಜದ ಆಗುಹೋಗು, ಪ್ರಪಂಚದೆಲ್ಲೆಡೆ ಘಟಿಸಿದ ಘಟನೆಗಳನ್ನು ಮನೋಜ್ಞವಾಗಿ, ವಿಶ್ವಾಸಭರಿತವಾಗಿ ಉಣಬಡಿಸಿ ಸದಭಿರುಚಿಯ ಓದುಗರನ್ನು ಉದಯವಾಣಿ ಹಾಗೂ ಅದರ ಇತರ ಪುರವಣಿಗಳು ಸೃಷ್ಟಿಸಿವೆ ಎಂದು ಕೆನರಾ ಬ್ಯಾಂಕ್‌ ಮಣಿಪಾಲ ವೃತ್ತ ಕಚೇರಿಯ ಜನರಲ್‌ ಮ್ಯಾನೇಜರ್‌ ಜಯಪ್ರಕಾಶ್‌ ಸಿ. ಅಭಿಪ್ರಾಯಪಟ್ಟರು.

Advertisement

ಮಣಿಪಾಲದ ಉದಯವಾಣಿ ಪ್ರಧಾನ ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ “ಉದಯವಾಣಿ’ ಪ್ರಾಯೋಜಕತ್ವ ಮತ್ತು ಮಂಗಳೂರು ಲೇಡಿಹಿಲ್‌ನ ಎಸ್‌.ಎಲ್‌. ಶೇಟ್‌ ಡೈಮಂಡ್‌ ಹೌಸ್‌ ಸಹಯೋಗದಲ್ಲಿ ಆಯೋಜಿಸಿದ್ದ “ದೀಪಾವಳಿ ಧಮಾಕ-2024’ರ ಅದೃಷ್ಟಶಾಲಿಗಳನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಿ  ಮಾತನಾಡಿದರು.

ಪ್ರಸ್ತುತ ಎಲೆಕ್ಟ್ರಾನಿಕ್‌ ಮಾಧ್ಯಮಗಳ ಪ್ರವೇಶದಿಂದ ಪತ್ರಿಕೆ ಓದುಗರು ಸ್ವಲ್ಪಮಟ್ಟಿಗೆ ಬದಲಾಗಿದ್ದಾರೆ. ಆದರೆ ಉದಯವಾಣಿ ಪತ್ರಿಕೆಯು ತನ್ನ ಗುಣಮಟ್ಟ ಹಾಗೂ ನೈಜತೆಯನ್ನು ಆರಂಭದಿಂದಲೂ ಉಳಿಸಿಕೊಂಡು ಬಂದ ನೆಲೆಯಲ್ಲಿ ಓದುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದರು.
ಸಿಂಡಿಕೇಟ್‌ ಬ್ಯಾಂಕ್‌ ಮತ್ತು ಕೆನರಾ ಬ್ಯಾಂಕ್‌ಗಳ ಸಂಸ್ಥಾಪಕರ ಧ್ಯೇಯೋದ್ಧೇಶಗಳು ಒಂದೇ ಆಗಿತ್ತು. ಬ್ಯಾಂಕ್‌ಗಳ ವಿಲೀನದ ಅನಂತರವೂ ಎರಡೂ ಶಕ್ತಿಗಳು ಒಂದಾಗಿ ಮುಂದುವರಿಯುತ್ತಿವೆ. “ಉದಯವಾಣಿ’ ಜನರ ಕಷ್ಟ ಕಾರ್ಪಣ್ಯಗಳಿಗೆ ಧ್ವನಿಯಾಗಿ ನಿಂತರೆ, ಬ್ಯಾಂಕ್‌ಗಳು ಜನರ ಆಶೋತ್ತರ ಈಡೇರಿಕೆ, ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತ ಬಂದಿದೆ. ಮಣಿಪಾಲ ಸಮೂಹ ಸಂಸ್ಥೆಗಳಿಗೂ ಬ್ಯಾಂಕ್‌ಗೂ ನಿಕಟ ಸಂಬಂಧವಿದೆ ಎಂದು ಬಣ್ಣಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ಲಿ. ನ ಮ್ಯಾನೆಜಿಂಗ್‌ ಡೈರೆಕ್ಟರ್‌ ಮತ್ತು ಸಿಇಒ ವಿನೋದ್‌ ಕುಮಾರ್‌ ಮಾತನಾಡಿ, ದೀಪಾವಳಿ ವಿಶೇಷಾಂಕವು ಸಮಾಜದ ಸ್ಥಿತಿಗತಿಯ ಅವಲೋಕನ, ವಿಶೇಷತೆ, ಸದ್ವಿಚಾರಗಳ ಲೇಖನಗಳನ್ನು ಹೊತ್ತು ಗುಣಮಟ್ಟ ಕಾಯ್ದುಕೊಂಡು ಓದುಗರ ಕೈ ಸೇರಿದೆ. ಇದಕ್ಕೆ ಓದುಗರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮುಂದಿನ ವರ್ಷ ಇನ್ನೂ ಅತ್ಯುತ್ತಮವಾದ ಮಾದರಿಯಲ್ಲಿ ವಿಶೇಷಾಂಕವನ್ನು ಹೊರ ತರಲಾಗುವುದು ಎಂದರು.

ಮಣಿಪಾಲ ಮತ್ತು ಮುಂಬಯಿ ಆವೃತ್ತಿಯ ಸಂಪಾದಕ ಅರವಿಂದ ನಾವಡ ಪ್ರಸ್ತಾವನೆಗೈದು, ಓದುಗರ ಅಭಿರುಚಿಗೆ ತಕ್ಕಂತೆ ವಿವಿಧ ಕ್ಷೇತ್ರಗಳ ಪ್ರಚಲಿತ ವಿಚಾರಧಾರೆಗಳ ವಿಶೇಷಾಂಕವನ್ನು ಹೊರ ತರಲಾಗಿದೆ. ಖ್ಯಾತ ಬರಹಗಾರರ ಲೇಖನದ ಜತೆ ಉದಯೋನ್ಮುಖ ಓದುಗರಿಗೆ ಅವಕಾಶ ನೀಡಿ, ಕ್ಲಾಸಿಕ್‌ ಆಗಿ ವಿಶೇಷಾಂಕ ನೀಡಿ ಓದುಗರ ವಿಶ್ವಾಸಕ್ಕೆ ಪಾತ್ರರಾಗಿರುವುದು ಹೆಮ್ಮೆ ತಂದಿದೆ ಎಂದರು.

Advertisement

“ಉದಯವಾಣಿ’ಯ ಮ್ಯಾಗಝಿನ್‌ ಮತ್ತು ಸ್ಪೆಷಲ್‌ ಇನೀಶಿಯೇಟಿವ್ಸ್‌ನ ಉಪಾಧ್ಯಕ್ಷ ರಾಮಚಂದ್ರ ಮಿಜಾರು ಕಾರ್ಯಕ್ರಮ ನಿರೂಪಿಸಿ, ದೀಪಾವಳಿ ವಿಶೇಷಾಂಕ ಅತ್ಯಂತ ಬೇಡಿಕೆಯ ಪುರವಣಿಯಾಗಿದೆ. ಕಳೆದ 54 ವರ್ಷಗಳಿಂದ ಓದುಗರು ಜತನದಿಂದ ಸಂಗ್ರಹಿಸಿಡಬಲ್ಲ ಹೊತ್ತಗೆಯಾಗಿದೆ. ಈ ಬಾರಿ ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ಹೀಗೆ ಬಣ್ಣದ ಮೆರಗನ್ನು ನೀಡಿ ಅತೀ ಹೆಚ್ಚು ಓದುಗರನ್ನು ವಿಶೇಷಾಂಕ ತಲುಪಿದೆ. ದೀಪಾವಳಿ ಧಮಾಕ ಸ್ಪರ್ಧೆಯಲ್ಲಿ ಸುಮಾರು 2 ಲಕ್ಷ ರೂ. ಮೌಲ್ಯದ ಬಹುಮಾನಗಳಿವೆ. ಇದುವರೆಗೆ 1 ಕೋಟಿ ರೂ. ಮೌಲ್ಯದ ಉಡುಗೊರೆಗಳನ್ನು ಓದುಗರಿಗೆ ನೀಡಿದ್ದೇವೆ ಎಂದರು. ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ ಲಿಮಿಟೆಡ್‌ ಉಪಾಧ್ಯಕ್ಷ (ಪ್ರಸರಣ ಮತ್ತು ವ್ಯಾಪಾರ ಅಭಿವೃದ್ಧಿ ವಿಭಾಗ) ಸತೀಶ್‌ ಶೆಣೈ ವಂದಿಸಿದರು.

ಮಳಿಗೆಗಳಲ್ಲಿ ಪತ್ರಿಕೆ ನೇತಾಡುವುದನ್ನೇ ಕಾಯುತ್ತಿದ್ದೆ
ಬಾಲ್ಯದಿಂದಲೂ ಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಂಡಿದ್ದೆ. ಯೋಚನೆ ಮಾಡುವ ಶಕ್ತಿಯನ್ನು ಉದಯವಾಣಿ, ತರಂಗ, ರೂಪತಾರಾ, ತುಷಾರ, ತುಂತುರು ನೀಡುತ್ತಿದ್ದವು. ಅಂಗಡಿಗಳಲ್ಲಿ ಇವುಗಳು ಯಾವಾಗ ನೇತಾಡುತ್ತವೆ ಎಂಬುದನ್ನು ಕಾಯುತ್ತಿದ್ದೆವು. ವೃತ್ತಿ ನಿಮಿತ್ತ ಹರಿಯಾಣದಲ್ಲಿ ವಾಸವಿದ್ದಾಗ ಅಲ್ಲಿ ಕನ್ನಡ ಪತ್ರಿಕೆಗಳು ಸಿಗುತ್ತಿರಲ್ಲಿಲ್ಲ. ಆದರೆ ಕರ್ನಾಟಕಕ್ಕೆ ಬಂದಾಗ ತಪ್ಪದೇ ಉದಯವಾಣಿ, ತರಂಗ ವಿಶೇಷಾಂಕಗಳನ್ನು ಹುಡುಕಿ ಪಡೆದು ಓದುತ್ತಿದ್ದೆ ಎಂದು ಉದಯವಾಣಿ ಜತೆಗಿನ ಒಡನಾಟ ಮತ್ತು ಬಾಂಧವ್ಯವನ್ನು ಜಯಪ್ರಕಾಶ್‌ ಸಿ.  ನೆನಪಿಸಿಕೊಂಡರು.

ದೀಪಾವಳಿ ಧಮಾಕ ವಿಜೇತರು
ಬಂಪರ್‌ ಬಹುಮಾನ-ಎಂ. ಸುರೇಶ್‌ ಪೈ ಹೊಸಬೆಟ್ಟು ಮಂಜೇಶ್ವರ,
ಪ್ರಥಮ: ಜಿ.ಎಚ್‌. ರಾಯಪ್ಪ ಕಾವೂರು ಮಂಗಳೂರು ಮತ್ತು ಮಂಜುನಾಥ ಉಡುಪ ಗೋವಿಂದ ನಗರ ಬೆಂಗಳೂರು,

ದ್ವಿತೀಯ : ವರದ ಕುಮಾರಿ, ಚಿಟ್ಟೇರಿಮನೆ ಮೂಡುಬಿದಿರೆ, ಆದರ್ಶ ಹೆಬ್ಟಾರ್‌ ಕುಂದಾಪುರ, ಪದ್ಮಿನಿ ಹನಮಾನಸೆಂಗ ಹಡಾರಿ ಮುದ್ಗಲ್‌, ಲಿಂಗಸಗೂರು.

ತೃತೀಯ: ಸಂತೋಷ್‌ ವಿಷ್ಣು ಮಡಿವಾಳ ಕುಮಟಾ ಉತ್ತರ ಕನ್ನಡ, ಕೆ. ನಾರಾಯಣ ಆಚಾರ್ಯ ಬನ್ನೇರುಘಟ್ಟ ಬೆಂಗಳೂರು, ಶಾರದಾ ಕೆ. ಶೆಟ್ಟಿ ಗುಂಡಿಬೈಲು ಉಡುಪಿ, ವರ್ಷಿತಾ ಎಸ್‌. ಸುರತ್ಕಲ್‌.

ಪ್ರೋತ್ಸಾಹಕ ಬಹುಮಾನ : ಕೃಷ್ಣಪ್ರಸಾದ್‌ ಬಲ್ಲಾಳ್‌ ಅಂಬಲಪಾಡಿ ಉಡುಪಿ, ಶಶಿಕಲಾ ಎಲ್‌. ಭಟ್‌ ಮುಂಬಯಿ, ಶ್ರೀಯಾ ಜೋಯ್‌ ಮಣಿಪಾಲ, ಲತಾ ಎನ್‌. ಮೊಲಿ ಮೂಲ್ಕಿ, ಬಸವರಾಜ ಅಮರಪ್ಪ ಕಲಾಪಬಂಡಿ ಗದಗ, ರೇಷ್ಮಾ ಪುಷ್ಪರಾಜ್‌ ಬೊಂದೆಲ್‌ ಮಂಗಳೂರು, ಶಂಕರ ಹ. ಮುತಾಲಿಕ್‌ ದೇಸಾಯಿ ಚನ್ನಬಸವೇಶ್ವರ ನಗರ ಧಾರವಾಡ, ತೊಡಿಕಾ ಅಬ್ದುಲ್ಲಾ ಬಂಟ್ವಾಳ, ಆರ್‌. ಲಕ್ಷ್ಮಿಕಾಂತ್‌ ವಂಶಿ ತುಮಕೂರು, ವೀಣಾ ಕೆ. ದರ್ಬೆ ಪುತ್ತೂರು, ವಿಜಯೇಂದ್ರ ಕುಲಕರ್ಣಿ ಕಲಬುರಗಿ, ದೀಪ್ತಿ ಕೆ. ಕೊಳಂಬಳ ಬೆಳ್ಳಾರೆ, ಮೈಕ್ರಿ ಸುಹಾಸ್‌ ಮೈಸೂರು, ಅಕ್ಷತಾ ಅಡಿಂಜೆ ಬೆಳ್ತಂಗಡಿ, ವೀರೇಶ ಶಿವಮೋಗೆಪ್ಪ ಬಣಜಿಗ ಹಾವೇರಿ, ಸಂತೋಷ್‌ ಪೂಜಾರಿ ನಿಟ್ಟೆ ಕಾರ್ಕಳ, ಶ್ರೀಗೌರಿ ಎಚ್‌.ಆರ್‌. ಕೋಲಾರ, ಅಶ್ವಿ‌ತಾ ಕೆ. ಅಲಂಕಾರು ಕಡಬ, ಉದಯಚಂದ್ರ ಲಿಂ. ದಿಂಡವಾರ ಹುಬ್ಬಳ್ಳಿ, ಪಾರ್ವತಿ ರಮನಾಥ ಕೊಠಾರಿ ಕುಂದಾಪುರ.

Advertisement

Udayavani is now on Telegram. Click here to join our channel and stay updated with the latest news.

Next