Advertisement

Kottigehara: ನಿರ್ದೇಶಕ ಉಪೇಂದ್ರ ಅವರ ‘ಯುಐ’ ಚಿತ್ರದಲ್ಲಿ ಖಳನಟನಾಗಿ ನಟಿಸಿದ ಬಣಕಲ್ ನಿವಾಸಿ

09:32 AM Dec 17, 2024 | Team Udayavani |

ಕೊಟ್ಟಿಗೆಹಾರ: ಚಿತ್ರನಟ, ನಿರ್ದೇಶಕ ಉಪೇಂದ್ರ ಅವರ ಯುಐ ಚಲನಚಿತ್ರದಲ್ಲಿ ಬಣಕಲ್ ನಿವಾಸಿ ಪ್ರಮೋದ್ ಮಲ್ನಾಡ್ ಅವರು ಖಳನಟನ ಪಾತ್ರದಲ್ಲಿ ನಟಿಸಿದ್ದಾರೆ.

Advertisement

ಪ್ರಮೋದ್ ಮಲ್ನಾಡ್ ಬಣಕಲ್ ನಲ್ಲಿ ಹಲವು ವರ್ಷಗಳಿಂದ ಜಿಮ್ ನಡೆಸಿಕೊಂಡು ಬರುತ್ತಿದ್ದರು. ಸುಮಾರು ಏಳು ವರ್ಷಗಳಿಂದ ಚಿತ್ರರಂಗವನ್ನು ಸೇರಿ ನಟಿಸಬೇಕೆಂಬ ಮಹದಾಸೆ ಹೊತ್ತವರು. ಸವರ್ಣ ದೀರ್ಘ ಸಂಧಿ, ತ್ರಿಬಲ್ ರೈಡ್, ರಾಜು ಕನ್ನಡ ಮೀಡಿಯಂ, ಮುಂದೆ ಬರಲಿರುವ ನಾನು ಕರುಣಾಕರ ಚಿತ್ರದಲ್ಲೂ ಖಳನಟನಾಗಿ ನಟಿಸಿದ್ದಾರೆ.

ಸುಮಾರು 14 ದಾರಾವಾಹಿಗಳಲ್ಲೂ ಖಳನಟನ ಪಾತ್ರದಲ್ಲಿ ನಟಿಸುತ್ತಾ ಬಂದಿದ್ದಾರೆ.ಸೀತಾರಾಮ, ಮರಳಿ ಮನಸಾಗಿದೆ,ಪುಟ್ಮಲ್ಲಿ, ನೂರು ಜನ್ಮಕೂ ಧಾರಾವಾಹಿಯಲ್ಲಿ ಖಳ ನಟನಾಗಿ ಕಿರು ತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮೈ ಹೀರೋ ಕನ್ನಡ ಚಿತ್ರದಲ್ಲಿ ಮುಖ್ಯ ಖಳನಟನ ಪಾತ್ರದಲ್ಲಿ ನಟಿಸಿದ್ದಾರೆ. ಮೂಲತಃ ಕೆಳಗೂರಿನ ಮೂಲೆಮನೆ ಗ್ರಾಮದವರಾದ ಇವರು ಚಿತ್ರರಂಗದವರ ನಂಟು ಹೊಂದಿ ಚಿತ್ರಗಳಲ್ಲಿ ನಟಿಸಿ ಉದಯೋನ್ಮುಖ ನಟನಾಗಬೇಕೆಂಬ ಹೆಬ್ಬಯಕೆ ಇವರದು.ಇವರ ನಟನೆಯ ಚಿತ್ರಗಳು ಯಶಸ್ವಿಯಾಗಿ ತೆರೆ ಕಂಡು ಉತ್ತಮ ಹೆಸರು ತಂದು ಕೊಡಲಿ ಎಂದು ಕಲಾಭಿಮಾನಿಗಳು ಹಾರೈಸಿದ್ದಾರೆ.

ಇದನ್ನೂ ಓದಿ: Hush Money Case: ಪ್ರಮಾಣವಚನಕ್ಕೂ ಮುನ್ನ ಟ್ರಂಪ್ ಗೆ ಶಾಕ್…! ಏನಿದು ಪ್ರಕರಣ

Advertisement

Udayavani is now on Telegram. Click here to join our channel and stay updated with the latest news.

Next