ಜಯಪ್ರಕಾಶ ಶೆಟ್ಟಿ ಅವರ ಅಂದಿನ ದಿನಗಳನ್ನು ಸಹೋದರಿ ಸಬಿತಾ ಆರ್. ಹೆಗ್ಡೆ ಹೀಗೆ ನೆನಪಿಸಿಕೊಂಡಿದ್ದಾರೆ: ಜಯ ಪ್ರಕಾಶ ಅವರು ಉಡುಪಿ ಎಂಜಿಎಂ ಕಾಲೇಜಿನಲ್ಲಿ ಬಿಎ ವ್ಯಾಸಂಗ ಮಾಡು ವಾಗಲೇ ವಿಭಿನ್ನವಾಗಿ ಗುರುತಿಸಿಕೊಂಡ ವರು. ಶ್ರೀಮಂತರೆಲ್ಲ ಕಾರಿನಲ್ಲಿ ಬರು ತ್ತಿದ್ದಾಗ ಇವರು ಎತ್ತಿನಗಾಡಿಯಲ್ಲಿ ಕಾಲೇಜಿಗೆ ಹೋಗುತ್ತಿದ್ದರು. ಮಳೆಗಾಲ ದಲ್ಲಿ ಓಲೆ ಕೊಡೆಯೊಂದಿಗೆ ಕಾಲೇಜಿಗೆ ತೆರಳಿ ಎಲ್ಲರ ಗಮನ ಸೆಳೆಯುತ್ತಿದ್ದರು. ಪ್ರತಿ ವಿಚಾರದಲ್ಲೂ ಧೈರ್ಯದಿಂದ ವಿಭಿನ್ನ ವಾಗಿ ಮುನ್ನಡೆಯುವ ಗುಣ ಹೊಂದಿದ್ದ ಅವರಲ್ಲಿ ಸಣ್ಣಪುಟ್ಟ ಕೀಟಲೆಗಳಿಗೇನೂ ಕಡಿಮೆ ಇರಲಿಲ್ಲ. ಪರಿಣಾಮ ದ್ವಿತೀಯ ವರ್ಷದಲ್ಲೇ ಟಿ.ಸಿ. ದೊರೆಯಿತು! ಮಂಗಳೂರು ವಿ.ವಿ. ಕಾಲೇಜಿನಲ್ಲಿ ಪದವಿ ಪೂರೈಸಿದರು. ಬಳಿಕ ಉಡುಪಿ ಯಲ್ಲಿ ಎಲ್‌ಎಲ್‌ಬಿ ಮುಗಿಸಿ ವೃತ್ತಿಯಲ್ಲಿ ತೊಡಗಿದರು.
Advertisement
ಹಠಾತ್ ಶಾಸಕ ಅಭ್ಯರ್ಥಿ ಅದುವರೆಗೆ ರಾಜಕೀಯ ಕಡೆ ಮುಖ ಮಾಡಿರದ ಶೆಟ್ಟಿ ಅವರು 1967ರಲ್ಲಿ ವಿಧಾನ ಸಭೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಿಂತರು. ಕಾಲೇಜು ದಿನಗಳಲ್ಲಿ ಅವರ ಚಟುವಟಿಕೆಗಳನ್ನು ಗಮನಿಸಿದ್ದ ಯುವ ಜನತೆ ಹುಚ್ಚೆದ್ದರು. ಪ್ರಬಲ ಅಭ್ಯರ್ಥಿ ಕಾಂಗ್ರೆಸ್‌ನ ಎಸ್.ಡಿ. ಪಿಂಟೊ ಅವರನ್ನು ಮಣಿಸಿದರು. ಅದೂ ರಾಜ್ಯದ 2ನೇ ಗರಿಷ್ಠ ಅಂತರದಲ್ಲಿ (12,500ಕ್ಕೂ ಮಿಕ್ಕಿದ ಮತ) ವಿಜಯಿಯಾದರು.
Related Articles
Advertisement