ಅರ್ಜುನನಿಗೆ ಯುದ್ಧವೇನು ಹೊಸದಲ್ಲ. ಹಿಂದೆಯೂ ಅನೇಕ ಯುದ್ಧಗಳನ್ನು ಮಾಡಿದವನೇ, “ಮೂರು ಲೋಕದ ಗಂಡ’ ಎಂದು ಹೆಸರು ಪಡೆದವ. ಆಗಲೂ ಹೀಗೆ ಯುದ್ಧ ಬೇಡವೆಂದು ವಾದ ಮಂಡಿಸಬಹುದಿತ್ತಲ್ಲ? ಆದ್ದರಿಂದಲೇ ಅರ್ಜುನನ ಈಗಿನ ವಾದಕ್ಕೆ ಬೆಲೆ ಇಲ್ಲ. ಇದು ವಾದವಲ್ಲ, ಭಾವನೆ ಮಾತ್ರ. ಬಾಲಿಷವಾದ ವಾದ. “ಹಿರಿಯರ ಜತೆ ಯುದ್ಧ ಮಾಡುವುದು ಸರಿಯಲ್ಲ’ ಎಂಬ ಭಾವನೆಗೆ ಬೆಲೆ ಕೊಡಬಹುದು. ಆದರೆ ಯುದ್ಧದಿಂದ ಏನೇನು ಅವಾಂತರವಾಗುತ್ತದೆ ಎಂಬ ಮಾತಿಗೆ ಬೆಲೆ ಇಲ್ಲ. ಈ ಹೃದಯದೌರ್ಬಲ್ಯವೂ “ಕ್ಷುದ್ರ’.
ಬಲಿಷ್ಠವಾದ ಹೃದಯದೌರ್ಬಲ್ಯವಲ್ಲ ಎಂದರ್ಥ. ಇದುವರೆಗೆ ಬಾರದ ಈ ಚಿಂತನೆ ಕ್ಷುದ್ರವಾದದ್ದು. ಆದ್ದರಿಂದ ಕ್ಷುದ್ರವಾದ ಹೃದಯದೌರ್ಬಲ್ಯದಿಂದ ಹೊರಬರಬೇಕು. “ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕೊ¤$Ìàತ್ತಿಷ್ಠ ಪರಂತಪ’ ಎಂದು ಶ್ರೀಕೃಷ್ಣ ಹೇಳುವಾಗ “ಉತ್ತಿಷ್ಠ’ ಎನ್ನಬೇಕಾದರೆ ಮಲಗಿದ್ದನೆ? ಒಳಗಿನಿಂದ ಮಲಗಿದ್ದ. ಅದರಿಂದ ಎದ್ದೇಳು ಎಂಬರ್ಥ.
“ಭೀಷ್ಮದ್ರೋಣರನ್ನು ಹೇಗೆ ಕೊಲ್ಲುವುದು? ನೀನೇ ಅವರಿಗೆ ಗೌರವ ಕೊಡುತ್ತಿದ್ದಿ. ಈಗ ಅವರನ್ನು ಕೊಲ್ಲು ಅನ್ನುತ್ತಿದ್ದಿ. ದ್ರೋಣರು ಗುರುಗಳಂತಹ ಮಹಾನುಭಾವರು. ಭೀಷ್ಮಾಚಾರ್ಯರು ನಮ್ಮನ್ನು ಬೆಳೆಸಿದವರು? ಇದರ ಬದಲು ಭಿಕ್ಷೆ ಬೇಡಿಯಾದರೂ ಬದುಕಬಹುದು. ಇವರನ್ನು ಕೊಲ್ಲುವುದು ಹೇಗೆ ಸಾಧ್ಯ? ನನ್ನ ಪ್ರಶ್ನೆಗೆ ಉತ್ತರ ಕೊಡು’ ಎನ್ನುತ್ತಾನೆ ಅರ್ಜುನ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ
– ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ ಗೀತಾ ಮಂದಿರ,
ಉಡುಪಿ ಸಂಪರ್ಕ ಸಂಖ್ಯೆ: 8055338811