Advertisement

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

06:06 PM Nov 05, 2024 | Team Udayavani |

ಅರ್ಜುನನ ಮನಸ್ಸಿನಲ್ಲಿರುವುದು ಕಶ್ಮಲ ಎಂದು ಕೃಷ್ಣ ಬೆಟ್ಟು ಮಾಡಿದ. ಕೊಳೆಯಲ್ಲಿ ಎರಡು ಬಗೆ ಮೊದಲನೆಯದು ಕಶ್ಮಲ, ಎರಡನೆಯದು ಕಲ್ಮಶ. ಕಶ್ಮಲ- ಒಳಗಿನ ಕೊಳೆ. ಕಲ್ಮಶ- ಹೊರಗಿನ ಕೊಳೆ. ಎರಡೂ ಕೊಳೆಯೇ. ವಿಷಮ ಸ್ಥಿತಿಯಲ್ಲಿ ಈ ಮಾತು ಬಂದಿದೆ. ಯುದ್ಧಕ್ಕೆ ಹೊರಡುವಾಗ ಅರ್ಜುನ ತನ್ನ ಭಾವನೆ ಹೇಳಿದ್ದರೆ ಬೇರೆ ವಿಷಯ. ಯುದ್ಧಕ್ಕೆ ಬಂದ ಮೇಲೆ ಹೀಗಾಗಬಾರದು. ಯಾವುದಕ್ಕಾದರೂ ಒಂದು ಸಮಯವಿರುತ್ತದೆ. ವಿಷಮ ಪರಿಸ್ಥಿತಿಯಲ್ಲಿ ಹೇಳುತ್ತಿದ್ದಿಯಲ್ಲ!

Advertisement

ಪ್ರಬುದ್ಧರಾದವರಿಗೆ ಇದು ಹೇಳಿಸಿದ್ದಲ್ಲ, ಅಕೀರ್ತಿಕರ. ವಿಚಾರವಿಲ್ಲದೆ ಭಾವನೆ ಇದ್ದರೂ, ವಿಚಾರವಿದ್ದು ಭಾವನೆ ಇದ್ದರೂ ಪ್ರಯೋಜನವಿಲ್ಲ. ವಿಚಾರ ಮುಂದಿರಬೇಕು, ಭಾವನೆ ಹಿಂದಿರಬೇಕು. ನಮ್ಮವರು ಸಾಯುತ್ತಾರೆ ಎಂಬುದು ಮುಂದೆ ಬಂದಿದೆ. ಇಲ್ಲಿ ವಿಚಾರಗಳಿಲ್ಲ. ವಿಚಾರದ ಅಂಶ ಹೆಚ್ಚಿರಬೇಕು, ಭಾವನೆ ಕಡಿಮೆ ಇರಬೇಕು. ಅದುವೇ ಭಗವಂತನ ವಿಷಯ ಬಂದಾಗ ಜ್ಞಾನ, ಭಾವನೆ, ಭಕ್ತಿ ಮೊದಲು ಇರಬೇಕು. ಅನಂತರ ವಿಚಾರ ಇರಬೇಕು. ಈಗ ಕಂಡುಬರುವ ಧ್ಯಾನ ಶಿಬಿರಗಳಲ್ಲಿ ದೇವರ ಧ್ಯಾನ ಕಲಿಸುತ್ತಾರೆ. ಆದರೆ ಭಗವಂತನ ಸ್ಥಿತಿ ಬಗೆಗೆ ವಿಷಯಗಳೇ ಇರುವುದಿಲ್ಲ. ಇದನ್ನು ನಿರ್ವಿಶೇಷ ಧ್ಯಾನ ಎನ್ನಬಹುದು. ಮೊದಲು ವಿಚಾರ ಮಾಡಬೇಕು, ಆಮೇಲೆ ಭಾವನೆ ಬರಬೇಕು. ಎಲ್ಲ ವಿಚಾರಗಳಲ್ಲೂ ಹೀಗೆ. ತಣ್ತೀ ನಿಶ್ಚಯ ಮೊದಲಿರಬೇಕು.

– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ

– ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ ಗೀತಾ ಮಂದಿರ,
ಉಡುಪಿ ಸಂಪರ್ಕ ಸಂಖ್ಯೆ: 8055338811

Advertisement

Udayavani is now on Telegram. Click here to join our channel and stay updated with the latest news.

Next