Advertisement

Supreme Court: ಆಡಳಿತ ವಿಳಂಬದಿಂದ ಅಕ್ರಮ ನಿರ್ಮಾಣ ಸಕ್ರಮ ಆಗುವುದಿಲ್ಲ

12:48 AM Dec 18, 2024 | Team Udayavani |

ಹೊಸದಿಲ್ಲಿ: ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಸಂಬಂ­ಧಿ­ಸಿದಂತೆ ಸುಪ್ರೀಂ ಕೋರ್ಟ್‌ ಮಂಗಳವಾರ ಮಹ­ತ್ವದ ತೀರ್ಪೋಂದನ್ನು ಪ್ರಕಟಿಸಿದೆ.

Advertisement

ಆಡಳಿತಾತ್ಮಕ ವಿಳಂಬ, ಸಮಯ ಅಥವಾ ವಿತ್ತೀಯ ಹೂಡಿಕೆಗಳ ಕಾರಣದಿಂದ ಅಕ್ರಮ ನಿರ್ಮಾಣಗಳನ್ನು ಕಾನೂನುಬ­ದ್ಧ­ಗೊಳಿಸಲಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಮೇರಠ್ ನಲ್ಲಿ ಅಕ್ರಮ ಕಟ್ಟಡಗಳನ್ನು ಕೆಡ­ವಲು ಹೈಕೋರ್ಟ್‌ ನೀಡಿರುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಅಲ್ಲದೇ ಕಟ್ಟಡ ನಿರ್ಮಾಣವಾದ ಬಳಿಕ ನಡೆದ ಉಲ್ಲಂಘನೆಗಳೂ ಕಟ್ಟಡ ಕೆಡವಲು ಕ್ರಮಕೈಗೊಳ್ಳಲು ಕಾರಣವಾಗಬೇಕು ಎಂದು ನ್ಯಾಯಪೀಠ ಹೇಳಿದೆ.

 

Advertisement

Udayavani is now on Telegram. Click here to join our channel and stay updated with the latest news.

Next