ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಅಮೆರಿಕಾವನ್ನೂ ನಲುಗಿಸಿರುವ ಕೋವಿಡ್-19 ವೈರಸ್ ಗೆ 3,000ಕ್ಕಿಂತ ಹೆಚ್ಚು ಜನರು ಬಲಿಯಾಗಿದ್ದಾರೆ. ನ್ಯೂಯಾರ್ಕ್ ನಗರ ಕೂಡ ಅಕ್ಷರಶಃ ಕುಸಿದು ಬಿದ್ದಿದ್ದು ಸೋಂಕಿತರ ಪ್ರಮಾಣದ ಏರಿಕೆಯಾಗುತ್ತಲೇ ಇದೆ.
ಸೋಮವಾರ ಅಮೆರಿಕಾದಲ್ಲಿ ಈ ಮಾರಕ ವೈರಸ್ ಗೆ 540 ಜನರು ಬಲಿಯಾಗಿದ್ದು, ಒಟ್ಟಾರೆ ಸಾವಿನ ಪ್ರಮಾಣ 3,165ಕ್ಕೆ ಏರಿಕೆಯಾಗಿದೆ. ಆ ಮೂಲಕ ದೇಶದಲ್ಲಿ 1,64,253 ಸೋಂಕಿಗೆ ಒಳಗಾಗಿದ್ದಾರೆಂದು ರಾಯಿಟರ್ಸ್ ವರದಿ ಮಾಡಿದೆ.
ದುರದೃಷ್ಟವೆಂದರೇ ಸೋಂಕಿತರ ಪ್ರಮಾಣ ಇತರ ದೇಶಗಳಿಗಿಂತ ಅಮೆರಿಕಾದಲ್ಲೇ ಹೆಚ್ಚಿದೆ. 1 ಮಿಲಿಯನ್ ಗಿಂತಲೂ ಹೆಚ್ಚು ಜನರು ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದಾರೆಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಇದು ದೇಶದ ಜನಸಂಖ್ಯೆ 3% ಮಾತ್ರ ಆಗಿರುವುದು ಬೆಚ್ಚಿ ಬೀಳಿಸುವ ಅಂಶ ಎಂದು ಮಾಧ‍್ಯಮದ ವರದಿ ತಿಳಿಸಿದೆ.
ನ್ಯೂಯಾರ್ಕ್ ನ ನಂತರ ಕ್ಯಾಲಿಫೋರ್ನಿಯಾದಲ್ಲಿ ಕೋವಿಡ್-19 ಅಟ್ಟಹಾಸ ಮೆರಯುತ್ತಿದ್ದು ಜನರು ಕಂಗಾಲಾಗಿದ್ದಾರೆ. ಸೋಂಕಿತರ ಪ್ರಮಾಣ ಕೂಡ ದಿನೇ ದಿನೇ ದ್ವಿಗುಣಗೊಳ್ಳುತ್ತಿದೆ.