Advertisement
ಹೀಗೆ ಆದೇಶ ಕೊಟ್ಟಿದ್ದರೆ ಗೀತೆಯೇ ಬೇಡವಾಗಿತ್ತು. ಹಾಗೆ ಮಾಡಲಿಲ್ಲ. ಪರಂತಪ= ಹೆಚ್ಚು ಚಿಂತನೆ ಮಾಡುವುದು. ಚಿಂತನೆಯಿಂದಲೇ ಸರಿಪಡಿಸುವುದು. ಇದಕ್ಕೆ ಮಾನಸಿಕ ಚಿಂತನೆಯೇ ಚಿಕಿತ್ಸೆ ಎಂದರ್ಥ. ಅರ್ಜುನನಿಗೆ ಚಿಂತನೆ ಮಾಡುವ ಶಕ್ತಿ ಇದೆ. ವಾಸ್ತವದಲ್ಲಿ ಚಿಂತನೆ ಎಂದರೆ ಭಗವಂತನ ಕುರಿತಾದ ಚಿಂತನೆ. ಭಗವಂತನ ಚಿಂತಕ, ಶ್ರೇಷ್ಠ ಚಿಂತಕನಾದ ಕಾರಣ ಅವನೇ (ಅರ್ಜುನನೇ) ಉತ್ತರವನ್ನು ಕಂಡುಕೊಳ್ಳುವಂತಾಗಬೇಕು. ವಿದ್ಯಾರ್ಥಿಗಳು ಬೆಳೆಯಬೇಕಾದರೆ ಅವರ ಪ್ರಶ್ನೆಗೆ ಅವರೇ ಉತ್ತರ ಕಂಡುಕೊಂಡು ಉತ್ತರಿಸುವಂತಾಗಬೇಕು, ಶಿಕ್ಷಕರೇ ಉತ್ತರ ಹೇಳಬಾರದು. ಇದು ಆದರ್ಶ ಶಿಕ್ಷಕರ ಕಾರ್ಯವೈಖರಿ.
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ
Related Articles
ಉಡುಪಿ ಸಂಪರ್ಕ ಸಂಖ್ಯೆ: 8055338811
Advertisement