Advertisement
“ಒಳ್ಳೆಯದಾದರೆ ಗುರು, ದೇವರಿಂದ, ಕೆಟ್ಟದ್ದಾದರೆ ನಮ್ಮಿಂದ’ ಎನ್ನುವುದು ಸಜ್ಜನರ ಲಕ್ಷಣ. ದುಯೋಧನ ಸೇನಾನಾಯಕರಾದ ಭೀಷ್ಮಾಚಾರ್ಯರನ್ನು ರಕ್ಷಿಸಲು ಗುಂಪಿನವರಿಗೆ ಹೇಳುತ್ತಾನೆ. ಅಂದರೆ ಭೀಷ್ಮರ ಮೇಲೆ ಆತನಿಗೆ ಮನಸ್ಸಿರಲಿಲ್ಲ. ಹಿರಿಯರಾದ ಕಾರಣ ಬಿಡಲು ಆಗದೆ ಸೇನಾಪತಿಯಾಗಿ ಮಾಡಿದ್ದಾನೆ. ಆತ ಭೀಷ್ಮರಿಗಿಂತಲೂ ದ್ರೋಣರಿಗೆ ಹತ್ತಿರವಾಗಿದ್ದ. ಭೀಷ್ಮರು ಪಾಂಡವಪಕ್ಷಪಾತಿ ಎಂದು ದುರ್ಯೋಧನ ತಿಳಿದುಕೊಂಡಿದ್ದ. ವಯಸ್ಸಾಗಿದ್ದರೂ ಭೀಷ್ಮರು ಆ ಕಾಲದಲ್ಲಿ ನಂಬರ್ 1 ವೀರರು. ಅವರ ಮುಖ್ಯ ಉದ್ದೇಶ ಸಿಂಹಾಸನ, ವಂಶದ ರಕ್ಷಣೆ. ದುರ್ಯೋಧನ ಹೇಳಿದ್ದನ್ನು ಕೇಳಿಸಿಕೊಂಡ ಭೀಷ್ಮರು ಶಂಖನಾದವನ್ನು (ಸಿಂಹನಾದ) ಮೊಳಗಿಸಿದರು. ತತ್‌ಕ್ಷಣವೇ ಕೃಷ್ಣಾರ್ಜುನರು ಶಂಖವನ್ನು ಊದಿದರು. ಅಂದರೆ ಮೊದಲು ಯುದ್ಧವನ್ನು ಸಾರಿದವರು ಕೌರವರು ಎಂಬುದು ಶಂಖನಾದದಿಂದ ಸಾಬೀತಾಗುತ್ತದೆ. ಜಗಳದಲ್ಲಿ ಮೊದಲು ಆರಂಭಿಸಿದವನೇ ಆರೋಪಿ.
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811