Advertisement

Udupi: ಗೀತಾರ್ಥ ಚಿಂತನೆ-93: ಶ್ರೀಕೃಷ್ಣನಿಗೆ ಶರಣಾದ ಅರ್ಜುನ

01:17 AM Nov 14, 2024 | Team Udayavani |

ಯಾವತ್ತೂ ನಮ್ಮ ಭಾವನೆಗಳಿಗೆ ಸರಿಯಾಗಿ ನಾವು ವಾದಿಸುವುದು. ಅರ್ಜುನನಿಗಾದದ್ದೂ ಹೀಗೆಯೇ. “ಕೌರವರನ್ನು ಕೊಂದು ಸುಖಪಡುವುದೇನಿದೆ? ಒಂದೋ ಭೋಗ, ಒಂದೋ ಭಿಕ್ಷೆ (ಹಿಂದೆ ಹೇಗಿದ್ದರೂ ಭಿಕ್ಷಾಟನೆ ಅನುಭವವಿದೆಯಲ್ಲ?). ರಾಜ್ಯ ಸಿಗದಿದ್ದರೆ ಬೇಡ. ಒಂದು ವೇಳೆ ಅವರೇ ನಮ್ಮನ್ನು ಕೊಂದರೆ ಅತ್ತ ರಾಜ್ಯವೂ ಇಲ್ಲ, ಸುಖವೂ ಇಲ್ಲ, ಇತ್ತ ಪಾಪ ಮತ್ತು ಹಿರಿಯರನ್ನು ಇದಿರಿಸಿದೆವೆಂಬ ಅಪಚಾರ ಬೇರೆ. ಇದು ಸಂದಿಗ್ಧ ವಿಷಯ’ ಎನ್ನುತ್ತಾನೆ ಅರ್ಜುನ. ಮನುಷ್ಯ ಯಾರಿಗೋಸ್ಕರವಾದರೂ ಬದುಕುತ್ತಾನೆ? ಅರ್ಜುನ ಯಾರಿಗೋಸ್ಕರ ಬದುಕಿದ್ದಾನೋ ಅವರೇ ಎದುರು ನಿಂತಿದ್ದಾರೆ. ಒಂದು ವೇಳೆ ಕೌರವರೇ ಸತ್ತು ಹೋದರೆ ಲೋಕ ಶೂನ್ಯವಾಗಿ ಕಾಣುತ್ತದೆ.

Advertisement

ಸ್ನೇಹಿತರು, ಪಕ್ಕದ ಮನೆಯವರು, ಬಂಧುಗಳು ಹೀಗೆ ಯಾವುದಾದರೂ ಒಂದು ಬೆಂಚ್‌ಮಾರ್ಕ್‌ನಡಿ ತುಲನೆ ಮಾಡುತ್ತೇವೆ. ಇವರಿಗಿಂತ ಹೊರಗಿನ ಲೋಕದವರು ಇವರಿಗೆ ಬೇಡವೇ ಬೇಡ. ಸ್ಪರ್ಧೆ ನಡೆಸುವುದು ಸಮಾನಮನಸ್ಕರ ಜತೆ. ಕೈಕೇಯಿ ಅಷ್ಟೆಲ್ಲ ಹಠ ಹಿಡಿದದ್ದು ಕೌಸಲ್ಯೆ ಜತೆಗಿನ ಸ್ಪರ್ಧೆಗಾಗಿ. ಅರ್ಜುನನಲ್ಲಿ ಭಾವನೆ ಮತ್ತು ವಿಚಾರಗಳು ಮಿಶ್ರವಾಗಿದೆ. ಒಂದಕ್ಕೊಂದು ಅಡ್ಡ ಬರುತ್ತದೆ. ನಿಶ್ಚಯ ಮಾಡುವುದು ಕಷ್ಟವಾಗುತ್ತದೆ. ನಾನು ನಿನ್ನಲ್ಲಿ ದೈನ್ಯದಿಂದ ಕೇಳುತ್ತಿದ್ದೇನೆ. ಯಾವುದು ಧರ್ಮ? ಯಾವುದು ಅಧರ್ಮ ಎನ್ನುವುದನ್ನು ಶಿಷ್ಯನಾಗಿ ನನಗೆ ಹೇಳು ಎನ್ನುತ್ತಾನೆ.

 

Advertisement

Udayavani is now on Telegram. Click here to join our channel and stay updated with the latest news.

Next