Advertisement

ICC ಏಕದಿನ, ಟಿ20 ಕ್ರಿಕೆಟಿಗ ಪ್ರಶಸ್ತಿ ನಾಮಿನೇಶನ್‌ ಪಟ್ಟಿ ಬಿಡುಗಡೆ; ಬುಮ್ರಾ ಹೆಸರಿಲ್ಲ

04:02 PM Dec 29, 2024 | Team Udayavani |

ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ರವಿವಾರ (ಡಿ.29) ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನಗಳನ್ನು ಪ್ರಕಟಿಸಿದೆ. ವರ್ಷದ ಪುರುಷರ ಟಿ20 ಕ್ರಿಕೆಟಿಗ ಮತ್ತು ಏಕದಿನ ಕ್ರಿಕೆಟಿಗ ಪ್ರಶಸ್ತಿಗೆ ರವಿವಾರ ತಲಾ ನಾಲ್ಕು ಹೆಸರುಗಳನ್ನು ನಾಮ ನಿರ್ದೇಶನ ಮಾಡಲಾಗಿದೆ.

Advertisement

ವರ್ಷದ ಟಿ20 ಕ್ರಿಕೆಟಿಗರ ಪಟ್ಟಿಯಲ್ಲಿ ಭಾರತದ ಎಡಗೈ ವೇಗಿ ಅರ್ಶದೀಪ್‌ ಸಿಂಗ್‌ ಸ್ಥಾನ ಪಡೆದಿದ್ದಾರೆ. ಅರ್ಶದೀಪ್ 2024 ರ ಟಿ20 ವಿಶ್ವಕಪ್‌ ನಲ್ಲಿ ಎಂಟು ಪಂದ್ಯಗಳಿಂದ 12.64 ರ ಸರಾಸರಿಯಲ್ಲಿ ಮತ್ತು 7.16 ರ ಎಕಾನಮಿಯಲ್ಲಿ 17 ವಿಕೆಟ್‌ ಗಳನ್ನು ಗಳಿಸಿದ್ದರು. ಅವರು ಜಂಟಿಯಾಗಿ ಕೂಟದ ಅತಿ ಹೆಚ್ಚು ವಿಕೆಟ್‌ ಪಡೆದ ಸಾಧನೆ ಮಾಡಿದರು.

ಆದರೆ, ಅಚ್ಚರಿಯಾಗುವಂತೆ, 2024 ರ ಟಿ20 ವಿಶ್ವಕಪ್‌ನಲ್ಲಿ ಪಂದ್ಯಾವಳಿಯ ಆಟಗಾರ ಎಂದು ಗುರುತಿಸಲ್ಪಟ್ಟಿದ್ದರೂ ಸಹ, ಪ್ರತಿಷ್ಠಿತ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಆಟಗಾರರಲ್ಲಿ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಹೆಸರಿಲ್ಲ.

ಉಳಿದಂತೆ ವರ್ಷದ ಟಿ20 ಆಟಗಾರ ಪ್ರಶಸ್ತಿಗೆ ಆಸ್ಟ್ರೇಲಿಯಾದ ಟ್ರಾವಿಸ್‌ ಹೆಡ್‌, ಪಾಕಿಸ್ತಾನದ ಬಾಬರ್‌ ಅಜಂ ಮತ್ತು ಜಿಂಬಾಬ್ವೆಯ ಸಿಕಂದರ್‌ ರಾಜಾ ಹೆಸರನ್ನು ನಾಮಿನೇಟ್‌ ಮಾಡಲಾಗಿದೆ.

ಏಕದಿನ ವರ್ಷದ ಆಟಗಾರರ ಪಟ್ಟಿ

Advertisement

ಇದೇ ವೇಳೆ ಐಸಿಸಿ ಏಕದಿನ ವರ್ಷದ ಆಟಗಾರ ಪ್ರಶಸ್ತಿಗೆ ನಾಲ್ವರನ್ನು ನಾಮ ನಿರ್ದೇಶನ ಮಾಡಲಾಗಿದೆ. ಆದರೆ ಇದರಲ್ಲಿ ಯಾವುದೇ ಭಾರತೀಯರ ಹೆಸರಿಲ್ಲ. ಇದರಲ್ಲಿ ಶ್ರೀಲಂಕಾದ ಇಬ್ಬರು ಸ್ಥಾನ ಪಡೆದಿದ್ದಾರೆ. ಅವರೆಂದರೆ ವಾನಿಂದು ಹಸರಂಗ ಮತ್ತು ಕುಸಾಲ್‌ ಮೆಂಡಿಸ್.‌

ಏಕದಿನ ಕ್ರಿಕೆಟ್‌ ಪ್ರಶಸ್ತಿ ರೇಸ್‌ ನಲ್ಲಿರುವ ಇತರ ಇಬ್ಬರೆಂದರೆ ವೆಸ್ಟ್‌ ಇಂಡೀಸ್‌ ನ ಶರ್ಫೇನ್‌ ರುದರ್ಫೋರ್ಡ್‌ ಮತ್ತು ಅಫ್ಘಾನಿಸ್ತಾನದ ಅಜ್ಮತುಲ್ಲಾ ಓಮರ್‌ ಝೈ.

Advertisement

Udayavani is now on Telegram. Click here to join our channel and stay updated with the latest news.

Next