ಮುಂಬಯಿ: ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಚಿತ್ರರಂಗದಲ್ಲಿ ದೊಡ್ಡ ದೊಡ್ಡ ಅವಕಾಶಗಳು ಹುಡುಕಿಕೊಂಡು ಬರುತ್ತಿದೆ. ಕನ್ನಡದಿಂದ ಸಿನಿ ಜರ್ನಿ ಆರಂಭಿಸಿದ ರಶ್ಮಿಕಾ ತಮಿಳು,ತೆಲುಗು ಹಾಗೂ ಹಿಂದಿಯ ಹಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆಯುತ್ತಿದ್ದಾರೆ.
ಇದನ್ನೂ ಓದಿ: Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
ಇತ್ತೀಚೆಗೆ ಪ್ಯಾನ್ ಇಂಡಿಯಾ ʼಪುಷ್ಪ-2ʼ ನಲ್ಲಿ ʼಶ್ರೀವಲ್ಲಿʼಯಾಗಿ ಮಿಂಚಿರುವ ರಶ್ಮಿಕಾ ಇದಾದ ಬಳಿಕ ಸಲ್ಮಾನ್ ಖಾನ್ (Salman Khan) ಅವರ ʼಸಿಕಂದರ್ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಮತ್ತೊಬ್ಬ ಸ್ಟಾರ್ ಬಾಲಿವುಡ್ ನಟನೊಂದಿಗೆ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
2012ರಲ್ಲಿ ತೆರೆಕಂಡಿದ್ದ ʼಕಾಕ್‌ಟೈಲ್ʼ ಬಾಲಿವುಡ್‌ನಲ್ಲಿ ಭಾರಿ ಹಿಟ್ ಆಗಿತ್ತು. ಇದು ಪ್ರೀತಿ, ಸ್ನೇಹ ಮತ್ತು ಆಧುನಿಕ ಸಂಬಂಧಗಳ ಸುತ್ತ ಸಾಗಿದ ಸಿನಿಮಾವಾಗಿತ್ತು. ಸೈಫ್ ಅಲಿಖಾನ್, ದೀಪಿಕಾ ಪಡುಕೋಣೆ ಹಾಗೂ ಡಯಾನಾ ಪೆಂಟಿ ಅವರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಇದೀಗ ʼಕಾಕ್ ಟೈಲ್ʼ (Cocktail 2) ಸೀಕ್ವೆಲ್ ಮಾಡಲು ನಿರ್ಮಾಪಕ ದಿನೇಶ್ ವಿಜನ್ ಮುಂದಾಗಿದ್ದು, ಹೊಸ ಜೋಡಿಯನ್ನು ತೆರೆ ಮೇಲೆ ತರಲಿದ್ದಾರೆ.
ʼಕಾಕ್ ಟೈಲ್ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ಶಾಹಿದ್ ಕಪೂರ್ (Shahid Kapoor) ಕಾಣಿಸಿಕೊಳ್ಳಲಿದ್ದಾರೆ. ಇವರಿಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಬಣ್ಣ ಹಚ್ಚಲಿದ್ದಾರೆ ಎಂದು ವರದಿಯಾಗಿದೆ. ಇದರ ಜತೆಗೆ ಎರಡನೇ ನಾಯಕಿಯಾಗಿ ಕೃತಿ ಸನೋನ್ (Kriti Sanon) ಅವರು ತೆರೆ ಹಂಚಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಮುಂದಿನ ದಿನಗಳಲ್ಲಿ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ. ʼಕಾಕ್ ಟೈಲ್ʼ ಸಿನಿಮಾವನ್ನು ಹೋಮಿ ಅದಾಜಾನಿಯಾ ಡೈರೆಕ್ಟ್ ಮಾಡಿದ್ದರು. ಇದರ ಎರಡನೇ ಭಾಗಕ್ಕೂ ಅವರೇ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂದು ವರದಿ ತಿಳಿಸಿದೆ.
2025 ರ ಏಪ್ರಿಲ್-ಮೇ ತಿಂಗಳಿನಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ.
ರಶ್ಮಿಕಾ ಮಂದಣ್ಣ ತಮಿಳಿನ ʼಕುಬೇರʼ , ಹಿಂದಿಯ ಛಾವಾ , ಥಾಮ, ʼದಿ ಗರ್ಲ್ ಫ್ರೆಂಡ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.