ಸ್ವಭಾವತಃ ಗುಣ, ಪ್ರಭಾವತಃ ಗುಣ ಎಂಬ ಎರಡು ಬಗೆಗಳಿವೆ. ಒಂದು ಸಹಜಧರ್ಮವಾದರೆ, ಇನ್ನೊಂದು ಆಗಂತುಕ ಧರ್ಮ. ಸ್ವಭಾವತಃ ಒಳ್ಳೆಯವನಾಗಿದ್ದರೂ ಪ್ರಭಾವದಿಂದ ದುಷ್ಟನಾಗಬಹುದು. ಸ್ವಭಾವದಿಂದ ಕೆಟ್ಟವನಾಗಿದ್ದರೂ ಪ್ರಭಾವತಃ ಮತ್ತಷ್ಟು ದುಷ್ಟನಾಗಬಹುದು. ರಕ್ಷಕರಾರೂ ಇಲ್ಲದಾಗ ಕಳ್ಳತನ ಆಗುತ್ತದೆ. ಆ ಹೊತ್ತಿಗೆ ಸಹಜವಾಗಿ ಕಳ್ಳರಾಗದವರೂ ಕಳ್ಳರಾಗುತ್ತಾರೆ, ಸಹಜ ಕಳ್ಳರೂ ಕಳ್ಳರಾಗುತ್ತಾರೆ. ಎಲ್ಲ ಜೀವರಾಶಿಗಳಲ್ಲಿ ಸ್ವಭಾವತನ ಇದೆ. ಈಗ ಕೃತಕತನ ಹೆಚ್ಚುತ್ತಿಜರುವುದರಿಂದ ಬಹುಮಂದಿ ಕೆಲವೇ ಕೆಲವು ಕ್ಷೇತ್ರಗಳಿಗೆ ಧುಮುಕುತ್ತಿದ್ದಾರೆ. ಇದರಿಂದ ಹಲವು ಕ್ಷೇತ್ರಗಳು ಬಾಗಿಲು ಹಾಕಿಕೊಳ್ಳುತ್ತಿವೆ. ಕೆಲವು ಕಾಲ ಎಲ್ಲರೂ ಫೈನಾನ್‌ಸ್ ಕಂಪೆನಿಗಳನ್ನು ತೆರೆದರು, ಕೆಲವು ಕಾಲ ಟೆಲಿಫೋನ್ ಬೂತುಗಳು ಬಂದವು. ಈಗ ಬೂತುಗಳು ಯಾವುವೂ ಇಲ್ಲ. ಈಗ ಎಲ್ಲರೂ ಎಂಜಿನಿಯರ್, ವೈದ್ಯರಾಗುತ್ತಿದಾರೆ.
ಕೃಷಿ ಮಾಡುವವರು ಯಾರೂ ಇಲ್ಲ. ಜನರು ಇದ್ದಾರೆ, ನಿರುದ್ಯೋಗಿಗಳೂ ಇದ್ದಾರೆ. ಆದರೆ ಹಳ್ಳಿಗಳ ಮನೆಗಳು ಖಾಲಿ ಬೀಳುತ್ತಿವೆ. ಪೇಟೆಯ ಬದುಕು ಶ್ರೇಷ್ಠ ಎಂಬ ಪರಿಕಲ್ಪನೆ ಬಂದಿರುವುದೇ ಇದಕ್ಕೆ ಕಾರಣ. ಟ್ರೆಂಡ್ ಸೆಟ್ ಮಾಡುವವರು ಹೀಗೆ ಮಾಡಿಟ್ಟಿದ್ದಾರೆ. ಮನೆಯಲ್ಲಿ ಮಹಿಳೆಯರೇ ಟ್ರೆಂಡ್ ಸೆಟ್ ಮಾಡುವುದರಲ್ಲಿ ನಿರ್ಣಾಯಕರು. ಆ ಕಳವಳವೇ ಅರ್ಜುನನಲ್ಲಿ ಕಾಣುತ್ತದೆ. ಎಲ್ಲ ಕಡೆ ಈ ಅಸಮತೋಲನ ಕಾಣುತ್ತಿದೆ. ಕೆಲವು ಕಡೆ ಕೊರತೆ, ಕೆಲವು ಕಡೆ ಒರತೆ…
-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811