Advertisement

BSY ಸಿಎಂ ಸ್ಥಾನ ಕಳೆದುಕೊಳ್ಳಲು ರೇವಣ್ಣ ಕಾರಣ: ಜಿಟಿಡಿ ಆರೋಪ

01:29 AM Nov 29, 2024 | Team Udayavani |

ಮೈಸೂರು: ಜೆಡಿಎಸ್‌-ಬಿಜೆಪಿ ನೇತೃತ್ವದ 20-20 ಸರಕಾರದ ವೇಳೆ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಲು ಮಾಜಿ ಸಚಿವ ಎಚ್‌.ಡಿ. ರೇವಣ್ಣ ಕಾರಣ ಎಂದು ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ, ಶಾಸಕ ಜಿ.ಟಿ. ದೇವೇಗೌಡ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

Advertisement

ಕಾಂಗ್ರೆಸ್‌ ಸರಕಾರ ಜಿ.ಟಿ. ದೇವೇಗೌಡ, ಅವರ ಮಗನನ್ನು ಬಂಧಿಸಲು ಸಿದ್ಧತೆ ಮಾಡಿಕೊಂಡಿತ್ತು. ಕುಮಾರಸ್ವಾಮಿ ಪೊಲೀಸರಿಗೆ ಗುಟುರು ಹಾಕಿರದಿದ್ದರೆ ಜಿ.ಟಿ. ದೇವೇಗೌಡ ಮಗನ ಜತೆ ಜೈಲಿನಲ್ಲಿರಬೇಕಿತ್ತು ಎಂಬ ಎಚ್‌.ಡಿ. ರೇವಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿ, ಜೈಲಿಗೆ ಹೋಗುವಂತಹ ತಪ್ಪು ನಾವು ಮಾಡಿಲ್ಲ. ನನ್ನ ಮೇಲೆ ಯಾರೊಬ್ಬರೂ ರಾಜಕೀಯವಾಗಿ ದೂರು ಕೊಟ್ಟಿಲ್ಲ. ಯಾವ ಪ್ರಕರಣ ಇದೆ ಎಂಬುದನ್ನು ತೋರಿಸಲಿ. ನನ್ನನ್ನು ಬಂಧಿಸುತ್ತಾರೆ, ಬಿಡಿಸಿ ಎಂದೂ ಯಾರ ಬಳಿಯೂ ನಾನು ಕೇಳಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ರೇವಣ್ಣ ಅವರನ್ನೇ ಕೇಳುತ್ತೇನೆ. ಸಿಎಂ ಸಿದ್ದರಾಮಯ್ಯ ರಾಜಕೀಯವಾಗಿ ಸೇಡು ತೀರಿಸಿ ಕೊಳ್ಳಲು ಪ್ರಯತ್ನಿಸಿದ್ದಾರೆಯೇ ಹೊರತು ಎಂದೂ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವ ಕೆಲಸ ಮಾಡಿಲ್ಲ ಎಂದರು.

ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕೆಂದು ನಾನು ಈ ಹಿಂದೆ ಬಿಜೆಪಿಗೆ ಹೋಗಿದ್ದೆ. ಚುನಾವಣೆಯಲ್ಲಿ ಸೋತರೂ ಗೃಹಮಂಡಳಿ ಅಧ್ಯಕ್ಷನಾದೆ. ಆಗ ನನ್ನ ಕೆಲಸ ಕಾರ್ಯಕ್ಕೆ ಜೆಡಿಎಸ್‌, ಕಾಂಗ್ರೆಸ್‌ನವರು ತೊಂದರೆ ಕೊಡಲು ಪ್ರಯತ್ನಿಸಿದರು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next