Advertisement

Sullia: ಅಪಘಾತ; ಸರಕಾರಿ ಬಸ್‌ ಚಾಲಕನಿಗೆ ಶಿಕ್ಷೆ

07:17 PM Jan 01, 2025 | Team Udayavani |

ಸುಳ್ಯ: ತಾಲೂಕಿನ ಆಲೆಟ್ಟಿ ರಸ್ತೆಯಲ್ಲಿ ರಿಕ್ಷಾಕ್ಕೆ ಬಸ್‌ ಗುದ್ದಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಬಸ್‌ ಚಾಲಕ ಗೋಪಾಲ ಎಂಬವರಿಗೆ ಶಿಕ್ಷೆ ವಿಧಿಸಿ ಆದೇಶಿಸಿದೆ.

Advertisement

2023ರ ಎ.11ರಂದು ಬೆಳಗ್ಗೆ ಆಲೆಟ್ಟಿ ಗ್ರಾಮದ ಮಾಣಿ-ಮೈಸೂರು ಹೆದ್ದಾರಿಯಲ್ಲಿ ಕೆ.ಎಸ್‌.ಆರ್‌.ಟಿ.ಸಿ. ಬಸ್ಸನ್ನು ಅರಂತೋಡು ಕಡೆಯಿಂದ ಸುಳ್ಯ ಕಡೆಗೆ ಸಾಗುತ್ತಿದ್ದ ಬಸ್‌ ಸುಳ್ಯ ಕಡೆಗೆ ಹೋಗುತ್ತಿದ್ದ ರಿಕ್ಷಾವನ್ನು ಓವರ್‌ಟೇಕ್‌ ಮಾಡುವ ಪ್ರಯತ್ನದಲ್ಲಿ ರಿಕ್ಷಾದ ಹಿಂಬದಿಗೆ ಢಿಕ್ಕಿಯಾಗಿತ್ತು. ಪರಿಣಾಮ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪುಷ್ಪಾವತಿ ಎಂಬವರು ಗಾಯಗೊಂಡಿದ್ದರು.

ಸುಳ್ಯ ಹಿರಿಯ ಸಿವಿಲ್‌ ಜಡ್ಜ್ ಮತ್ತು ಜೆ.ಎಂ.ಎಫ್‌.ಸಿ. ನ್ಯಾಯಾಲಯದಲ್ಲಿ ನ್ಯಾಯಾಧೀಶ ಬಿ.ಮೋಹನ್‌ಬಾಬು ಅವರು ಪ್ರಕರಣದ ವಿಚಾರಣೆ ನಡೆಸಿದ್ದು, ಬಸ್‌ ಚಾಲಕ ತಪ್ಪಿತಸ್ಥ ಎಂದು ಘೋಷಿಸಿದರು. ಆತನಿಗೆ ವಿವಿಧ ಸೆಕ್ಷನ್‌ಗಳಡಿಯಲ್ಲ ಒಂದು ತಿಂಗಳ ಸಾದಾ ಜೈಲು ಶಿಕ್ಷೆ ಮತ್ತು 1000 ಸಾ. ರೂ. ದಂಡ ವಿಧಿಸಿದ್ದಾರೆ. ಸರಕಾರದ ಪರವಾಗಿ ಪ್ರಕರಣವನ್ನು ಸಹಾಯಕ ಅಭಿಯೋಜಕರು ವಾದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next