Advertisement
ಗೀತಾ ಜ್ಞಾನ ದೀಪೋತ್ಸವದ ಜತೆಗೆ ಶ್ರೀಪಾದರು ಶ್ರೀ ಕೃಷ್ಣನಿಗೆ ಸಮರ್ಪಿಸಿದ ಪಾರ್ಥಸಾರಥಿ ಸುವರ್ಣ ರಥದ ಮಾದರಿಯ ಗೀತಾ ರಥವನ್ನು ರಾಜಾಂಗಣದ ಪರಿಸರದಲ್ಲಿ ಎಳೆಯುವ ಮೂಲಕ ವಿಶಿಷ್ಟವಾಗಿ ಮಂಗಳ್ಳೋತ್ಸವ ಆಚರಿಸಲಾಯಿತು.
Related Articles
ನಟ ಉಪೇಂದ್ರ ಅವರನ್ನು ಗೌರವಿಸಿದ ಪುತ್ತಿಗೆ ಶ್ರೀಪಾದರು ಮಾತನಾಡಿ, ಚಿತ್ರರಂಗದಲ್ಲಿ ಮೌಲ್ಯ ಭರಿತ ನಡೆ ತೋರಿದ ವ್ಯಕ್ತಿಯಾಗಿರುವ ಉಪೇಂದ್ರ ಅವರು ಗೀತಾಮಂದಿರಕ್ಕೆ ಆಗಮಿ ಸಿರುವುದು ಸಂತೋಷ ನೀಡಿದೆ. ಭಗವದ್ಗೀತೆಯ ಬಗ್ಗೆ ಬಹಳ ಉತ್ಸಾಹ ದಿಂದ ನನ್ನ ಬಳಿ ಮಾತನಾಡಿದರು. ಅವರ ಮುಖಾಂತರವೂ ಗೀತೆಯ ಸಂದೇಶ ವಿಶ್ವದೆಲ್ಲೆಡೆ ಹರಡುವಂತಾಗಲಿ ಎಂದರು.
Advertisement
”ಪುತ್ತಿಗೆ ಶ್ರೀಗಳ ಜತೆ ಭಗವದ್ಗೀತೆ ಬಗ್ಗೆ ಮಾತನಾಡಿದ್ದು, ಅವರಿಂದ ತುಂಬಾ ವಿಷಯಗಳನ್ನು ತಿಳಿದುಕೊಂಡೆ. ಅವರ ಮಾತುಗಳನ್ನು ಕೇಳುತ್ತಾ ಇರೋಣ ಎಂದನಿಸುತ್ತದೆ. ಮನುಷ್ಯ ನಾನು ಅಂತ ಬಂದಾಗ ತುಂಬಾ ನೊಂದುಕೊಳ್ಳುತ್ತಾನೆ. ನೀನು ಎಂದಾಗ ತುಂಬಾ ಹಗುರವಾಗುತ್ತಾನೆ. ಇದರಲ್ಲೇ ಎಲ್ಲ ವಿಷಯಗಳು ಅಡಗಿವೆ” ಎಂದು ನಟ ಉಪೇಂದ್ರ ಹೇಳಿದರು.
ಉಪೇಂದ್ರ ಅವರು ಕೋಟೇಶ್ವರದ ಹೊದ್ರಾಳಿಯಲ್ಲಿ ಕುಟುಂಬದ ಮೂಲ ನಾಗಬನ, ತೆಕ್ಕಟ್ಟೆಯಲ್ಲಿರುವ ಕುಟುಂಬದ ಮನೆಗೆ, ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನ, ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಮುಂತಾದೆಡೆ ತೆರಳಿದರು.