Advertisement
ಈ ಸರಣಿಯಲ್ಲಿ 2 ಟೆಸ್ಟ್ ಪಂದ್ಯಗಳು ನಡೆಯಲಿದ್ದು, ಒಂದನ್ನು ಗೆದ್ದು ಇನ್ನೊಂದನ್ನು ಡ್ರಾ ಮಾಡಿಕೊಂಡರೂ ದಕ್ಷಿಣ ಆಫ್ರಿಕಾ ಫೈನಲ್ ಪ್ರವೇಶ ಬಹುತೇಕ ಖಚಿತಗೊಳ್ಳಲಿದೆ. ಸದ್ಯ ದಕ್ಷಿಣ ಆಫ್ರಿಕಾ ಅಗ್ರಸ್ಥಾನ ಅಲಂಕರಿಸಿದ್ದು, ಆಸ್ಟ್ರೇಲಿಯ ಮತ್ತು ಭಾರತ 2ನೇ ಹಾಗೂ 3ನೇ ಸ್ಥಾನದಲ್ಲಿವೆ.
ಟೆಂಬ ಬವುಮ ಪಡೆ ಪಾಕ್ ಮೇಲೆ ಬೌಲಿಂಗ್ ದಾಳಿಯನ್ನು ತೀವ್ರಗೊಳಿಸಲು ನಾಲ್ವರು ವೇಗಿಗಳನ್ನೇ ನೆಚ್ಚಿಕೊಂಡಿದೆ. ಇವರೆಂದರೆ ಕಾಗಿಸೊ ರಬಾಡ, ಮಾರ್ಕೊ ಜಾನ್ಸೆನ್, ಡೇನ್ ಪೀಟರ್‌ಸನ್ ಮತ್ತು 140 ಕಿ.ಮೀ. ವೇಗವನ್ನು ಕಾಯ್ದುಕೊಳ್ಳಬಲ್ಲ ಕಾರ್ಬಿನ್ ಬಾಶ್. ಆದರೆ ಪಾಕಿಸ್ಥಾನ ಸ್ಪಿನ್ ದಾಳಿಯನ್ನು ನೆಚ್ಚಿಕೊಂಡಿದೆ. ಕಳೆದ ಏಕದಿನ ಸರಣಿಯಲ್ಲಿ ಪ್ರವಾಸಿಗರ ಸ್ಪಿನ್ ಮರ್ಮವನ್ನು ಅರಿಯಲು ದಕ್ಷಿಣ ಆಫ್ರಿಕಾ ಬ್ಯಾಟರ್ ಸಂಪೂರ್ಣ ವಿಫಲರಾಗಿದ್ದರು. ಪರಿಣಾಮ 3-0 ವೈಟ್‌ವಾಶ್!
ಈ ಕುರಿತು ಪ್ರತಿಕ್ರಿಯಿಸಿರುವ ನಾಯಕ ಟೆಂಬ ಬವುಮ, “ಈ ಸರಣಿಯಲ್ಲಿ ನಮಗೆ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶದ ಒತ್ತಡವಿದೆ. ಆದರೆ ಈ ಸರಣಿಯನ್ನು 2-0 ಅಂತರದಿಂದ ಗೆಲ್ಲುವ ಎಲ್ಲ ವಿಶ್ವಾಸ ನಮಗಿದೆ’ ಎಂದಿದ್ದಾರೆ. 1995ರಿಂದೀಚೆ ದಕ್ಷಿಣ ಆಫ್ರಿಕಾದಲ್ಲಿ 15 ಟೆಸ್ಟ್ ಆಡಿರುವ ಪಾಕಿಸ್ಥಾನ 12ರಲ್ಲಿ ಸೋಲನುಭವಿಸಿದೆ, ಎರಡನ್ನಷ್ಟೇ ಗೆದ್ದಿದೆ.