Advertisement
ಮಂಗಳವಾರ ರಾತ್ರಿ ಶಾರ್ಜಾದಲ್ಲಿ ಬ್ಲ್ಯಾಕ್ ಕ್ಯಾಪ್ಸ್ ನ್ಯೂಜಿಲ್ಯಾಂಡ್ ಸವಾಲಿಗೆ ಉತ್ತರಿಸಬೇಕಿದೆ. ಇದನ್ನು ಪಾಕ್ ಸೇಡಿನ ಪಂದ್ಯವಾಗಿ ಪರಿಗಣಿಸಬ ಹುದು. ಇತ್ತೀಚೆಗಷ್ಟೇ ಪಾಕಿಸ್ಥಾನಕ್ಕೆ ಆಗಮಿಸಿ, ಇನ್ನೇನು ಐತಿಹಾಸಿಕ ಸರಣಿ ಆರಂಭಗೊಳ್ಳಬೇಕೆನ್ನುವಾಗಲೇ ನ್ಯೂಜಿಲ್ಯಾಂಡ್ ತಂಡ ಭದ್ರತೆಯ ನೆಪವೊಡ್ಡಿ ತವರಿಗೆ ವಿಮಾನ ಏರಿತ್ತು. ಪಾಕ್ ಕ್ರಿಕೆಟ್ ಮಂಡಳಿಗೆ ಇದರಿಂದ ಭಾರೀ ಪ್ರಮಾಣದ ನಷ್ಟ ಸಂಭವಿಸಿತ್ತು. ಇದನ್ನು ಬಡ್ಡಿ ಸಮೇತ ತೀರಿಸಿಕೊಳ್ಳುವುದು ಬಾಬರ್ ಪಡೆಯ ಯೋಜನೆ ಆಗಿದ್ದರೆ ಅಚ್ಚರಿ ಇಲ್ಲ.
Related Articles
ವಿಶ್ವಕಪ್‌ಗೆ ನ್ಯೂಜಿಲ್ಯಾಂಡ್ ದೊಡ್ಡ ಮಟ್ಟದಲ್ಲೇನೂ ತಯಾರಿ ನಡೆಸಿಲ್ಲ. ಅಭ್ಯಾಸ ಪಂದ್ಯಗಳಲ್ಲಿ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್‌ಗಳೆರಡಕ್ಕೂ ಸೋತಿದೆ. ನಾಯಕ ಕೇನ್ ವಿಲಿಯಮ್ಸನ್ ಫಿಟ್‌ನೆಸ್ ಬಗ್ಗೆ ಸಾಕಷ್ಟು ಅನುಮಾನವಿದೆ. ಅವರು ಮೊಣಕೈ ನೋವಿನ ವಿರುದ್ಧಹೋರಾಡುತ್ತಿದ್ದಾರೆ. ಆಸ್ಟ್ರೇಲಿಯ ಎದುರಿನ ಅಭ್ಯಾಸ ಪಂದ್ಯದ ವೇಳೆ ಇದು ಕಾಡಿತ್ತು. ಇಂಗ್ಲೆಂಡ್ ಎದುರು ವಿಲಿಯಮ್ಸನ್ ಬ್ಯಾಟಿಂಗ್ ಮಾಡಿರಲಿಲ್ಲ. ಮೊದಲೇ ಸಾಮಾನ್ಯ ಮಟ್ಟದ ಬ್ಯಾಟಿಂಗ್ ಸರದಿಯನ್ನು ಹೊಂದಿರುವ ಕಿವೀಸ್ ಪಾಲಿಗೆ ಇದೊಂದು ಗಂಭೀರ ಸಮಸ್ಯೆಯೇ ಸರಿ.
Advertisement