Advertisement

ಟ್ವೆಂಟಿ20 ಪಂದ್ಯ: ಶಾಹಿದ್‌ ಅಫ್ರಿದಿ ಸ್ಫೋಟಕ ಶತಕ

09:16 AM Aug 24, 2017 | |

ಡರ್ಬಿಶೈರ್‌: ಪಾಕಿಸ್ಥಾನದ ಮಾಜಿ ಆಲ್‌ರೌಂಡರ್‌ ಶಾಹಿದ್‌ ಅಫ್ರಿದಿ ಸಿಡಿಸಿದ ಸ್ಫೋಟಕ ಶತಕದಿಂದಾಗಿ ಹ್ಯಾಂಪ್‌ಶೈರ್‌ ತಂಡವು ಡರ್ಬಿಶೈರ್‌ನಲ್ಲಿ ನಡೆದ ಟ್ವೆಂಟಿ20 ಬ್ಲಾಸ್ಟ್‌ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಫಾಲ್ಕನ್ಸ್‌ ತಂಡದೆದುರು 101 ರನ್ನುಗಳಿಂದ ಜಯ ಸಾಧಿಸಿದೆ. 

Advertisement

ಡರ್ಬಿಶೈರ್‌ನಲ್ಲಿ ನಡೆದ ಈ ಪಂದ್ಯದಲ್ಲಿ 37ರ ಹರೆಯದ ಅಫ್ರಿದಿ 10 ಬೌಂಡರಿ ಮತ್ತು 7 ಸಿಕ್ಸರ್‌ ನೆರವಿನಿಂದ ಕೇವಲ 42 ಎಸೆತಗಳಲ್ಲಿ ಶತಕ ಸಿಡಿಸಿದರು. ಇದರಿಂದಾಗಿ ಹ್ಯಾಂಪ್‌ಶೈರ್‌ ತಂಡ 8 ವಿಕೆಟಿಗೆ 249 ರನ್ನುಗಳ ಬೃಹತ್‌ ಮೊತ್ತ ಪೇರಿಸಿತು. ಇದು ಹ್ಯಾಂಪ್‌ಶೈರ್‌ ತಂಡ ಟ್ವೆಂಟಿ20 ಪಂದ್ಯದಲ್ಲಿ ದಾಖಲಿಸಿದ ಗರಿಷ್ಠ ಮೊತ್ತವಾಗಿದೆ. ನಾಯಕ ಜೇಮ್ಸ್‌ ವಿನ್ಸ್‌ 36 ಎಸೆತಗಳಿಂದ 55 ರನ್‌ ಹೊಡೆದರು. ಹ್ಯಾಂಪ್‌ಶೈರ್‌ ಈ ಹಿಂದೆ 2006ರಲ್ಲಿ ಮಿಡ್ಲ್ಸೆಕ್ಸ್‌ ವಿರುದ್ಧ 2 ವಿಕೆಟಿಗೆ 225 ರನ್‌ ಪೇರಿಸಿದ್ದು ಈ ಹಿಂದಿನ ಗರಿಷ್ಠ ಮೊತ್ತವಾಗಿತ್ತು.

ಗೆಲ್ಲಲು 250 ರನ್‌ ಗಳಿಸುವ ಗುರಿ ಪಡೆದ ಫಾಲ್ಕನ್ಸ್‌ ತಂಡ 148 ರನ್ನಿಗೆ ಆಲೌಟಾಗಿ ಶರಣಾ ಯಿತು. ಲಿಯಮ್‌ ಡಾಸನ್‌ ಮತ್ತು ಅಬೋಟ್‌ ತಲಾ 3 ವಿಕೆಟ್‌ ಕಿತ್ತರು. 20 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದ್ದ ಅಫ್ರಿದಿ 65 ರನ್‌ ತಲುಪಿದ ವೇಳೆ ಜೀವದಾನ ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next