ಒಂದು ಮಗು ಹುಟ್ಟಿ ಬೆಳೆದು ಶಾಲೆಗೆ ಹೋಗಲು ಆರಂಭಿಸಿದಾಗ ಅಲ್ಲಿ ಸಿಗುವ ಪಾಠಕ್ಕಿಂತ ಅಮೂಲ್ಯ ವಾದದ್ದು ಗೆಳೆತನ. ಸಿಗುವುದು ಹೆಚ್ಚು. ಮತ್ತು ಅದು ನಿಜವೇ ಆಗಿದ್ದರೆ ಯಾರಿಂದಲೂ ಅದನ್ನ ಮುರಿಯಲು ಸಾಧ್ಯವಾಗುವುದಿಲ್ಲ. ಹಾಗೆಂದು ಗೆಳೆತನ ಯಾವಾಗ ಎಲ್ಲಿ ಹೇಗೆ ಆರಂಭವಾಗುತ್ತದೆ ಎಂದು ಯಾರಿಗೂ ತಿಳಿಯದು.
ಆದರೆ ಅದಕ್ಕಿರುವ ಶಕ್ತಿ ಅಪೂರ್ವ. ಅನೇಕ ಬಾರಿ ನಾವು ಸಂಕಷ್ಟದಲ್ಲಿರುವಾಗ ತಂದೆ ತಾಯಿಯ ಮೊದಲು ಸ್ನೇಹಿತರಿಗೆ ಯಾವ ಮುಜುಗರವಿಲ್ಲದೆ ಹೇಳಿಕೊಳ್ಳುತ್ತೇವೆ.
ಆ ಕಷ್ಟಕ್ಕೆ ಸ್ನೇಹಿತರೆ ಸ್ಪಂದಿಸುತ್ತಾರೆ ಇದೆ ಅಲ್ಲವೇ ನಿಜವಾದ ಸ್ನೇಹ. ಹಿರಿಯರು ಅಷ್ಟೇ, ತಮ್ಮ ಮಕ್ಕಳ ಜೊತೆ ಒಳ್ಳೆಯ ಗೆಳೆಯರಿದ್ದಾರೆ ಎಂದಾದರೆ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ.
ನಿಜವಾದ ಗೆಳೆಯರೆಂದರೆ ನಮ್ಮ ಹಣ, ಆಸ್ತಿ, ಮತ್ತು ಸಂಪತ್ತುಗಳು ಮತ್ತು ನಾವು ಖುಷಿಯಲ್ಲಿದ್ದಾಗ ನಮ್ಮ ಜೊತೆ ನಿಲ್ಲುವವರಲ್ಲ. ಅದರ ಬದಲಾಗಿ ದುಃಖದಲ್ಲಿದ್ದಾಗ, ನಮ್ಮ ಪರಿಸ್ಥಿತಿ ಅರ್ಥ ಮಾಡಿಕೊಂಡು ಕೈಲಾದಷ್ಟು ನೆರವಾಗುವವನೇ ನಿಜವಾದ ಗೆಳೆಯ. ಅಂತಹ ಒಬ್ಬ ಗೆಳೆಯ ಸ್ನೇಹಿತ ಸಿಕ್ಕರೆ ಸಾಕು ನಾವು ಪುಣ್ಯವಂತರು ಎಂದು ಹೇಳಬಹುದು. ನಮ್ಮ ಮುಖದಲ್ಲಿ ಸ್ವಲ್ಪ ನಗು ಇದ್ದರೆ ಅದಕ್ಕೆ ಕಾರಣೀಕರ್ತರೆ ಸ್ನೇಹಿತರಿಂದ ಮಾತ್ರ ಸಾಧ್ಯ. ಗೆಳೆತನ ಎಂಬುದು ಸ್ವಾಘಿìವಿಲ್ಲದ ಒಂದು ನಿಷ್ಕಲ್ಮಶ ಬಾಂಧವ್ಯ. ಜೀವನದಲ್ಲಿ ಖುಷಿಯಾಗಿರುವ ಒಂದು ಕ್ಷಣ ಅಂದ್ರೆ ಮಾತ್ರ ಅದು ನಮ್ಮ ಸ್ನೇಹಿತರೊಡನೆ ಮಾತ್ರ. ಜಾತಿ ಧರ್ಮ ಸ್ನೇಹದಲ್ಲಿ ಯಾವುದು ಬರುವುದಿಲ್ಲ. ಕಷ್ಟ ಸುಖ ಅನ್ನೋದು ಮಾತ್ರ ಬರುತ್ತದೆ. ಸ್ವಂತ ಅಣ್ಣ ತಮ್ಮಂದಿರಂತೆ ಸ್ನೇಹ ವಿರುತ್ತದೆ. ಸ್ನೇಹಿತ ಅನ್ನುವುದು ನಮಗೆ ಒಂದು ಆತ್ಮಸ್ಥೆರ್ಯ ಕಷ್ಟದಲ್ಲಿದ್ದಾಗ ಸಹಾಯ ಮಾಡುವ ಕೈ ಅದುವೇ ನಿಜವಾದ ಗೆಳೆತನ ಖುಷಿಯಲ್ಲಿದ್ದಾಗ ಬರುವ ನೂರು ಸ್ನೇಹಿತರಿಗಿಂತ, ನಾವು ಸೋತಾಗ ಬರುವ ಒಬ್ಬ ಸ್ನೇಹಿತ ನಮ್ಮ ಗೆಳೆಯನಾಗಿರುತ್ತಾನೆ. ಸ್ನೇಹಿತರಿಂದ ಉತ್ತಮ ಬದುಕು, ಹೊಸ ಹೊಸ ಅನುಭವ, ಸ್ನೇಹಿತರಿಂದ ಮಾತ್ರ ಸಿಗುತ್ತದೆ, ಜಗತ್ತಿನಲ್ಲಿ ಏನೇ ದೊರೆತರೂ ನಮಗೆ ಖುಷಿಯಾಗುವುದಿಲ್ಲ ಸ್ನೇಹಿತ ಅನ್ನುವ ಒಂದು ವ್ಯಕ್ತಿ ಇದ್ದರೆ ಸಾಕು ಹಿಡಿ ಬದುಕೆ ಸುಂದರವಾಗಿರುತ್ತದೆ. ಯಾವುದೇ ನಿಷ್ಕಲ್ಮಶ ಸ್ವಾಘಿವಿಲ್ಲದ ಗೆಳೆತನವೇ ನಿಜವಾದ ಸ್ನೇಹ….
-ರತ್ನಾಂಜಲಿ ವಾಲಿಕಾರ
ವಿ.ವಿ. ವಿಜಯಪುರ