Advertisement

ಜನರಿಂದಲೇ ಸಮಸ್ಯೆ ಪರಿಹರಿಸಲು ಯತ್ನ 

04:38 PM Jan 26, 2018 | |

ಗುಬ್ಬಿ: ಸ್ಥಳೀಯವಾಗಿ ವಿಧಾನಸಭಾ ಕ್ಷೇತ್ರ, ಜಿಲ್ಲಾ ಮಟ್ಟ ಹಾಗೂ ರಾಜ್ಯದ ಮಟ್ಟದ ಪ್ರಣಾಳಿಕೆ ತಯಾರಿಸುವ ಬಿಜೆಪಿ ಆದ್ಯತೆ ಮೇರೆಗೆ ಸಮಸ್ಯೆಗಳನ್ನ ಪಟ್ಟಿ ಮಾಡಿ ಸೂಕ್ತ ಪರಿಹಾರವನ್ನ ಜನರಿಂದಲೇ ಪಡೆಯುತ್ತಿದೆ ಎಂದು ಬಿಜೆಪಿ ಪ್ರಣಾಳಿಕೆ ಸಮಿತಿ ರಾಜ್ಯ ಸದಸ್ಯ ಹಾಗೂ ಮಾಜಿ ಸಂಸದ ಜಿ.ಎಸ್‌.ಬಸವರಾಜು ತಿಳಿಸಿದರು.

Advertisement

ತಾಲೂಕಿನ ಹೇರೂರು ಗ್ರಾಮದ ಗುರುಸಿದ್ದರಾಮೇಶ್ವರ ಸಮುದಾಯಭವನದಲ್ಲಿ ಬಿಜೆಪಿ ಪಕ್ಷ ಆಯೋಜಿಸಿದ್ದ ನವ ಕರ್ನಾಟಕಕ್ಕಾಗಿ ಜನಪರ ಶಕ್ತಿ ಹಾಗೂ ಪ್ರಣಾಳಿಕೆ ತಯಾರಿಕಾ ಕಾರ್ಯಾಗಾರವನ್ನ ಉದ್ಘಾಟಿಸಿ ಮಾತನಾಡಿದರು.

ಕಾಂಗ್ರೆಸ್‌ಗೆ ಪಾಠ ಕಲಿಸಲು ಕ್ರಮ: ಪ್ರಭಾವಿ ಸಚಿವರು ಹಾಗೂ ಶಾಸಕರ ಕ್ಷೇತ್ರಗಳಿಗೆ ಮಾತ್ರ ಕೋಟ್ಯಂತರ ರೂ. ಅನುದಾನ ನೀಡುವ ತಾರತಮ್ಯವೆಸಗುವ ಕಾಂಗ್ರೆಸ್‌ ಸರ್ಕಾರಕ್ಕೆ ಪಾಠ ಕಲಿಸುವ ನಿಟ್ಟಿನಲ್ಲಿ ಬಿಜೆಪಿ ಮೂರು ಹಂತದ ಪ್ರಣಾಳಿಕೆ ತಯಾರಿಸಿ ರಾಜ್ಯದ ಪ್ರತಿ ವಿಧಾನಸಭಾಕ್ಷೇತ್ರಕ್ಕೆ ಒಂದು ಸಾವಿರ ಕೋಟಿ ರೂ. ಬಿಡುಗಡೆ ಮಾಡುವ ಚಿಂತನೆ ಸಾಕಾರಗೊಳಿಸುತ್ತಿದೆ ಎಂದರು.

ಸಮಾಜದ ಎಲ್ಲಾ ರಂಗದ ಮುಖಂಡರು, ಸಾಮಾನ್ಯ ಮತದಾರರಿಂದಲೂ ಸಮಸ್ಯೆ, ಸಲಹೆ, ಸೂಚನೆಯನ್ನ ಲಿಖೀತ ರೂಪದಲ್ಲಿ ಪಡೆದು ವಿಂಗಡಿಸಿ ಮೂರು ಹಂತದಲ್ಲಿ ಪ್ರಣಾಳಿಕೆ ಸಿದ್ಧಗೊಳಿಸಲಾಗುವುದು ಎಂದರು.

ತೆಂಗು, ಅಡಕೆ ಬೆಳೆಗಾರರ ಹಿತರಕ್ಷಣೆ: ಗುಬ್ಬಿ ಕ್ಷೇತ್ರದ ತೆಂಗು, ಅಡಕೆ ಬೆಳೆಗಾರರ ಕ್ಷೇಮ, ಸಾವಯವ ಕೃಷಿ ಬಗ್ಗೆ ಆದ್ಯತೆ ನೀಡಲಾಗಿದೆ. ಗುಬ್ಬಿ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಹೇರೂರು ಕೆರೆ ಸೇರಿದಂತೆ ತಾಲೂಕಿನ 250 ಕೆರೆಗಳ ಹೂಳು ಎತ್ತುವ ಕಾರ್ಯಕ್ಕೆ ಪ್ರಣಾಳಿಕೆ ಬದ್ಧವಾಗಿರುತ್ತದೆ ಎಂದರು.

Advertisement

ಎಚ್‌ಎಎಲ್‌ ಘಟಕ ಸ್ಥಾಪನೆ: ಈ ಜತೆಗೆ ವಿಶ್ವಮಾನ್ಯ ಪಡೆಯುವ ಮಟ್ಟದಲ್ಲಿ ಎಚ್‌ಎಎಲ್‌ ಘಟಕ ಮೇಲೆªರ್ಜೆಗೇರಿಸಿ ಯುದ್ಧ ವಿಮಾನ ತಯಾರಿಕೆ ಕೂಡಾ ತಯಾರಿಸಲು ಕೇಂದ್ರ ರಕ್ಷಣಾ ಸಚಿವೆ ನಿರ್ಮಲ ಸೀತಾರಾಮನ್‌ ಚಿಂತನೆ ನಡೆಸಿದ್ದಾರೆ ಎಂದರು. ಕಾಂಗ್ರೆಸ್‌ ಸರ್ಕಾರ ಗುತ್ತಿಗೆದಾರರನ್ನು ಸಾಕುತ್ತಿದೆ ಎಂದು ಆಪಾದಿಸಿದರು.

3 ಹಂತದಲ್ಲಿ ಪ್ರಣಾಳಿಕೆ ತಯಾರಿಕೆ: ಬಿಜೆಪಿ ರೈತಮೋರ್ಚಾ ರಾಜ್ಯ ಉಪಾಧ್ಯಕ್ಷ ಎಸ್‌.ಶಿವಪ್ರಸಾದ್‌ ಮಾತನಾಡಿ, ಎಲ್ಲಾ ಪಕ್ಷಗಳು ಭರವಸೆಯ ಪ್ರಣಾಳಿಕೆ ತಯಾರಿಸುತ್ತವೆ. ಆದರೆ ಅನುಷ್ಠಾನದ ಪ್ರಮಾಣ ಮಾತ್ರ ತೀರ ಕಡಿಮೆ ಹಂತದಲ್ಲಿರುತ್ತದೆ. ಈ ನಿಟ್ಟಿನಲ್ಲಿ ಬಿಜೆಪಿ ಮೂರು ಹಂತದಲ್ಲಿ ಪ್ರಣಾಳಿಕೆ ತಯಾರಿಸಿ ಸಮಾಜದ ಕಟ್ಟೆಕಡೆಯ ವ್ಯಕ್ತಿಯಿಂದ ಸಲಹೆ ಪಡೆಯಲಾಗುವುದು ಎಂದರು.

ಬಿಜೆಪಿ ಪ್ರಣಾಳಿಕೆ ಸಮಿತಿ ಜಿಲ್ಲಾ ಸದಸ್ಯ ಎನ್‌.ಸಿ.ಪ್ರಕಾಶ್‌ ಮಾತನಾಡಿ, ಸ್ಥಳೀಯ ಸಮಸ್ಯೆಗಳು ಎಂದಿಗೂ ಪ್ರಣಾಳಿಕೆಯಲ್ಲಿ ಕಾಣುತ್ತಿರಲಿಲ್ಲ. ಶ್ರೀಸಾಮಾನ್ಯ ಬದುಕಿಗೆ ಹತ್ತಿರವಾದ ಸಮಸ್ಯೆಗೆ ಸೂಕ್ತ ಪರಿಹಾರ ಹುಡುಕುವ ಕಾರ್ಯ ಬಿಜೆಪಿ ವಿಧಾನಸಭಾ ಕ್ಷೇತ್ರದ ಪ್ರಣಾಳಿಕೆ ಮೂಲಕ ಸಾಕಾರಗೊಳಿಸಲಿದೆ ಎಂದರು.  ಇದೇ ಸಂದರ್ಭದಲ್ಲಿ ವಿವಿಧ ಸಂಘಸಂಸ್ಥೆಯ ಪದಾಧಿಕಾರಿಗಳು ಸ್ಥಳೀಯ ಸಮಸ್ಯೆಗಳ ಪಟ್ಟಿಯನ್ನು ಮಂಡಿಸಿದರು.

ಕಾರ್ಯಕ್ರಮದಲ್ಲಿ ಗುಬ್ಬಿ ತಾಲೂಕು ಅಧ್ಯಕ್ಷ ಅ.ನ.ಲಿಂಗಪ್ಪ, ಶಿಕ್ಷಣ ಪ್ರಕೋಷ್ಠದ ರಾಜ್ಯ ಸಂಚಾಲಕ ಶ್ರೀನಿವಾಸಯ್ಯ, ಜಾಲತಾಣ ಪ್ರಚಾರ ಸಮಿತಿಯ ಜಿಲ್ಲಾ ಸಂಚಾಲಕ ಗುರುಪ್ರಸಾದ್‌, ಪ್ರಣಾಳಿಕೆ ಸಮಿತಿ ತಾಲ್ಲೂಕು ಸದಸ್ಯ ಷಡಕ್ಷರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಸ್‌.ವಿಜಯ್‌ಕುಮಾರ್‌, ಎಚ್‌.ಎಲ್‌.ಬಸವರಾಜು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next