Advertisement

Udupi: ಗೀತೋತ್ಸವದ ಮಂಗಳೋತ್ಸವ ; ಉಪೇಂದ್ರ ಸೇರಿ ಗಣ್ಯರು ಭಾಗಿ

11:21 PM Dec 29, 2024 | Team Udayavani |

ಉಡುಪಿ: ಬೃಹತ್‌ ಗೀತೋತ್ಸವದ ಮಂಗಳೋತ್ಸವು ಡಿ.29ರಂದು ರಾಜಾಗಣದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನಡೆಯಿತು.

Advertisement

ಗೀತಾ ಜ್ಞಾನ ದೀಪೋತ್ಸವದ ಜತೆಗೆ ಶ್ರೀಪಾದರು ಶ್ರೀ ಕೃಷ್ಣನಿಗೆ ಸಮರ್ಪಿಸಿದ ಪಾರ್ಥಸಾರಥಿ ಸುವರ್ಣ ರಥದ ಮಾದರಿಯ ಗೀತಾ ರಥವನ್ನು ರಾಜಾಂಗಣದ ಪರಿಸರದಲ್ಲಿ ಎಳೆಯುವ ಮೂಲಕ ವಿಶಿಷ್ಟವಾಗಿ ಮಂಗಳ್ಳೋತ್ಸವ ಆಚರಿಸಲಾಯಿತು.

ಸಭಾ ಕಾರ್ಯಕ್ರಮದಲ್ಲಿ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ದಿನೇಶ್‌, ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ್‌ ಎಸ್‌. ಗಂಗಣ್ಣವರ್‌, ನಟ ಉಪೇಂದ್ರ, ಶಾಸಕರಾದ ಯಶ್‌ಪಾಲ್‌ ಎ. ಸುವರ್ಣ,ಉದ್ಯಮಿಗಳಾದ ಮನೋಹರ್‌ ಶೆಟ್ಟಿ, ಪುರುಷೋತ್ತಮ ಶೆಟ್ಟಿ ಸೇರಿ ಗಣ್ಯರು ಪಾಲ್ಗೊಂಡಿದ್ದರು.

ಪುತ್ತಿಗೆ ಶ್ರೀಪಾದರು 2025ರ ವಿಶ್ವಾವಸು ನಾಮ ಸಂವತ್ಸರದ ಶ್ರೀ ಪುತ್ತಿಗೆ ಮಠ ಪರ್ಯಾಯ ಪಂಚಾಂಗ ಬಿಡುಗಡೆ ಮಾಡಿದರು. ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪುತ್ತಿಗೆ ಶ್ರೀ ಪ್ರಶಂಸೆ
ನಟ ಉಪೇಂದ್ರ ಅವರನ್ನು ಗೌರವಿಸಿದ ಪುತ್ತಿಗೆ ಶ್ರೀಪಾದರು ಮಾತನಾಡಿ, ಚಿತ್ರರಂಗದಲ್ಲಿ ಮೌಲ್ಯ ಭರಿತ ನಡೆ ತೋರಿದ ವ್ಯಕ್ತಿಯಾಗಿರುವ ಉಪೇಂದ್ರ ಅವರು ಗೀತಾಮಂದಿರಕ್ಕೆ ಆಗಮಿ ಸಿರುವುದು ಸಂತೋಷ ನೀಡಿದೆ. ಭಗವದ್ಗೀತೆಯ ಬಗ್ಗೆ ಬಹಳ ಉತ್ಸಾಹ ದಿಂದ ನನ್ನ ಬಳಿ ಮಾತನಾಡಿದರು. ಅವರ ಮುಖಾಂತರವೂ ಗೀತೆಯ ಸಂದೇಶ ವಿಶ್ವದೆಲ್ಲೆಡೆ ಹರಡುವಂತಾಗಲಿ ಎಂದರು.

Advertisement

”ಪುತ್ತಿಗೆ ಶ್ರೀಗಳ ಜತೆ ಭಗವದ್ಗೀತೆ ಬಗ್ಗೆ ಮಾತನಾಡಿದ್ದು, ಅವರಿಂದ ತುಂಬಾ ವಿಷಯಗಳನ್ನು ತಿಳಿದುಕೊಂಡೆ. ಅವರ ಮಾತುಗಳನ್ನು ಕೇಳುತ್ತಾ ಇರೋಣ ಎಂದನಿಸುತ್ತದೆ. ಮನುಷ್ಯ ನಾನು ಅಂತ ಬಂದಾಗ ತುಂಬಾ ನೊಂದುಕೊಳ್ಳುತ್ತಾನೆ. ನೀನು ಎಂದಾಗ ತುಂಬಾ ಹಗುರವಾಗುತ್ತಾನೆ. ಇದರಲ್ಲೇ ಎಲ್ಲ ವಿಷಯಗಳು ಅಡಗಿವೆ” ಎಂದು ನಟ ಉಪೇಂದ್ರ ಹೇಳಿದರು.

ಉಪೇಂದ್ರ ಅವರು ಕೋಟೇಶ್ವರದ ಹೊದ್ರಾಳಿಯಲ್ಲಿ ಕುಟುಂಬದ ಮೂಲ ನಾಗಬನ, ತೆಕ್ಕಟ್ಟೆಯಲ್ಲಿರುವ ಕುಟುಂಬದ ಮನೆಗೆ, ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನ, ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಮುಂತಾದೆಡೆ ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next