“ನಾನು ಪ್ರಶ್ನೆಗಳನ್ನು ಕೇಳುತ್ತೇನೆ. ನೀನು ಉತ್ತರ ಕೊಡು’ (ಪೃಚ್ಛಾಮಿ ತ್ವಾಂ ಧರ್ಮಸಮ್ಮೂಢಚೇತಾಃ| (2-7) ಎಂದು ಅರ್ಜುನ ಹೇಳುವ ತನಕ ಕೃಷ್ಣ ಸುಮ್ಮನೆ ಕುಳಿತ. ಗುರುವಾಗಿ ಮಾರ್ಗದರ್ಶನ ಮಾಡು (ಶಿಷ್ಯಸ್ತೇ ಹಂ ಶಾಧಿ ಮಾಂ ತ್ವಾಂ ಪ್ರಪನ್ನಮ್) ಎಂದು ಬೇಡಿಕೊಳ್ಳುತ್ತಾನೆ. ಆದ್ದರಿಂದಲೇ “ಕೃಷ್ಣ ವಂದೇ ಜಗದ್ಗುರುಮ್’.
ಮೊದಲು ಗುರುಗಳಲ್ಲಿ ಶಿಷ್ಯನಾಗಿ ಶರಣಾಗತನಾಗಿ ಹೋಗಿ ಪ್ರಾರ್ಥನೆ ಮಾಡಬೇಕು. ನನಗೆ ಮುಂದೊಂದು ದಿನ ಪಶ್ಚಾತ್ತಾಪ ಆಗಬಾರದು. ಎಂದೆಂದಿಗೂ ಇದೇ ಸರಿಯಾದ ದಾರಿ ಎಂಬುದನ್ನು (ಶ್ರೇಯಸ್ಸು= ಶಾಶ್ವತ ಸುಖ) ಹೇಳು. ಪ್ರೇಯಸ್ಸು= ತಾತ್ಕಾಲಿಕ ಸುಖ. ಯುದ್ಧ ಮುಗಿದ ಅನಂತರವೂ ಆಂತರಿಕವಾಗಿ ನೆಮ್ಮದಿ ಬೇಕು, ರಾಜ್ಯಸುಖಕ್ಕಿಂತ ಆತ್ಮಸಾಕ್ಷಿಯ ಸುಖ ಸಿಗಬೇಕು(ಯಚ್ಛೋಕಮುಚ್ಛೋಷಣಮಿಂದ್ರಿಯಾಣಾಮ್| 2-8) ಎನ್ನುತ್ತಾನೆ ಅರ್ಜುನ. ಕೆಲವು ಹೊತ್ತು ಇಬ್ಬರೂ ಸುಮ್ಮನೆ ಕುಳಿತುಕೊಳ್ಳುತ್ತಾರೆ.
ಏವಮುಕ್ತ್ವಾ ಹೃಷೀಕೇಶಂ ಗುಡಾಕೇಶಃ ಪರಂತಪಃ| (2-9) ಹೃಷೀಕೇಶ= ಇಂದ್ರಿಯಾಧಿಪತಿ, ಗುಡಾಕೇಶ= ನಿದ್ದೆಯನ್ನು ಗೆದ್ದವ, ಜಾಗೃತಾತ್ಮ=ಆತ್ಮಸಾಕ್ಷಿ ಜಾಗೃತವಾಗಿದೆ. ಪರಂತಪಃ= ತನ್ನನ್ನು ತಾಪಿಸಿಕೊಳ್ಳದೆ ಅಂದರೆ ಆತ್ಮಸಾಕ್ಷಿಯ ಜತೆ ರಾಜಿ ಮಾಡಿಕೊಳ್ಳದೆ ಇತರರಿಗೆ ಮಾತ್ರ ತಾಪವಾಗುವಂತೆ ಮಾಡುವವ. ಹೀಗೆಂದು ವರ್ಣಿಸಿದ ಸಂಜಯನು ಅರ್ಜುನನು ಮೌನವಾಗಿ ಮುಂದಿನ ಮಾರ್ಗವನ್ನು ತೋರಿಸುವ ಗೋವಿಂದನನ್ನು ಪ್ರಾರ್ಥಿಸಿದನು ಎನ್ನುತ್ತಾನೆ. ಇದು ಗೋವಿಂದನಾಮದ ಮಹತ್ವ.
-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811