Advertisement

Udupi; ಗೀತಾರ್ಥ ಚಿಂತನೆ 62 : ಆಯುಕ್ತ ಶಬ್ದದ ಉಗಮ ಗೀತೆಯಲ್ಲಿ

12:49 AM Oct 13, 2024 | Team Udayavani |

ಶರೀರವೆಂಬ ರಥದಲ್ಲಿ ಭಗವಂತನನ್ನು ಕುಳ್ಳಿರಿಸಿ ರಥವನ್ನು ಓಡಿಸಿದರೆ ಜಯ ನಿಶ್ಚಿತ ಎನ್ನುವ ಸಂದೇಶವನ್ನು ಗೀತೆಯ 18ನೆಯ ಅಧ್ಯಾಯದ ಕೊನೆಯ ಶ್ಲೋಕ (ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ|)ನೀಡುತ್ತದೆ. ಈ ಮಾತನ್ನು ಹೋಲಿಸುವಂತೆ ಕಾಠಕೋಪನಿಷತ್ತಿನಲ್ಲಿ “ಶರೀರಂ ರಥಮೇವ ಚ’ ಎಂದು ಬಣ್ಣಿಸಲಾಗಿದೆ. “ಶ್ವೇತೈರ್ಹಯೈರ್ಯುಕ್ತೇ’ ಎಂಬಲ್ಲಿರುವ “ಯುಕ್ತ’ ಎಂಬ ಶಬ್ದದ ಅರ್ಥ ಯೋಗದಿಂದ ಸಹಿತನಾದವ. ಕೃಷ್ಣ ಹಲವು ಬಾರಿ “ಯುಕ್ತ’ ಶಬ್ದವನ್ನು ಬಳಸಿದ್ದಾನೆ (ಯುಕ್ತಾಹಾರ ವಿಹಾರಸ್ಯ ಇತ್ಯಾದಿ) ಈ ಶಬ್ದಕ್ಕೆ ಬಹಳ ಮಹತ್ವವಿದೆ. ಕುದುರೆಗಳನ್ನು (ಹಯ) ಇಂದ್ರಿಯಗಳಿಗೆ ಹೋಲಿಸಲಾಗಿದೆ. ಕಟ್ಟಲ್ಪಟ್ಟ ಕುದುರೆಗಳಲ್ಲ, ಸಹಜವಾಗಿ ಇದ್ದ ಕುದುರೆಗಳು. ಹಯಗಳಿಂದ ಅರ್ಹವಾದವು. ಯುಕ್ತವಾದುದು = ಸೂಕ್ತವಾದುದು ಎಂಬರ್ಥದಲ್ಲಿ ಯುಕ್ತವಾದ ಕುದುರೆಗಳೇ ಯುದ್ಧದಲ್ಲಿ ಜಯಶಾಲಿಗಳಾಗಲು ಬೇಕು. ಅವುಗಳಿಗೆ ಯುದ್ಧದಲ್ಲಿ ತರಬೇತಿ ಇರಬೇಕು. ಇಂದ್ರಿಯಗಳಂತೆ ಯದ್ವಾತದ್ವಾ ಓಡುತ್ತಿದ್ದರೆ ಅಂತಹ ಕುದುರೆಗಳಿಂದ ಜಯ ಗಳಿಸುವುದು ಅಸಾಧ್ಯ. ಶ್ವೇತವರ್ಣದ (ಬೆಣ್ಣೆ ಬಣ್ಣದ) ತಾಜಾ ಕುದುರೆಗಳು ಆ ಕಾಲದ ಯುದ್ಧದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದವು. ಈಗಲೂ “ಆಯುಕ್ತರು’ (ಕಮಿಷನರ್‌ ಎಂದು ಕರೆಯುತ್ತಾರೆ) ಎಂಬ ದೊಡ್ಡ ಅಧಿಕಾರವಿರುವ ಹುದ್ದೆ ಇದೆ. ಇದು ಕೃಷ್ಣ ಕೊಟ್ಟ ಬಿರುದು.

Advertisement

-ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

 

Advertisement

Udayavani is now on Telegram. Click here to join our channel and stay updated with the latest news.

Next