Advertisement
ಮಕ್ಕಳ ದಿನಾಚರಣೆ ಅಂಗವಾಗಿ ಉದಯವಾಣಿಯು ಏರ್ಪಡಿಸಿದ್ದ ಮಕ್ಕಳ ಫೋಟೋ ಸ್ಪರ್ಧೆ “ಚಿಗುರು ಚಿತ್ರ – 2024′ ವಿಜೇತರಿಗೆ ಶುಕ್ರವಾರ ಮಣಿಪಾಲದಲ್ಲಿನ ಪ್ರಧಾನ ಕಚೇರಿಯಲ್ಲಿ ನಡೆದ ಬಹುಮಾನ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಹೆತ್ತವರು ಮೊಬೈಲ್ ಗೀಳಿಗೆ ಬಿದ್ದು ಮಕ್ಕಳ ಮೇಲಿನ ನಿಗಾ ಕಳೆದುಕೊಳ್ಳ ಬಾರದು. ಮಕ್ಕಳು ತಮ್ಮ ಆಸಕ್ತಿಯ ವಿಷಯದಲ್ಲಿ ಮುಂದುವರಿಯಲು ಪ್ರೋತ್ಸಾಹಿಸಬೇಕು.
Related Articles
ಉದಯವಾಣಿ ಸಂಪಾದಕ ಅರವಿಂದ ನಾವಡ ಪ್ರಸ್ತಾವನೆಗೈದು, ಮಾಧ್ಯಮ ಲೋಕದಲ್ಲಿ ಸ್ಪರ್ಧೆಯ ಪರಿಕಲ್ಪನೆ ಇಲ್ಲದಾಗ ಆರಂಭಿಸಿದ ಸ್ಪರ್ಧೆ ಇದು. ಆರು ಸಾವಿರಕ್ಕಿಂತಲೂ ಅಧಿಕ ಚಿತ್ರಗಳು ಸ್ಪರ್ಧೆಗೆ ಬಂದಿದ್ದವು. ಇತ್ತೀಚೆಗೆ ಗ್ರಾಮೀಣ ಭಾಗದಿಂದಲೂ ಅತ್ಯಧಿಕ ಮಂದಿ ಓದುಗರು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದು ಅತ್ಯಂತ ಸಂತೋಷದಾಯಕವಾದ ವಿಷಯ ಎಂದರು.
Advertisement
ಉದಯವಾಣಿಯ ಮ್ಯಾಗಝಿನ್ ಮತ್ತು ಸ್ಪೆಷಲ್ ಇನೀಶಿಯೇಟಿವ್ಸ್ನ ಉಪಾಧ್ಯಕ್ಷ ರಾಮಚಂದ್ರ ಮಿಜಾರು ಕಾರ್ಯಕ್ರಮ ನಿರೂಪಿಸಿ, 54 ವರ್ಷಗಳಿಂದ ಓದುಗರನ್ನು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಮಾಡಿ ಉದಯವಾಣಿ ಪತ್ರಿಕೆಯು ವೇದಿಕೆ ಕಲ್ಪಿಸಿದೆ. ವಿವಿಧ ಆಯಾಮಗಳನ್ನು ದಾಟಿ ಬಂದ ಚಿಗುರುಚಿತ್ರ ಸ್ಪರ್ಧೆಯು ಅಂದಿನಿಂದ ಇಂದಿನವರೆಗೂ ಮಗು ಮತ್ತು ಮಗುವಿನ ನಗುವಿನೊಂದಿಗೆ ಸಾಕಾರಗೊಳ್ಳುತ್ತಿದೆ ಎಂದರು.
ಉಡುಪಿ ಜಿಲ್ಲಾ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಧಾಕೃಷ್ಣ ಭಟ್ ಕೊಡವೂರು ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಉದಯವಾಣಿಯ ಸ್ಥಾನಿಕ ಸಂಪಾದಕ ಕೃಷ್ಣ ಭಟ್ ಅಳದಂಗಡಿ ಸ್ವಾಗತಿಸಿದರು. ಮಾನವ ಸಂಪನ್ಮೂಲ ವಿಭಾಗದ ಹಿರಿಯ ವ್ಯವಸ್ಥಾಪಕಿ ಉಷಾರಾಣಿ ಕಾಮತ್ ವಂದಿಸಿದರು.
ಆಯ್ಕೆಯಲ್ಲಿ ಪಾರದರ್ಶಕತೆ: ವಿನೋದ್ ಕುಮಾರ್ಮಣಿಪಾಲ ಮೀಡಿಯಾ ನೆಟ್ವರ್ಕ್ ಲಿ.ನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಒ ವಿನೋದ್ ಕುಮಾರ್ ಮಾತನಾಡಿ, ಮಕ್ಕಳ ಪ್ರತಿಯೊಂದು ಚಿತ್ರಗಳ ಹಿಂದೆ ಉತ್ತಮ ಕಲ್ಪನೆ, ಮುಗ್ಧತೆ, ತಾಜಾತನ ಇರುತ್ತದೆ. ಛಾಯಾಚಿತ್ರ ತೆಗೆದುಕೊಳ್ಳುವ ಸಂದರ್ಭದಲ್ಲಿ ಹೆತ್ತವರ ತಾಳ್ಮೆಯನ್ನೂ ಮೆಚ್ಚಬೇಕಾಗುತ್ತದೆ. ಪಾರದರ್ಶಕತೆ ಮೂಲಕ ವಿಜೇತರ ಆಯ್ಕೆ ನಡೆದಿದ್ದು, ಇದರ ಹಿಂದೆ ತೀರ್ಪುಗಾರರ ಶ್ರಮವೂ ಅಪಾರವಾಗಿದೆ ಎಂದರು. ವಿಜೇತರ ವಿವರ
ಪ್ರಥಮ: ಜಾಹ್ನವಿ ಸಚಿನ್ ಕೌಸ್ತುಭ ಚೇಳೂರು, ದ್ವಿತೀಯ: ಲ್ಯಾನ್ನಾ ರುತ್ ಕಾನ್ಸೆಸ್ಸೋ ಮಂಗಳೂರು, ತೃತೀಯ: ಸಾಚಿ ಎಸ್.ಕಾಂಚನ್ ಕುಂದಾಪುರ, ಚರಿತ್ ಎಸ್.ಪ್ರಭು ಪರ್ಕಳ, ಲಿಖಿತಾ ಶೆಟ್ಟಿ ಕಾರ್ಕಳ, ಧೃತಿ ಎಚ್.ಆರ್. ಸುಳ್ಯ, ಸ್ಮಹೀ ಸಿ.ಗೌಡ ಬೆಳ್ತಂಗಡಿ, ವಿಧಾತ್ರಿ ವಿ.ಭಟ್ ಕಾಪು. ʼಮಕ್ಕಳಿಗಾಗಿ ಉದಯವಾಣಿ ಪತ್ರಿಕೆ ವಿವಿಧ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುತ್ತಿ ರುವುದು ಸಂತೋಷದ ಸಂಗತಿ. ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿಸಲು ಇಂತಹ ಸ್ಪರ್ಧೆಗಳು ನೆರವಾಗಲಿದೆ.ʼ -ಗಾಯತ್ರಿ, ಚೇಳೂರು (ಪ್ರಥಮ ಬಹುಮಾನ ವಿಜೇತ ಮಗುವಿನ ತಾಯಿ)