Advertisement

ನಗರದ ವಿವಿಧೆಡೆ ಧಾರಾಕಾರ ಮಳೆ

12:24 AM Sep 25, 2019 | Team Udayavani |

ಬೆಂಗಳೂರು: ನಗರದಲ್ಲಿ ಮಂಗಳವಾರವೂ ಧಾರಾಕಾರ ಮಳೆಯಾಗಿದ್ದು, ಕುಂದಲಹಳ್ಳಿ ಗ್ರಾಮದ ಅನೇಕ ಮನೆಗಳಿಗೆ ನೀರು ನುಗ್ಗಿರುವುದು ವರದಿಯಾಗಿದೆ. ಕಳೆದ ಎರಡು ದಿನಗಳಿಂದ ನಗರದಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಮಂಗಳವಾರ ಸಂಜೆ ಸುರಿದ ಮಳೆಗೆ ದೊಡ್ಡನೆಕ್ಕುಂದಿ ವಾರ್ಡ್‌ನ ಕುಂದಲಹಳ್ಳಿಯ ತಗ್ಗು ಪ್ರದೇಶದಲ್ಲಿ ನಿರ್ಮಿಸಿದ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಸ್ಥಳೀಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

Advertisement

ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದ ಲಿ ಮೆರಿಡಿಯನ್‌ ಅಂಡರ್‌ ಪಾಸ್‌ ಸೇರಿದಂತೆ ವಿವಿಧ ಅಂಡರ್‌ ಪಾಸ್‌, ಫ್ಲೈಓವರ್‌ ಮೇಲೆ ನೀರು ನಿಂತ ಟ್ರಾಫಿಕ್‌ ಸಮಸ್ಯೆ ಉಂಟಾಗಿತ್ತು. ಸೋಮವಾರ ರಾತ್ರಿ ಸುರಿದ ಮಳೆಗೆ ಸುಬ್ರಮಣ್ಯಪುರ,ಜೋಗುಪಾಳ್ಯ ಹಾಗೂ ವಿವೇಕನಗರದಲ್ಲಿ ತಲಾ ಒಂದು ಮರ ಧರೆಗುರುಳಿದ್ದು, ವಿವೇಕ ನಗರದಲ್ಲಿ ಒಂದು ಕಾರು ಮತ್ತು ಬೈಕ್‌ ಜಖಂಗೊಂಡಿವೆ. ಆದರೆ, ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಬಿಬಿಎಂಪಿಯ ಸಹಾಯವಾಣಿಯ ಸಿಬ್ಬಂದಿ ತಿಳಿಸಿದ್ದಾರೆ.

ಎಲ್ಲೆಲ್ಲಿಎಷ್ಟು ಮಳೆ?: ದಾಸನಪುರ8 .5 ಮಿ.ಮೀ, ಹುಸ್ಕೂರು 11.5 ಮಿ.ಮೀ, ಹೆಸರಘಟ್ಟ 3.5 ಮಿ.ಮೀ, ರಾಜನಕುಂಟೆ 3.5 ಮಿ.ಮೀ, ದೊಡ್ಡಜಾಲ 22.5 ಮಿ.ಮೀ, ಯಲಹಂಕ 8 ಮಿ.ಮೀ, ಕೋನೇನ ಅಗ್ರಹಾರ 2 ಮಿ.ಮೀ, ಆವಲಹಳ್ಳಿ 3 ಮಿ.ಮೀ, ಕೆ.ಆರ್‌ಪುರ31.5 ಮಿ.ಮೀ, ಬಾಣಸವಾಡಿ 9ಮಿ.ಮೀ, ಸಂಪಂಗಿರಾಮನಗರ 7ಮಿ.ಮೀ, ರಾಮಮೂರ್ತಿ ನಗರ19ಮಿ.ಮೀ, ವರ್ತೂರು 8.5 ಮಿ.ಮೀ, ಬೂದಿಗೆರೆ 5 ಮಿ.ಮೀ, ಹಲಸೂರು 8 ಮಿ.ಮೀ ಹಾಗೂ ನಗರದ ವಿವಿಧೆಡೆ ಮಳೆಯಾಗಿರುವುದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next