Advertisement

ಸಚಿವರಿಗೆ ವರ್ಗಾವಣೆ ಅಧಿಕಾರ: ಶೇ. 6ರಷ್ಟು ಸರಕಾರಿ ನೌಕರರ ವರ್ಗಕ್ಕೆ ಆದೇಶ

01:03 AM May 31, 2023 | Team Udayavani |

ಬೆಂಗಳೂರು: ನೂತನ ಸರಕಾರವು ರಾಜ್ಯ ಸರಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗೆ ಒಪ್ಪಿಗೆ ಸೂಚಿಸಿದೆ. ಇದರೊಂದಿಗೆ ಆಡಳಿತ ಪಕ್ಷದ ಶಾಸಕರು ಕ್ಷೇತ್ರಗಳಲ್ಲಿ ತಮಗೆ ಬೇಕಾದ ಅಧಿಕಾರಿ/ನೌಕರರನ್ನು ವರ್ಗಾವಣೆ ಮಾಡಿಸಿಕೊಳ್ಳಲು ಅವಕಾಶ ದೊರೆತಿದೆ.

Advertisement

2023-24ರ ಸಾಲಿಗೆ ಗ್ರೂಪ್‌ ಎ, ಬಿ, ಸಿ, ಡಿ ವರ್ಗದ ಅಧಿಕಾರಿ ಮತ್ತು ನೌಕರರಿಗೆ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಜೇಷ್ಠತಾ ಘಟಕದಲ್ಲಿ ಕಾರ್ಯನಿರತ ವೃಂದ ಬಲದ ಶೇ. 6 ಮೀರದಂತೆ ಜೂ. 1ರಿಂದ 15ರ ಒಳಗೆ ವರ್ಗಾವಣೆ ಪ್ರಕ್ರಿಯೆ ಮುಗಿಸುವಂತೆ ಸಿಬಂದಿ ಮತ್ತು ಆಡಳಿತ ಸುಧಾರಣ ಇಲಾಖೆ ಆದೇಶ ಹೊರಡಿಸಿದೆ. ವರ್ಗಾವಣೆ ಕೈಗೊಳ್ಳಲು ಆಯಾ ಇಲಾಖೆಯ ಸಚಿವರಿಗೆ ಅಧಿಕಾರ ನೀಡಲಾಗಿದೆ.

ಈ ಹಿಂದೆ ಬಿಜೆಪಿ ಸರಕಾರ ಅಧಿಕಾರ ಇದ್ದಾಗ ನೇಮಕಗೊಂಡಿದ್ದ ಅಧಿಕಾರಿಗಳು ಹಾಗೂ ನೌಕರರನ್ನು ವರ್ಗಾವಣೆ ಮಾಡಬೇಕು ಎಂಬುದು ಶಾಸಕರ ಒತ್ತಾಯ ಆಗಿತ್ತು. ತಮಗಿಷ್ಟ ಬಂದ ಅಧಿಕಾರಿಗಳು-ನೌಕರರನ್ನೇ ಸ್ಥಳೀಯವಾಗಿ ಶಾಸಕರು ವರ್ಗಾವಣೆ ಮಾಡಿಸಿಕೊಳ್ಳುವುದು ಹಲವು ವರ್ಷಗಳಿಂದ ನಡೆದುಬಂದಿದೆ. ಈಗ ಸರಕಾರ ಬದಲಾಗಿರುವುದರಿಂದ ಶಾಸಕರ ಒತ್ತಾಸೆ ಮೇರೆಗೆ ಸಿಎಂ ಈ ತೀರ್ಮಾನ ಕೈಗೊಂಡಿದ್ದು, ವರ್ಗಾವಣೆ ಅಧಿಕಾರವನ್ನು ಸಚಿವರಿಗೆ ನೀಡಿರುವುದರಿಂದ ವರ್ಗಾವಣೆಯ ಯಾವುದೇ ಕಡತ ಸಿಎಂ ಸಹಿಗೆ ಹೋಗಬೇಕಾಗಿಲ್ಲ.

ರಿಷ್ಯಂತ್‌ ದ.ಕ. ಪ್ರಭಾರ ಎಸ್‌ಪಿ
ಮಂಗಳೂರು: ದ.ಕ. ಜಿಲ್ಲಾ ಪ್ರಭಾರ ಎಸ್‌ಪಿ ಆಗಿ ರಿಷ್ಯಂತ್‌ ಸಿ.ಬಿ. ನಿಯೋಜನೆ ಗೊಂಡಿದ್ದಾರೆ. ಎಸ್‌ಪಿ ಆಗಿದ್ದ ಡಾ| ವಿಕ್ರಂ ಅಮಟೆ ಅನಾರೋಗ್ಯ ನಿಮಿತ್ತ ದೀರ್ಘ‌ ರಜೆಯಲ್ಲಿರುವುದರಿಂದ ಪ್ರಭಾರ ಎಸ್‌ಪಿ ಆಗಿ ರಿಷ್ಯಂತ್‌ ಅವರನ್ನು ನಿಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next