Advertisement

Udupi ಗೀತಾರ್ಥ ಚಿಂತನೆ- 4; ಗೀತೆ ಅಂದರೆ ಭಗವದ್ಗೀತೆ

10:17 AM Aug 12, 2024 | Team Udayavani |

ಮೊದಲು ಬೆಳಕು ಅನಂತರ ಕತ್ತಲು. ಗುಣವೆಂದರೆ ಬೆಳಕು. ಬೆಳಕು ಹೋದದ್ದರಿಂದ ಕತ್ತಲೆ ಬಂತೇ ವಿನಾ ಕತ್ತಲೆ ಹೋದದ್ದರಿಂದ ಬೆಳಕು ಬರುವುದಲ್ಲ. ಗುಣ ವೃದ್ಧಿಸಿದಾಗ ದೋಷಗಳಿಗೆ ಸ್ಥಾನವೇ ಇಲ್ಲ. ಈ ಕಾರಣದಿಂದಲೇ ಬ್ರಹ್ಮಸೂತ್ರದಲ್ಲಿ “ಅಥಾಥೋ ಬ್ರಹ್ಮಜಿಜ್ಞಾಸಾ ಓಂ’ ಎನ್ನುವಾಗಲೂ ಗುಣಪೂರ್ಣನ ಜಿಜ್ಞಾಸೆ ಹೇಳಿ ಅನಂತರ ನಿರ್ದೋಷತ್ವವನ್ನು ಹೇಳುತ್ತಾರೆ.

Advertisement

ಮಂಗಲಾಚರಣೆ ಮಾಡುವ ಕಾರಣವೆಂದರೆ ನಮ್ಮಲ್ಲಿ (ಮಾನವರಲ್ಲಿ) ಏನಾದರೂ ದೋಷವಿದ್ದರೆ ಅವುಗಳ ನಿವಾರಣೆಗಾಗಿ. ಇಲ್ಲಿ ದೇವರನ್ನು ಏಕವಚನದಿಂದಲೂ ಗುರುವನ್ನು ಬಹುವಚನದಿಂದಲೂ ಕರೆಯುತ್ತಾರೆ. ವೇದವ್ಯಾಸರೂ, ಕೃಷ್ಣನೂ, ಲಕ್ಷ್ಮೀದೇವಿಯೂ ಹೀಗೆ ವಿವಿಧ ಗುರುಗಳಾದ ಕಾರಣ ಬಹುವಚನ ಪ್ರಯೋಗಿಸಿದ್ದಾರೆ. ಗುರುಗಳಿಗೆ ಅಷ್ಟು ಮಹತ್ವವಿರುವುದೂ ಇನ್ನೊಂದು ಕಾರಣ. “ಗೀತಾರ್ಥಂ’ ಎನ್ನುವಾಗ ಭಗವದ್ಗೀತೆಯೇ ಗೀತೆ ಎನ್ನುವ ಅರ್ಥದಲ್ಲಿ ಹೇಳಲಾಗಿದೆ. ಮುಂದಿನ ವಿಚಾರಗಳ ಪ್ರತಿಪಾದನೆಯ ಪೀಠಿಕೆಯಾಗಿ ಸರ್ವಶಾಸ್ತ್ರಗಳ ಮಂಗಲಾಚರಣೆಯನ್ನು ಮಂಗಲ ಶ್ಲೋಕದಲ್ಲಿ ಮಾಡಲಾಗಿದೆ.

ಆಚಾರ್ಯ ಮಧ್ವರು ಗೀತೆಯ ಗ್ರಂಥಕರ್ತರು ಎಂಬ ಕಾರಣದಿಂದ ವೇದವ್ಯಾಸರ ಅವತಾರದ ಹಿನ್ನೆಲೆಯನ್ನು ಹೇಳಿ ಗೀತಾರ್ಥ ಚಿಂತನೆ ನಡೆಸಿದರೆ, ಆಚಾರ್ಯ ಶಂಕರ ಮತ್ತು ಆಚಾರ್ಯ ರಾಮಾನುಜರು ಗೀತೆಯನ್ನು ಉಪದೇಶಿಸಿದವನು ಎಂಬ ಕಾರಣದಿಂದ ಕೃಷ್ಣಾವತಾರದ ಹಿನ್ನೆಲೆಯನ್ನು ಮೊದಲು ಹೇಳುತ್ತಾರೆ.

ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

Advertisement
Advertisement

Udayavani is now on Telegram. Click here to join our channel and stay updated with the latest news.

Next