ವೇದಗಳಿಗೆ ಹೇಗೆ ಋಷಿ ಸಂಪ್ರದಾಯದ, ಅಪೌರುಷೇಯದ ಮಾನ್ಯತೆ ಇದೆಯೋ ಅದೇ ತೆರದಿ ಮಹಾಭಾರತ ಗ್ರಂಥಕ್ಕೂ, ಗೀತೆಗೂ ಇದೆ. ಯುದ್ಧ ಭೂಮಿಯಲ್ಲಿ ಇಂಥ ಮಾತುಗಳನ್ನು ಹೇಳಬೇಕೆಂದು ಶ್ರೀಕೃಷ್ಣ ತಯಾರಿ ಮಾಡಿಕೊಂಡು ಹೇಳಿದ್ದಲ್ಲ. ಆ ಕ್ಷಣದಲ್ಲಿ ದೃಷ್ಟವಾದದ್ದನ್ನು ಹೇಳಿದ. ವೇದಗಳು ಹೇಗೆ ಧ್ಯಾನದಲ್ಲಿ ಗೋಚರಿಸಿಧ್ದೋ ಹಾಗೇ ಇದು ಕೃಷ್ಣನಿಗೆ ಸ್ಫುರಿಸಿದ್ದು. ಇದೇ ರೀತಿಯ ಇನ್ನೊಂದು ಕೃತಿ ವಿಷ್ಣುಸಹಸ್ರನಾಮ.
ಯುದ್ಧವೆಲ್ಲ ಮುಗಿದ ಬಳಿಕ ಶರಶಯ್ಯೆಯಲ್ಲಿದ್ದ ಭೀಷ್ಮಾಚಾರ್ಯರಲ್ಲಿದ್ದು ಶ್ರೀಕೃಷ್ಣನೇ ನುಡಿಸಿದ ಕೃತಿ ಇದು. ಆದ್ದರಿಂದಲೇ ಇದು ಸಾರ್ವಕಾಲಿಕವಾದುದು. ಕೇವಲ ಇತಿಹಾಸ, ಕಥೆಗಳನ್ನು ಹೇಳುವುದಷ್ಟೇ ಗ್ರಂಥದ ಉದ್ದೇಶವಲ್ಲ, ಪಾಪಕ್ಷಯ ಮತ್ತು ಮೋಕ್ಷಪ್ರಾಪ್ತಿಯ ಗುರಿ ಇರಿಸಿಕೊಂಡು ಗ್ರಂಥದ ರಚನೆಯಾಗಿದೆ. ಮಹಾಭಾರತದಲ್ಲಿ ಬಂದಿರುವ ಅಂಶಗಳು ಸಂಗ್ರಹರೂಪವಾಗಿ (gist, essence) ಗೀತೆಯಲ್ಲಿ ಬಂದಿರುವುದರಿಂದ “ಸರ್ವಭಾರತ ಸಂಗ್ರಹ ರೂಪ’ ಎಂದು ಬಣ್ಣಿಸಲಾಗಿದೆ.
ಗೀತೆ ಮತ್ತು ವಿಷ್ಣುಸಹಸ್ರನಾಮ ಇವೆರಡನ್ನೂ ಮಹಾಭಾರತ ಕೃತಿಯಲ್ಲಿ ವಿಶೇಷವಾಗಿ ಸೇರಿಸಿದ್ದೇ ವಿನಾ ಇವು ಮಹಾಭಾರತದ ಒಂದು ಅಧ್ಯಾಯವಲ್ಲ. ಇವೆರಡು ಕೃತಿಗಳು ಸಾಂದರ್ಭಿಕ ಎನ್ನುವುದಕ್ಕಿಂತ ಭಗವಂತನ ಅವತಾರದ ಕೊಡುಗೆಯಾಗಿದೆ ಎನ್ನುವುದು ಸೂಕ್ತ. ಆದ್ದರಿಂದಲೇ ಇವುಗಳನ್ನು ಮಹಾಭಾರತದಲ್ಲಿ “ಉಪನಿಬಂಧ’ವಾಗಿ ಸೇರಿಸಿದ್ದಾರೆ.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811