ನೀವು ನಿಮ್ಮ ಪ್ರಯತ್ನ ಮಾಡಿ, ನನ್ನ ಫಲವನ್ನು ನಿರೀಕ್ಷಿಸಬೇಡಿ ಎನ್ನುತ್ತಾನೆ ಭಗವಂತ. ನನ್ನ ಫಲ ನೋಡಿ ನೀವು ಪ್ರಯತ್ನ ಮಾಡುವುದಲ್ಲ. ಅದು ನಿಮ್ಮ ಡ್ನೂಟಿ, ಇದು ನನ್ನ ಡ್ನೂಟಿ. ಒಬ್ಬನಿಗೆ ರೋಗವೋ? ಇನ್ನಾವುದೋ ಒಂದು ಸ್ಥಿತಿ ಬಂತೆಂದುಕೊಳ್ಳುವ. ಇದನ್ನು ನಾವು ದೇವರು ಕೊಟ್ಟ ಶಿಕ್ಷೆ ಎನ್ನಬಹುದು. ಹಾಗಿದ್ದರೆ ಆ ಸಂತ್ರಸ್ತನಿಗೆ ನಾವು ನೆರವಾಗುವುದು ತಪ್ಪೆ? ಅಲ್ಲ, ಹಾಗಲ್ಲ. ದೇವರ ಕೆಲಸ ದೇವರಿಗೆ, ನಮ್ಮ ಕೆಲಸ ನಮಗೆ. ಕಷ್ಟದಲ್ಲಿದ್ದವರಿಗೆ ನೆರವಾಗುವುದು ನಮ್ಮ ಕೆಲಸ. ಅವರವರ ಕೆಲಸ ಅವರವರಿಗೆ. ಅವನ ಕಷ್ಟವನ್ನು ನಿವಾರಣೆ ಮಾಡುವುದಕ್ಕಿಂತ ಪುಣ್ಯ ಸಂಪಾದನೆ ಮುಖ್ಯ ಗುರಿಯಾಗಬೇಕು. ಈ ಆಯಾಮದಲ್ಲಿ ನೋಡುವುದಾದರೆ ದುಷ್ಟರು ಇರುವುದು ಸಜ್ಜನರಿಗೆ ಒಂದು ಅವಕಾಶವೇ. ದುಷ್ಟರೇ ಇಲ್ಲದಿದ್ದರೆ ಸಜ್ಜನರಿಗೆ ಫಲವೇ ಇಲ್ಲವಾಗುತ್ತದೆ. ದೇವರು ಏಕೆ ಕಷ್ಟ ಉಂಟು ಮಾಡುತ್ತಾರೆ. ಕಾಯಿಲೆಗಳು, ವೈದ್ಯರು, ರೋಗಿಗಳು, ರೋಗಾಣುಗಳು ಎಲ್ಲವನ್ನೂ ಸಮತೋಲನ ಮಾಡುವುದು ದೇವರ, ನಿಸರ್ಗದ ಇಚ್ಛೆ. ನಮಗೆ ಕಾಣುವುದು ನಮ್ಮ ಚಿಂತನೆಯ ಮಟ್ಟ. ನಮ್ಮ ದೃಷ್ಟಿಕೋನದಂತೆ ಸುಖದುಃಖಗಳು ಕಂಡು ಬರುತ್ತವೆ. ಭಗವಂತನ ಉದ್ದೇಶ ತಮ್ಮ ತಮ್ಮ ಸ್ವಭಾವಕ್ಕೆ ಸರಿಯಾಗಿ ಜೀವಿಗಳು ಇರಬೇಕು. ಕಳ್ಳರು ಕಳ್ಳರಾಗಿಯೇ ಇರಬೇಕು. ಕಳ್ಳರು ಸುಭಗರ ವೇಷ ತೊಟ್ಟರೆ ತೊಂದರೆಯಾಗುತ್ತದೆ. ಸುಭಗರೂ ಕಳ್ಳರಂತಿರಬಾರದು, ಅಂತಹ ಅವಕಾಶಕ್ಕೆ ಎಡೆಕೊಡಬಾರದು.
-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811