Advertisement

Reservation ಮಿತಿ ಶೇ. 69ಕ್ಕೆ ಹೆಚ್ಚಿಸಿದರೆ ಅನುಕೂಲ: ಸಚಿವ ಶಿವರಾಜ ಎಸ್‌. ತಂಗಡಗಿ

12:13 AM Dec 14, 2024 | Team Udayavani |

ಬೆಳಗಾವಿ: ಮೀಸಲಾತಿಯ ಮಿತಿಯನ್ನು ಶೇ. 69ಕ್ಕೆ ಹೆಚ್ಚಿಸಿದರೆ ಅತ್ಯಂತ ಹಿಂದುಳಿದಿ ರುವ ವರ್ಗಗಳನ್ನು ಒಳಗೊಂಡಿರುವ ಪ್ರವರ್ಗ-1ರ ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ಎಸ್‌. ತಂಗಡಗಿ ಹೇಳಿದ್ದಾರೆ.

Advertisement

ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಡಾ| ತಳವಾರ ಸಾಬಣ್ಣ ನಿಯಮ 330ರಡಿ ಮಂಡಿಸಿದ ಗಮನ ಸೆಳೆಯುವ ಸೂಚನೆ ಮತ್ತದರ ಮೇಲಿನ ಚರ್ಚೆಗೆ ಸಚಿವರು ಉತ್ತರ ನೀಡಿದ್ದಾರೆ. ಪ್ರವರ್ಗ-1ರ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಕುರಿತಂತೆ ಮುಖ್ಯಮಂತ್ರಿ ಗಮನಕ್ಕೆ ತರಲಾಗು ವುದು. ಎಂದು ಸಚಿವರು ಭರವಸೆ ನೀಡಿದರು.ಚರ್ಚೆ ಆರಂಭಿಸಿದ ತಳವಾರ ಸಾಬಣ್ಣ,ಅವೈಜ್ಞಾನಿಕವಾಗಿ ಮೀಸಲಾತಿ ಪ್ರಮಾಣವನ್ನು ನಿಗದಿಪಡಿಸಿರುವುದರಿಂದ ಅನ್ಯಾಯವಾಗಿದೆ ಎಂದು ಹೇಳಿದರು.

ಜನಸಂಖ್ಯೆಯ ಶೇ. 8ರಷ್ಟಿರುವ ಈಸಮುದಾಯಗಳಿಗೆ ಶೇ.4ರಷ್ಟು ಮೀಸಲಾತಿ ಯಿದೆ. ಮೀಸಲಾತಿ ಪ್ರಮಾಣವನ್ನು ಶೇ. 7ಕ್ಕೆ ವಿಸ್ತರಿಸಬೇಕು ಎಂದು ಆಗ್ರಹಿಸಿದರು.

ಸಚಿವರ ಬಾಯಿ ಮುಚ್ಚಿಸಿದ ಹರಿಪ್ರಸಾದ್‌!
ತಮಿಳುನಾಡಿನಲ್ಲಿ ಶೇ. 69 ಮೀಸಲಾತಿ ನೀಡಿದಂತೆ ಕರ್ನಾಟಕದಲ್ಲಿಯೂ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆದಾಗ ಸಚಿವ ತಂಗಡಗಿ ಅವರು ತಮಿಳುನಾಡಿನಲ್ಲಿ ಇಂದಿರಾ ಸಾಹಿ° ಪ್ರಕರಣದಲ್ಲಿ ಮೀಸಲಾತಿ ಮಿತಿ ಶೇ. 50 ದಾಟಬಾರದು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡುವ ಮುನ್ನ ಮೀಸಲಾತಿ ಪ್ರಮಾಣವನ್ನು ಶೇ. 69ಕ್ಕೆ ಹೆಚ್ಚಿಸಲಾಗಿದೆ ಎಂದು ಹೇಳಿದರು.

ತಕ್ಷಣ ಮಧ್ಯ ಪ್ರವೇಶಿಸಿದ ಹರಿಪ್ರಸಾದ್‌, ಇಂದಿರಾ ಸಾಹ್ನಿ ಪ್ರಕರಣ ನಡೆದದ್ದು 1992ರಲ್ಲಿ. ತಮಿಳುನಾಡಿನಲ್ಲಿ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದ್ದು 1993ರಲ್ಲಿ ಎಂದು ಹೇಳಿ ತಂಗಡಗಿ ಬಾಯಿ ಮುಚ್ಚಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next