Advertisement

ಉಡುಪಿ: 50 ಕೋ.ರೂ. ವೆಚ್ಚದಲ್ಲಿ  5 ಬಸ್‌ ನಿಲ್ದಾಣ

08:20 AM Sep 12, 2017 | Team Udayavani |

ಉಡುಪಿ: ಉಡುಪಿ ನಗರ ವ್ಯಾಪ್ತಿಯಲ್ಲಿ ಒಂದು ವರ್ಷದೊಳಗೆ ಒಟ್ಟು 50 ಕೋ.ರೂ. ವೆಚ್ಚದಲ್ಲಿ 5 ಸುಸಜ್ಜಿತ ಬಸ್‌ ನಿಲ್ದಾಣಗಳನ್ನು ನಿರ್ಮಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ತಿಳಿಸಿದರು.

Advertisement

ಅವರು ರವಿವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಉಡುಪಿಯಲ್ಲಿ 4 ಕೋ.ರೂ. ವೆಚ್ಚದಲ್ಲಿ
ನಿರ್ಮಾಣವಾಗಲಿರುವ ಉಡುಪಿ ನಗರ ಸಾರಿಗೆ ಬಸ್‌ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಬನ್ನಂಜೆಯಲ್ಲಿ 3 ಎಕರೆ ಪ್ರದೇಶ ದಲ್ಲಿ 35 ಕೋ.ರೂ. ವೆಚ್ಚದಲ್ಲಿ ಸುಸಜ್ಜಿತ ಸಾರಿಗೆ ಬಸ್‌ ನಿಲ್ದಾಣ ಮಂಜೂರಾಗಿದ್ದು, 10 ಕೋ.ರೂ. ವೆಚ್ಚದಲ್ಲಿ ಮಣಿಪಾಲ, ಉಡುಪಿ (ಖಾಸಗಿ ಬಸ್‌ ನಿಲ್ದಾಣ) ಹಾಗೂ ಮಲ್ಪೆಯಲ್ಲಿ ಸಿಟಿ ಬಸ್‌ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗು ವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ನರ್ಮ್ ಬಸ್‌ಗಳಿಗೆ ಮಂಜೂರಾತಿ ತಡೆಯಲು ಖಾಸಗಿ ಯವರಿಂದ ಎಷ್ಟೇ ಒತ್ತಡ ಬಂದರೂ ಜನರ ಹಿತದೃಷ್ಟಿಯಿಂದ ಯಾವುದೇ ಒತ್ತಡಗಳಿಗೆ ಮಣಿಯದೇ ಇದ್ದುದ ರಿಂದ ಈಗ ಗ್ರಾಮೀಣ ಭಾಗದ ಜನತೆ, ಹಿರಿಯ ನಾಗರಿಕರು ಹಾಗೂ ವಿದ್ಯಾರ್ಥಿಗಳಿಗೆ ಉತ್ತಮ ಸೇವೆ ದೊರೆಯುತ್ತಿದೆ. 4 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 3 ಅಂತಸ್ತಿನ ನರ್ಮ್ ಬಸ್‌ ನಿಲ್ದಾಣದಲ್ಲಿ 10 ಬಸ್‌ಗಳು ಏಕಕಾಲದಲ್ಲಿ ನಿಲ್ಲುವ, 20 ಕಾರುಗಳ ಪಾರ್ಕಿಂಗ್‌ ವ್ಯವಸ್ಥೆ ಹಾಗೂ 9 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುತ್ತಿದ್ದು, 8 ತಿಂಗಳ ಅವಧಿ ಯಲ್ಲಿ ಪೂರ್ಣಗೊಳ್ಳಲಿದೆ ಎಂದು ಸಚಿವರು ಹೇಳಿದರು.

ಸೆ. 13: ವೋಲ್ವೋಗೆ ಚಾಲನೆ
ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ, ಬೈಂದೂರು ಶಾಸಕ ಗೋಪಾಲ ಪೂಜಾರಿ ಮಾತನಾಡಿ, ಜಿಲ್ಲೆಯಲ್ಲಿ 87 ಪರ್ಮಿಟ್‌ಗಳಿಗೆ ಸಮಯ ಹಾಗೂ 63 ಹೊಸ ಬಸ್‌ಗಳಿಗೆ ಪರ್ಮಿಟ್‌ ನೀಡಲು ಬಾಕಿ ಇದೆ. ಸದ್ಯ 54 ಬಸ್‌ಗಳು ಸಂಚರಿಸುತ್ತಿವೆ. ನಿಗಮಕ್ಕೆ 1,800 ಹೊಸ ಬಸ್‌ ಖರೀದಿಸುತ್ತಿದ್ದು, 1,000 ಹಳೆ ಬಸ್‌ಗಳನ್ನು ಬದಲಾಯಿಸ ಲಾಗುತ್ತಿದೆ. ಉಡುಪಿ – ಮಂಗಳೂರು ವಿಭಾಗಕ್ಕೆ ಹೊಸದಾಗಿ 11 ವೋಲ್ವೋ ಬಸ್‌ ಮಂಜೂರಾಗಿದ್ದು, ಸೆ. 13ಕ್ಕೆ ಚಾಲನೆ ನೀಡಲಾಗುವುದು ಎಂದರು.

Advertisement

ರಾಜ್ಯ ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗಫ‌ೂರ್‌, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್‌, ಸ್ಥಾಯೀ ಸಮಿತಿ ಅಧ್ಯಕ್ಷೆ ಶೋಭಾ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ, ಜಿ.ಪಂ. ಸದಸ್ಯ ಜನಾರ್ದನ ತೋನ್ಸೆ, ಉಡುಪಿ ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಗುತ್ತಿಗೆದಾರ ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ, ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ನಿರ್ದೇಶಕ ಪಿ.ಕೆ. ಸುಧೀರ್‌, ವಿಭಾಗೀಯ ನಿಯಂತ್ರಣಾಧಿಕಾರಿ ದೀಪಕ್‌ ಕುಮಾರ್‌, ಕಾಮಗಾರಿ ಮುಖ್ಯ ಅಭಿಯಂತ ಜಗದೀಶ್‌ ಚಂದ್ರ, ಕಾಮಗಾರಿ ಅಭಿಯಂತ ನರೇಂದ್ರ ಕುಮಾರ್‌, ವಿಭಾಗೀಯ ಸಂಚಾರ ನಿಯಂತ್ರಣಾಧಿಕಾರಿ ಜೈಶಾಂತ್‌ ಕುಮಾರ್‌, ವಿಭಾಗೀಯ ತಾಂತ್ರಿಕ ಶಿಲ್ಪಿ ಶರಣ ಬಸವರಾಜ್‌, ಘಟಕ ವ್ಯವಸ್ಥಾಪಕ ಉದಯ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಶಾಂತ್‌ ಶೆಟ್ಟಿ ಹಾವಂಜೆ ಅವರು ಕಾರ್ಯಕ್ರಮ ನಿರೂಪಿಸಿದರು.

ಕಾರ್ಕಳ, ಬೈಂದೂರಿನಲ್ಲಿ  ಡಿಪೋ
ಕಾರ್ಕಳದಲ್ಲಿ ಸ್ಥಳ ನೀಡಿದರೆ ಬಸ್‌ ಡಿಪೋ ಮಾಡಲಾಗುವುದು. ಬೈಂದೂರಲ್ಲಿ ಡಿಪೋಗೆ 10 ಕೋ.ರೂ ಕಾದಿರಿಸಲಾಗಿದೆ. ಕಾರ್ಕಳ ಮತ್ತು ಬೈಂದೂರಿನಲ್ಲಿ ಹೊಸ ಡಿಪೋ ನಿರ್ಮಾಣವಾದರೆ, ಉಡುಪಿಯಲ್ಲಿ ಪ್ರತ್ಯೇಕ ವಿಭಾಗ ಆರಂಭಿಸಲಾಗುವುದು. ಕುಂದಾಪುರ- ಹೊಸಗಂಡಿ – ಶಿವಮೊಗ್ಗ ಹಾಗೂ ಕುಂದಾಪುರ – ಹೊಸನಗರ – ಶಿವಮೊಗ್ಗ ಮಾರ್ಗದಲ್ಲಿ ಬಸ್‌ ಸೇವೆ ಒದಗಿಸಲಾಗುವುದು.

– ಗೋಪಾಲ ಪೂಜಾರಿ, ಕೆಎಸ್ಸಾರ್ಟಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next