ಬೆಂಗಳೂರು : ಜಿ.ಪಂ,ತಾ.ಪಂ ಚುನಾವಣೆ ವಿಚಾರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಆರ್ಡರ್ ತಂದಿದ್ದು, ಎಸ್ಸಿ,ಎಸ್ಟಿಗೆ ಮಾತ್ರ ರಿಸರ್ವೇಶನ್ ಕೊಡಲಾಗಿದ್ದು, ಒಬಿಸಿಗಳಿಗೆ ರಿಸರ್ವೇಶನ್ ಕೊಡುವಂತಿಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ನಡೆಸುವುದಕ್ಕೆ ನಾವು ಮನವಿ ಕಳಿಸಿದ್ದೆವು.ಡಿಲಿಮಿಟೇಶನ್, ರಿಸರ್ವೇಶನ್ ಬಗ್ಗೆ ಬಿಲ್ ತಂದೆವು, ಲಕ್ಷ್ಮೀನಾರಾಯಣ್ ನೇತೃತ್ವದಲ್ಲಿ ಕಮಿಟಿ ಮಾಡಿದ್ದೆವು ಎಂದರು.
ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಒಬಿಸಿ ಕೂಡ ಜನರಲ್ ನಲ್ಲೇ ಬರಲಿದೆ. ಇದರ ಬಗ್ಗೆ ಪ್ರತಿಪಕ್ಷಗಳು ಮಾತನಾಡಲಿ ಎಂದರು.
ನಾವು ಕಾನೂನು ಬದ್ಧವಾಗಿ ಚುನಾವಣೆ ನಡೆಯಬೇಕು ಎಂದು ತೀರ್ಮಾನಿಸಿದ್ದೆವು, ಹಾಗಾಗಿ ಚುನಾವಣೆ ಮುಂದಕ್ಕೆ ಹೋಗಿದೆ. ಸುಪ್ರೀಂ ತೀರ್ಪಿನ ಬಗ್ಗೆ ತಜ್ಞರ ಜೊತೆ ಚರ್ಚಿಸಬೇಕು. ಹಾಗೆ ನೋಡಿದರೆ ಚುನಾವಣೆ ಅಸಾಧ್ಯ, ನಂತರ ಇದರ ಬಗ್ಗೆ ನಿರ್ಧರಿಸಬೇಕು ಎಂದರು.
ಆ ಬಗ್ಗೆ ಮಾತಾಡಲ್ಲ
ರಾಷ್ಟ್ರ ಧ್ವಜದ ವಿಚಾರದಲ್ಲಿ ನಾನು ಮಾತನಾಡಲ್ಲ. ಈಗ ಎಲ್ಲವೂ ಶಾಂತವಾಗಿದೆ. ದಯವಿಟ್ಟು ಅದರ ಬಗ್ಗೆ ಕೇಳಬೇಡಿ ಎಂದರು.
ಸಿದ್ದರಾಮಯ್ಯ ಅವರು, ಈಶ್ವರಪ್ಪ ನಾಲಾಯಕ್ ಎಂದ ಬಗ್ಗೆ ಹೇಳಿಕೆ ಬಗ್ಗೆ ಆಮೇಲೆ ಮಾತನಾಡ್ತೇನೆ ಎಂದರು.