Advertisement

ಶಾಂತಿ ಕದಡಲು ಯತ್ನಿಸಿದರೆ ಕಠಿಣ ಕ್ರಮ

10:00 AM Aug 30, 2018 | |

ಶಿವಮೊಗ್ಗ: ಆ. 31ರಂದು ನಡೆಯಲಿರುವ ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದ್ದು, ಶಾಂತಿಯನ್ನು ಕದಡಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ಎಚ್ಚರಿಕೆ ನೀಡಿದರು.

Advertisement

ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಂತಿಯುತವಾಗಿ ಚುನಾವಣೆ ನಡೆಸಲು ಕೈಗೊಂಡಿರುವ ಕ್ರಮಗಳ ವಿವರ ನೀಡಿದರು. ಒಟ್ಟು 35 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದ್ದು, ಒಟ್ಟು 274218 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. 

ಇವರಲ್ಲಿ 135524 ಪುರುಷ ಹಾಗೂ 138673 ಮಹಿಳಾ ಮತದಾರರು ಮತ್ತು 21 ಇತರೆ ಮತದಾರರು ಇದ್ದಾರೆ. ಒಟ್ಟು 303 ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ. ಇದರಲ್ಲಿ 86 ಸೂಕ್ಷ್ಮ, 21 ಅತಿ ಸೂಕ್ಷ್ಮ ಮತ್ತು 196 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ ಎಂದರು.

 ಚುನಾವಣೆಯನ್ನು ಸುಗಮವಾಗಿ ನಡೆಸಲು 320 ಮತಗಟ್ಟೆ ಅಧಿಕಾರಿಗಳು, 320 ಮತಗಟ್ಟೆ ಸಹಾಯಕ ಅಧಿಕಾರಿಗಳು, 640 ಮತಗಟ್ಟೆ ಸಿಬ್ಬಂದಿ, 303 ಸಹಾಯಕರು, 303 ಪೊಲೀಸ್‌ ಸಿಬ್ಬಂದಿ ಸೇರಿದಂತೆ ಒಟ್ಟು 1886 ಅಧಿಕಾರಿ/ಸಿಬ್ಬಂದಿ ನಿಯೋಜಿಸಲಾಗಿದೆ. ಶಿವಮೊಗ್ಗ ತಾಲೂಕು ಹೊರತುಪಡಿಸಿ ನೆರೆಯ ತಾಲೂಕುಗಳ ಸಿಬ್ಬಂದಿಗಳನ್ನು ಚುನಾವಣಾ ಕರ್ತವ್ಯಕ್ಕಾಗಿ ನಿಯೋಜನೆ ಮಾಡಲಾಗಿದ್ದು, ಇದರಿಂದ ಅಂಚೆ ಮತದಾನಕ್ಕಾಗಿ ಅತಿ ಕಡಿಮೆ ಅರ್ಜಿಗಳು ಬಂದಿವೆ ಎಂದು ಹೇಳಿದರು. 

ಚುನಾವಣಾ ಕರ್ತವ್ಯಕ್ಕಾಗಿ ಒಟ್ಟು 82 ವಾಹನಗಳನ್ನು ಬಳಸಲಾಗುತ್ತಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಇದರ ಮೇಲುಸ್ತುವಾರಿಗಾಗಿ ಉಪವಿಭಾಗಾಧಿಕಾರಿ ಶಿವಮೊಗ್ಗ ಅವರನ್ನು ನೋಡೆಲ್‌ ಅಧಿಕಾರಿಯಾಗಿ ನೇಮಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘನೆಯ ಯಾವುದೇ ಪ್ರಕರಣಗಳು
ಗಮನಕ್ಕೆ ಬಂದಲ್ಲಿ ದೂರವಾಣಿ ಸಂಖ್ಯೆ 91485 85855 ಸಂಪರ್ಕಿಸಬಹುದಾಗಿದೆ ಎಂದರು.

Advertisement

ಬಹಿರಂಗ ಮತ ಪ್ರಚಾರ ಕಾರ್ಯ ಈಗಾಗಲೇ ಮುಕ್ತಾಯವಾಗಿದ್ದು, ಕ್ಷೇತ್ರಕ್ಕೆ ಸಂಬಂಧಪಡದ ಚುನಾವಣಾ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ವ್ಯಕ್ತಿಗಳು ಕ್ಷೇತ್ರ ವ್ಯಾಪ್ತಿಯನ್ನು ಖಾಲಿ ಮಾಡಲು ಆದೇಶ ನೀಡಲಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಇದ್ದವರು ಮಾತ್ರ ಮತ ಚಲಾಯಿಸಬಹುದಾಗಿದೆ. 

ಈಗಾಗಲೇ ಅರ್ಹ ಮತದಾರರಿಗೆ ವೋಟರ್‌ ಸ್ಲಿಪ್‌ ನೀಡಲಾಗುತ್ತಿದೆ. ಮತದಾನದ ದಿನ ಮತಗಟ್ಟೆ ಹೊರಗೆ ಬಿಎಲ…ಒಗಳಿಂದ ಸಹ ವೋಟರ್‌ ಸ್ಲಿಪ್‌ ಪಡೆಯಬಹುದಾಗಿದೆ. ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ ಇತರ 22 ಭಾವಚಿತ್ರವಿರುವ ಗುರುತಿನ ಚೀಟಿಗಳನ್ನು ಗುರುತಿಸಲಾಗಿದ್ದು, ಇವುಗಳ ಪೈಕಿ ಒಂದನ್ನು ತೋರಿಸಿ ಮತ ಚಲಾಯಿಸಬಹುದಾಗಿದೆ. ಚುನಾವಣೆಗೆ ಅಳಿಸಲಾಗದ ಶಾಯಿಯನ್ನು ಎಡಗೈ ಉಂಗುರದ ಬೆರಳಿಗೆ ಹಾಕಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಮತ ಎಣಿಕೆ: ಮತ ಎಣಿಕೆ ಕಾರ್ಯ ಸೆ. 3ರಂದು ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಏಕಕಾಲದಲ್ಲಿ ನಡೆಯಲಿದೆ. ಇದಕ್ಕಾಗಿ 2 ಭದ್ರತಾ ಕೊಠಡಿಗಳು, 7 ಮತ ಎಣಿಕೆ ಹಾಲ…, 49 ಮತ ಎಣಿಕೆ ಟೇಬಲ್‌ ಹಾಗೂ 147 ಮತ ಎಣಿಕೆ ಮೇಲ್ವಿಚಾರಕರು ಹಾಗೂ ಸಿಬ್ಬಂದಿ ನೇಮಕ ಮಾಡಲಾಗಿದೆ. ಮತದಾನ ಕೇಂದ್ರದ ಸುತ್ತಲೂ 144 ಸೆಕ್ಸನ್‌ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next