Advertisement

World Chess Championship: ಪೈಪೋಟಿ ತೀವ್ರ

09:38 PM Dec 07, 2024 | Team Udayavani |

ಸಿಂಗಾಪುರ: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ 10ನೇ ಪಂದ್ಯವೂ ಡ್ರಾಗೊಂಡಿದೆ. ಡಿ. ಗುಕೇಶ್‌ ಮತ್ತು ಡಿಂಗ್‌ ಲಿರೆನ್‌ ತಲಾ 5 ಅಂಕಗಳೊಂದಿಗೆ ಮುಂದುವರಿದಿದ್ದಾರೆ.

Advertisement

ಕಪ್ಪು ಕಾಯಿಗಳೊಂದಿಗೆ ಆಡಿದ ಗುಕೇಶ್‌ ಸುಲಭವಾಗಿ ಡ್ರಾ ಮಾಡಿಕೊಂಡರು. ಅವರು ಲಂಡನ್‌ ಗೇಮ್‌ ಮಾದರಿಯಲ್ಲಿ ಆಟ ಆರಂಭಿಸಿದರು. ಇನ್ನೊಂದು ಕಡೆ ಲಿರೆನ್‌ ಕೂಡ ಡ್ರಾದಿಂದ ಸಂತೋಷಪಟ್ಟರು. ಇಲ್ಲಿಗೆ ಈ ಸರಣಿಯಲ್ಲಿ ಸತತ 7ನೇ ಹಾಗೂ ಒಟ್ಟಾರೆ 8ನೇ ಪಂದ್ಯ ಡ್ರಾಗೊಂಡಂತಾಯಿತು.

ಕೂಟದ ವಿಜೇತರನ್ನು ನಿರ್ಧರಿಸುವುದಕ್ಕೆ ಇನ್ನು ಕೇವಲ 4 ಪಂದ್ಯಗಳು ಬಾಕಿ ಉಳಿದಿವೆ. ಈ ಪಂದ್ಯಗಳಲ್ಲಿ ಮೊದಲು 7.5 ಅಂಕ ಗಳಿಸುವವರು ಚಾಂಪಿಯನ್‌ ಆಗುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next