Advertisement

ವನಿತಾ ಯೂತ್‌ ವಿಶ್ವ ಬಾಕ್ಸಿಂಗ್‌: ಭಾರತಕ್ಕೆ ಐದು ಪದಕ ಖಚಿತ

10:12 AM Nov 23, 2017 | Team Udayavani |

ಗುವಾಹಾಟಿ: ಭಾರತೀಯ ಬಾಕ್ಸರ್‌ಗಳು ಇಲ್ಲಿ ನಡೆಯುತ್ತಿರುವ ಎಐಬಿಎ ವನಿತಾ ಯೂತ್‌ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ನಿರ್ವಹಣೆ  ನೀಡುತ್ತಿದ್ದು ಐದು ಪದಕ ಗೆಲ್ಲುವುದನ್ನು ಖಚಿತಗೊಳಿಸಿದ್ದಾರೆ. 

Advertisement

ಜ್ಯೋತಿ ಗೂಲಿಯ (51 ಕೆ.ಜಿ.) ಶಶಿ ಚೋಪ್ರಾ (57 ಕೆ.ಜಿ.) ಮತ್ತು ಅಂಕುಶಿತಾ ಬೊರೊ (64 ಕೆ.ಜಿ.) ಅವರು ತಮ್ಮ ಕ್ವಾರ್ಟರ್‌ಫೈನಲ್‌ ಹೋರಾಟಗಳಲ್ಲಿ ಜಯ ಸಾಧಿಸಿ ಸೆಮಿಫೈನಲಿಗೇರುವ ಮೂಲಕ ಪದಕ ದೃಢಪಡಿಸಿದ್ದಾರೆ. ಈ ಮೊದಲು ನೇಹಾ ಯಾದವ್‌ (+81 ಕೆ.ಜಿ.) ಮತ್ತು ಅನುಪಮಾ (81 ಕೆ.ಜಿ.) ವಿಭಾಗದಲ್ಲಿ ಸೆಮಿಫೈನಲ್‌ ತಲುಪಿ ಪದಕ ಗೆಲ್ಲುವುದನ್ನು ಖಚಿತಪಡಿಸಿದ್ದರು.  ಆದರೆ ನಿಹಾರಿಕಾ ಗೊನೆಲ್ಲಾ 75 ಕೆ.ಜಿ. ವಿಭಾಗದಲ್ಲಿ ಇಂಗ್ಲೆಂಡಿನ ಜಾರ್ಜಿಯಾ ಓ’ಕಾನರ್‌ ಅವರಿಗೆ ಶರಣಾಗಿ ಪದಕ ರೇಸ್‌ನಿಂದ ಹೊರಬಿದ್ದರು. 

ಮೊದಲಾಗಿ ಸ್ಪರ್ಧೆ ಆರಂಭಿಸಿದ ಜ್ಯೋತಿ ಗೂಲಿಯ ಇಟೆಲಿಯ ಗ್ಲೋವಾನ್ನಾ ಮಾರ್ಚೆಸೆ ಅವರನ್ನು ಎದುರಿಸಿ ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಚಿನ್ನ ಗೆದ್ದಿರುವ ಹರಿಯಾಣದ ಜ್ಯೋತಿ ಆಕ್ರಮಣಕಾರಿಯಾಗಿ ಆಡಿ 5-0 ತೀರ್ಪಿನೊಂದಿಗೆ ಅವಿರೋಧವಾಗಿ ಗೆಲುವು ಒಲಿಸಿಕೊಂಡರು. ಭಾರತದಲ್ಲಿ ಇದೇ ಮೊದಲ ಬಾರಿ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ 38 ದೇಶಗಳ 150ಕ್ಕಿಂತ ಹೆಚ್ಚಿನ ಬಾಕ್ಸರ್‌ಗಳು ಭಾಗವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next