Advertisement
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರಿಗೆ ನ.14ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿಯಲ್ಲಿ 600 ಕೋ.ರೂ. ಲಾಭಾಂಶ ವಿತರಿಸಿ ಮಾತನಾಡಿದರು.
ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಿರ್ಮಲಾ ಸೀತಾರಾಮನ್ ದೇಶದ ಆರ್ಥಿಕ ಮಂತ್ರಿಯಾದರೆ, ನಾವು ಪ್ರತಿ ಮನೆಯ ಹೆಣ್ಣುಮಕ್ಕಳನ್ನು ಆರ್ಥಿಕ ಮಂತ್ರಿಯಾಗಿಸಿದ್ದೇವೆ. ಯೋಜನೆಯಲ್ಲಿ 55 ಲಕ್ಷ ಮಂದಿಯಲ್ಲಿ 34 ಲಕ್ಷ ಅಂದರೆ ಶೇ.62 ಮಂದಿ ಮಹಿಳೆಯರೇ ಇದ್ದಾರೆ. ವಿಶ್ವದಲ್ಲಿ ಯಾರೂ ಇಷ್ಟು ದೊಡ್ಡ ಮಟ್ಟದಲ್ಲಿ ಸ್ವಸಹಾಯ ಸಂಘದಡಿ ಲಾಭಾಂಶ ವಿತರಿಸಿರಲು ಸಾಧ್ಯವಿಲ್ಲ ಎಂದರು.
Related Articles
ದೇಶದ ನಬಾರ್ಡ್ ಅಧ್ಯಕ್ಷ ಶಾಜಿ ಕೆ.ವಿ. ಮಾತನಾಡಿ, 1982ರಲ್ಲಿ ನಬಾರ್ಡ್ ಹಾಗೂ ಎಸ್‌ಕೆಡಿಆರ್‌ಡಿಪಿ ಜತೆಯಾಗಿ ಸಾಮಾಜಿಕ ಜವಾಬ್ದಾರಿಗಾಗಿ ಹುಟ್ಟಿಕೊಂಡಿತು. ಇಂದು ಶೇ.80ರಷ್ಟು ಗ್ರಾಮೀಣ ಭಾರತವನ್ನು ತಲುಪಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ. ರುಡ್‌ಸೆಟ್ ಜತೆಗೂ ನಬಾರ್ಡ್ ಸಹಭಾಗಿತ್ವ ಹೊಂದಿದ್ದು, ದೇಶದಲ್ಲಿ 575 ಆರ್.ಸಿ.ಟಿ.ಗಳ ಮೂಲಕ ಕೌಶಲಾಭಿವೃದ್ಧಿಗೆ ಆದ್ಯತೆ ನೀಡಿದೆ. ಇದು ಬೇರೆ ರಾಜ್ಯಗಳಿಗೂ ವಿಸ್ತರಿಸ ಬಹುದಾದಂಥ ಯೋಜನೆ ಎಂದರು.
Advertisement
ಆರ್ಥಿಕ ಶಿಸ್ತು ನೀಡಿದೆಎಸ್ಕೆಡಿಆರ್ಡಿಪಿ ಸಿಇಒ ಅನಿಲ್ ಕುಮಾರ್ ಎಸ್.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಕಳೆದ ನಾಲ್ಕು ದಶಕಗಳಿಂದ ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿ ಉಳಿತಾಯದ ಆರ್ಥಿಕ ಶಿಸ್ತು ನೀಡಿದೆ. 2021ರಲ್ಲಿ ಅರ್ಹ ಸ್ವಸಹಾಯ ಸಂಘಗಳಿಗೆ ಲಾಭಾಂಶವನ್ನು ವಿತರಿಸ ಲಾಗಿತ್ತು. ಪ್ರತೀ ಮೂರು ವರ್ಷಗಳಿಗೆ ಲಾಭಾಂಶ ವಿತರಣೆ ಕಾರ್ಯಕ್ರಮ ನಡೆಯುತ್ತಿದ್ದು, ಭಾರತದ ಸ್ವಸಹಾಯ ಸಂಘದ ಇತಿಹಾಸದಲ್ಲೆ ಸುಮಾರು 600 ಕೋ.ರೂ. ಮೊತ್ತದ ಲಾಭಾಂಶ ವಿತರಣೆ ಇದೇ ಮೊದಲು ಎಂದರು. ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವೀ.ಹೆಗ್ಗಡೆ, ಸಂಸದ ಕ್ಯಾ| ಬ್ರಿಜೇಶ್ ಚೌಟ, ಶಾಸಕ ಹರೀಶ್ ಪೂಂಜ, ವಿ.ಪ.ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಉಪಸ್ಥಿತರಿದ್ದರು. ಡಿ.ಸುರೇಂದ್ರ ಕುಮಾರ್, ಸುಪ್ರಿಯಾ ಹಷೇìಂದ್ರ ಕುಮಾರ್, ಡಿ.ಶ್ರೇಯಸ್ ಕುಮಾರ್ ಹಾಗೂ ವಿವಿಧ ಪಾಲುದಾರ ಬ್ಯಾಂಕ್‌ಗಳ ಮುಖ್ಯಸ್ಥರು ಭಾಗವಹಿಸಿದರು. ಮುಖ್ಯ ಹಣಕಾಸು ಅಧಿಕಾರಿ ಶಾಂತಾರಾಮ್ ಆರ್.ಪೈ ನಿರೂಪಿ ಸಿದರು. ಸಮುದಾಯ ವಿಭಾಗ ಪ್ರಾದೇ ಶಿಕ ನಿರ್ದೇಶಕ ಆನಂದ ಸುವರ್ಣ ವಂದಿಸಿದರು. ಕೃಷಿ-ಗ್ರಾಮೀಣಾಭಿವೃದ್ಧಿಯಲ್ಲಿ ಎಐ
2047ರ ಭವಿಷ್ಯದ ಭಾರತವನ್ನು ಪ್ರಧಾನಿ ನರೇಂದ್ರ ಮೋದಿ ಚಿಂತಿಸಿದ್ದಾರೆ. ವಿದೇಶಿ ಶಿಕ್ಷಣ ವೆಚ್ಚವನ್ನು ತಗ್ಗಿಸಲು ಪ್ರತಿಷ್ಠಿತ ವಿದೇಶಿ ವಿವಿಗಳನ್ನು ಭಾರತದಲೇ ಸ್ಥಾಪಿಸಲಿದ್ದೇವೆ. ಕೃಷಿ ಹಾಗೂ ನಗರಾಭಿವೃದ್ಧಿಗೆ (ಎಐ) ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಅತ್ಯಗತ್ಯವಾಗಲಿದೆ. ಉತ್ತಮ ಮಾರುಕಟ್ಟೆ ಒದಗಣೆ ಹಾಗೂ ಗುಣಮಟ್ಟಕ್ಕೆ ಪೂರಕವಾಗಲಿದೆ ಎಂದು ನಿರ್ಮಲಾ ಹೇಳಿದರು.