Advertisement

ಅಕ್ರಮ ವಲಸಿಗರ ಗಡೀಪಾರು ನಿರ್ಧಾರಕ್ಕೆ ವಿಶ್ವಸಂಸ್ಥೆ ಕಳವಳ

08:40 AM Aug 16, 2017 | |

ವಿಶ್ವಸಂಸ್ಥೆ: ಒಮ್ಮೆ ಒಂದು ದೇಶ ತಮಗೆ ಕಿರುಕುಳ ನೀಡುತ್ತಿದೆ, ಅಲ್ಲಿ ತಾವು ಸುರಕ್ಷಿತವಾಗಿಲ್ಲ ಎಂದು ಮನಗಂಡು ಆ ದೇಶದಿಂದ ಬಂದ ವಲಸಿಗರನ್ನು ಮತ್ತೆ ಅದೇ ದೇಶಕ್ಕೆ ಹೋಗಿ ಎಂದು ಹೇಳುವುದು ಸರಿಯಲ್ಲ ಎಂದು ವಿಶ್ವಸಂಸ್ಥೆ ಅಭಿಪ್ರಾಯಪಟ್ಟಿದೆ.

Advertisement

ರೋಹಿಂಗ್ಯಾ ವಲಸಿಗರನ್ನು ಗಡೀಪಾರು ಮಾಡುವಂತೆ ಕೇಂದ್ರ ಸರಕಾರ ಎಲ್ಲ ರಾಜ್ಯಗಳಿಗೂ ಪತ್ರ ಬರೆದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಮ್ಯಾನ್ಮಾರ್‌ನಲ್ಲಿನ ಅಸುರಕ್ಷತೆ ಕಾರಣದಿಂದಾಗಿ ಭಾರತಕ್ಕೆ ನುಸುಳಿರುವ ವಲಸಿಗರನ್ನು ಗಡೀಪಾರು ಮಾಡುವಂತೆ ಎಲ್ಲ ರಾಜ್ಯಗಳಿಗೂ ಕೇಂದ್ರ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್‌ರ ಪರವಾಗಿ ಪ್ರತಿಕ್ರಿಯಿಸಿರುವ ಅವರ ಉಪ ವಕ್ತಾರ ಫ‌ರ್ಹಾನ್‌ ಹಕ್‌, “ವಲಸಿಗರ ವಿರುದ್ಧ ಕೈಗೊಂಡ ಕ್ರಮದ ಬಗ್ಗೆ ನಮಗೆ ಕಳವಳವಿದೆ. ಒಮ್ಮೆ ದೇಶವೊಂದರಲ್ಲಿನ  ಆತಂಕದಿಂದ ವಲಸೆ ಬಂದವರನ್ನು ಮತ್ತೆ ಅದೇ ದೇಶಕ್ಕೆ ಕಳಿಸುವುದು ಸಮಂಜಸವಲ್ಲ. ಭಾರತದ ಈ ನಿರ್ಧಾರ ವಿಶ್ವಸಂಸ್ಥೆಯ ತತ್ವ ಸಿದ್ಧಾಂತಗಳಿಗೆ ವಿರುದ್ಧವಾಗಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next