ತರಗತಿಯಲ್ಲಿ ಕೆಲವು ಮಕ್ಕಳಲ್ಲಿ ಐಫೋನ್ ಇದೆ ಅಂತಾದರೆ ಇತರ ಮಕ್ಕಳೂ ತಾವು ಅವರಿಗಿಂತ ಕಡಿಮೆಯಾಗಬಾರದೆಂದು ಐಫೋನ್ ಕೊಡಿಸಲು ಕೋರುತ್ತಾರೆ. ಕೆಲವು ಮಕ್ಕಳು ಕಾರಿನಲ್ಲಿ ಶಾಲೆಗೆ ಹೋಗುತ್ತಿದ್ದರೆ ಸ್ಕೂಟರ್, ಬೈಕ್‌ನಲ್ಲಿ ಬರುವ ಇತರ ಮಕ್ಕಳಿಗೂ ಸಮಾಧಾನವಿರುವುದಿಲ್ಲ.
ಇದಾವುದೂ ಇಲ್ಲಿಗೆ ನಿಲ್ಲದೆ 3ಜಿ, 4ಜಿ, 5 ಜಿ ಹೀಗೆ ಮುಂದುವರಿಯುತ್ತಲೇ ಇರುತ್ತದೆ. ಕಾರುಗಳಲ್ಲಿಯೂ ಬೆಂಝ್, ಟೊಯೊಟಾದಂತಹ ನಾನಾ ವಿಧದ ಕಾರುಗಳು, ಹೊಸ ಹೊಸ ಮಾಡೆಲ್ ಕಾರುಗಳು ಮಾರುಕಟ್ಟೆಗೆ ಲಗ್ಗೆ ಹಾಕುತ್ತಲೇ ಇರುತ್ತವೆ. ಮನೆ ನಿರ್ಮಾಣವೂ ಹೀಗೆಯೇ ಆಗುತ್ತಿದೆ. ಅವರಿಗಿಂತ ಹೆಚ್ಚು ಆಕರ್ಷಕ ಮನೆ ನಮ್ಮದಾಗಿರಬೇಕು ಎಂಬ ಭಾವ ಎದ್ದು ಕಾಣುತ್ತದೆ.
ಸ್ವಭಾವ, ಪ್ರಭಾವಗಳಿದ್ದರೂ ಸ್ವಭಾವ ಪರಿಭೂತವಾಗಿರುತ್ತದೆ, ಪ್ರಭಾವವೇ ಹೆಚ್ಚು ಪ್ರಭಾವಿಯಾಗುತ್ತದೆ. ನಾವು ಇತರರಿಗೆ ಸಮಾನವಾಗಿರಬೇಕು ಎಂಬ ಭಾವನೆ ದಿನೇ ದಿನೇ ವೃದ್ಧಿಯಾಗುತ್ತಿದೆ. ಸಾಮಾಜಿಕ ಸ್ತರದಲ್ಲಿ ಪ್ರಮುಖ ಉದ್ದೇಶ ಸ್ಟೇಟಸ್ ಕಾಪಾಡಿಕೊಳ್ಳುವುದು. ಇವೆಲ್ಲವುದರ ಮೂಲ ಮನೆಯಾಗಿರುತ್ತದೆ.
ಮನೆಯಲ್ಲಿ ಸ್ತ್ರೀಯರು ಸ್ಟೇಟಸ್ ಕಾಪಾಡಿಕೊಳ್ಳಲು ಅಪೇಕ್ಷಿಸಿದಾಗ ಪುರುಷರು ಸಮ್ಮತಿಸುತ್ತಾರೆ. ಏನಾದರೂ ಮಾಡಿ ಸಂಪಾದನೆ ಹೆಚ್ಚಿಸಲು ಕಾರಣವಾಗುತ್ತದೆ. ಸ್ತ್ರೀಯರು ನಿರ್ಧರಿಸಿದರೆ ಮಾತ್ರ ಇದಕ್ಕೆ ಕಡಿವಾಣ ಸಾಧ್ಯ. ಸ್ತ್ರೀಯರು ನ್ಯಾಯೋಚಿತ ಸಂಪಾದನೆ ಮಾತ್ರ ಸಾಕು ಎಂದು ಹೇಳಿದರಷ್ಟೇ ಮೌಲ್ಯ ಸ್ಥಾಪನೆ ಸಾಧ್ಯ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
– ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ ಗೀತಾ ಮಂದಿರ,ಉಡುಪಿ ಸಂಪರ್ಕ ಸಂಖ್ಯೆ: 8055338811