ಮಾನಸಿಕ ಕಶ್ಮಲ ನಿರ್ಮೂಲನೆಗೆ ಅಂತಃಕರಣ ಶುದ್ಧಿಯಾಗಬೇಕು, ಅಂದರೆ ಕೆಟ್ಟ ಭಾವನೆಗಳು ಹೋಗಬೇಕು. ಮಾನಸಿಕ ಅಶುದ್ಧಿ= ಭಾವನೆಗಳ ಅಶುದ್ಧಿ. ಕಶ್ಮಲವೆಂದರೆ ಯಾವುದೋ ಕೊಳೆ ಎಂದರ್ಥವಲ್ಲ. ಮನಸ್ಸಿನ ಕೊಳೆಗಳೇ ಅವು. ಅರ್ಜುನನ ಮಾನಸಿಕ ಕೊಳೆಯನ್ನು ಶ್ರೀಕೃಷ್ಣ ಹೀಗೆ ಝಾಡಿಸುತ್ತಾನೆ. .
ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ ನೈತಣ್ತೀಯ್ಯುಪಪದ್ಯತೇ| ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ||
ಕ್ಲೈಬ್ಯಂ= ನಪುಂಸಕತನ. ಈತ ರಾಜ್ಯ ಸುಖದ ಅಪೇಕ್ಷೆಗೆ ಬಂದಿದ್ದಾನೆ. ಸೋತರೂ ಪರವಾಗಿಲ್ಲ, ಗೆದ್ದರೂ ಪರವಾಗಿಲ್ಲ. ನಾನು ಕ್ಷತ್ರಿಯ. ನನ್ನ ಕರ್ತವ್ಯವನ್ನು ಮಾಡಿದ್ದೇನೆ ಎನ್ನಬೇಕಾದ ಅರ್ಜುನನನ್ನು ನಪುಂಸಕ ಎಂದು ಟೀಕಿಸುತ್ತಾನೆ.
ಭೀಷ್ಮದ್ರೋಣಾದಿಗಳು ಬಂದಿರುವುದನ್ನು ನೋಡಿ ಗೆಲ್ಲುತ್ತೇನೋ ಇಲ್ಲವೋ ಎಂದು ಯುದ್ಧದಿಂದ ಜಾರಿಸಿಕೊಳ್ಳಲು ಯತ್ನಿಸುತ್ತಿರುವ ಮಾನಸಿಕತೆಯನ್ನು ಕೃಷ್ಣ ಪತ್ತೆ ಹಚ್ಚಿ “ಹೇಡಿತನ’ವನ್ನು ಬಿಡು ಎನ್ನುತ್ತಾನೆ. ಹೀಗೆ ಹೇಳುವಾಗ ಅರ್ಜುನನ್ನು ಪಾಂಡುವಿನ ಮಗ ಎನ್ನುವ ಬದಲು ಪಾರ್ಥ= ಪೃಥೆಯ ಮಗ ಎಂದು ಸಂಬೋಧಿಸುವುದನ್ನು ನೋಡಬೇಕು. ಪೃಥೆ ಅಂದರೆ ಕುಂತಿ. ಕುಂತಿಯು ಧೈರ್ಯದ ಸಂಕೇತ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ
– ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ ಗೀತಾ ಮಂದಿರ,
ಉಡುಪಿ ಸಂಪರ್ಕ ಸಂಖ್ಯೆ: 8055338811