Advertisement
ಬಂಧಿತ ಮಹಿಳೆಯನ್ನು ಬ್ರಿಯಾನ್ನಾ ಅಲ್ವೆಲೋ(22) ಎಂದು ಗುರುತಿಸಲಾಗಿದೆ.
ಕಳೆದ ಭಾನುವಾರ(ಡಿ.22) ಫ್ಲೋರಿಡಾದ ಹೋಟೆಲ್ ಒಂದರಲ್ಲಿ ನಡೆದಿದ್ದು, ಮಹಿಳೆಯೊಬ್ಬರು ತನ್ನ ಪತಿ, ಹಾಗೂ ಐದು ವರ್ಷದ ಮಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಹೋಟೆಲ್ ಗೆ ಬಂದಿದ್ದರು ಈ ವೇಳೆ ಪಿಜ್ಜಾ ಆರ್ಡರ್ ಮಾಡಿದ್ದಾರೆ, ಆರ್ಡರ್ ಮಾಡಿದ ಕೆಲ ಹೊತ್ತಿನಲ್ಲೇ ಪಿಜ್ಜಾ ಡೆಲಿವರಿ ಮಹಿಳೆ ಹೋಟೆಲ್ ಗೆ ಬಂದು ಪಿಜ್ಜಾ ಡೆಲಿವರಿ ಮಾಡಿದ್ದಾಳೆ ಈ ವೇಳೆ ಹೋಟೆಲ್ ನಲ್ಲಿ ತಂಗಿದ್ದ ಮಹಿಳೆ ಡೆಲಿವರಿ ಮಹಿಳೆಗೆ ಟಿಪ್ಸ್ ಎಂದು ಸಣ್ಣ ಮೊತ್ತ ನೀಡಿದ್ದಾರೆ ಇದು ಆಕೆಗೆ ಕಡಿಮೆ ಆಯಿತೆಂದು ಹೆಚ್ಚು ಕೊಡುವಂತೆ ಕೇಳಿಕೊಂಡಿದ್ದಾಳೆ ಆದರೆ ಮಹಿಳೆ ಕೊಡಲು ಒಪ್ಪಲಿಲ್ಲ, ಇದರಿಂದ ಕೋಪಗೊಂಡ ಡೆಲಿವರಿ ಮಹಿಳೆ ಸಿಟ್ಟಿನಿಂದ ಅಲ್ಲಿಂದ ಹೊರಡುತ್ತಾಳೆ ರಾತ್ರಿ ಸುಮಾರು ಹತ್ತು ಗಂಟೆಯ ಸುಮಾರಿಗೆ ತನ್ನ ಮುಸುಕುಧಾರಿ ಸಹಚರನೊಂದಿಗೆ ಮಹಿಳೆ ಇರುವ ಹೋಟೆಲ್ ಗೆ ಚಾಕು ಸಹಿತ ಬಂದು ಹೋಟೆಲ್ ಬೆಲ್ ಒತ್ತಿ ಮಹಿಳೆ ಬಾಗಿಲು ತೆರೆಯುತ್ತಿದ್ದಂತೆ ಚಾಕುವಿನಿಂದ ಗರ್ಭಿಣಿ ಮಹಿಳೆಗೆ ಮನಬಂದಂತೆ ಚುಚ್ಚಿ ಸ್ಥಳದಿಂದ ಪರಾರಿಯಾಗುತ್ತಾರೆ, ದಾಳಿಯ ಸಂದರ್ಭದಲ್ಲಿ, ಗರ್ಭಿಣಿ ಮಹಿಳೆ ತನ್ನ ಐದು ವರ್ಷದ ಮಗಳನ್ನು ದಾಳಿಕೋರರಿಂದ ರಕ್ಷಿಸಲು ಯತ್ನಿಸುತ್ತಾಳೆ ಆದರೆ ದಾಳಿಕೋರರು ಆಕೆಯ ಬೆನ್ನಿನ ಮೇಲೂ ಹಲ್ಲೆ ನಡೆಸಿದ್ದಾರೆ. ಬಳಿಕ ಸಹಾಯಕ್ಕಾಗಿ ಕರೆ ಮಾಡಲು ಪ್ರಯತ್ನಿಸಿದ್ದಾಳೆ ಆದರೆ ಆರೋಪಿ ಅಲ್ವೆಲೋ ಮಹಿಳೆಯ ಕೈಯಿಂದ ಫೋನ್ ಅನ್ನು ಕಿತ್ತುಕೊಂಡು ಪರಾರಿಯಾಗುತ್ತಾಳೆ. ಇದಾದ ಬಳಿಕ ಪತಿ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಸ್ಥಳಕ್ಕೆ ಬಂದ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಗರ್ಭಿಣಿ ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದ್ದಾರೆ ಸದ್ಯ ಮಹಿಳೆಯ ಅರೋಗ್ಯ ಸ್ಥಿತಿ ಸ್ಥಿರವಾಗಿದ್ದು ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧಾರದಲ್ಲಿ ಪ್ರಮುಖ ಆರೋಪಿ ಬ್ರಿಯಾನ್ನಾ ಅಲ್ವೆಲೋ ನನ್ನು ಬಂಧಿಸಿದ್ದು, ಸಹಚರ ತಲೆಮರೆಸಿಕೊಂಡಿದ್ದು ಆತನ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.
Related Articles
Advertisement
ಇದನ್ನೂ ಓದಿ: Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…