Advertisement

Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ

10:04 AM Dec 18, 2024 | Team Udayavani |

ಬ್ರಿಸ್ಬೇನ್‌: ಮಳೆಯಿಂದ ನಿರಂತರ ಅಡ್ಡಿಯಾಗಿರುವ 3 ನೇ ಟೆಸ್ಟ್ ಪಂದ್ಯ ಕೊನೆಯ 5 ನೇ ದಿನದಾಟದಲ್ಲಿ ರೋಚಕ ಹಂತಕ್ಕೆ ಬಂದಿದ್ದು, ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯವಿದೆ. ಎರಡನೇ ಇನ್ನಿಂಗ್ಸ್ ನಲ್ಲಿ ಭಾರತೀಯ ಬೌಲರ್ ಗಳು ಮೇಲುಗೈ ಸಾಧಿಸಿದ ಕಾರಣ ಪಂದ್ಯ ಕುತೂಹಲ ಕೆರಳಿಸಿದೆ.

Advertisement

ಆಸ್ಟ್ರೇಲಿಯ 89 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡಿತು. ಈ ವೇಳೆ ರಣತಂತ್ರ ಮಾಡಿ ಡಿಕ್ಲೆರ್ ಮಾಡಿಕೊಂಡಿತು. ಭಾರತ 54 ಓವರ್‌ಗಳಲ್ಲಿ 275 ರನ್ ಅಗತ್ಯ ಎದುರಾಗಿದೆ.

ಬಿಗಿ ದಾಳಿ ನಡೆಸಿದ ಬುಮ್ರಾ 3 ವಿಕೆಟ್ ಕಿತ್ತರೆ, ಸಾಥ್ ನೀಡಿದ ಸಿರಾಜ್ ಮತ್ತು ಆಕಾಶ್ ದೀಪ್ ತಲಾ 2 ವಿಕೆಟ್ ಕಿತ್ತು ಆಸೀಸ್ ಬ್ಯಾಟರ್ ಗಳನ್ನು ನಿಯಂತ್ರಿಸಿದರು. ಹೆಡ್ 17, ಅಲೆಕ್ಸ್ ಕ್ಯಾರಿ ಔಟಾಗದೆ 20, ನಾಯಕ ಕಮಿನ್ಸ್ 22 ರನ್ ಹೊರತು ಉಳಿದ ಆಟಗಾರರು ಬೇಗನೆ ನಿರ್ಗಮಿಸುವಂತೆ ಮಾಡಲು ಭಾರತದ ಬೌಲರ್ ಗಳು ಯಶಸ್ವಿಯಾದರು.

ಸ್ಕೋರ್ ಪಟ್ಟಿ: ಆಸ್ಟ್ರೇಲಿಯ 445 ಮತ್ತು89 -7 ಡಿಕ್ಲೆರ್ , ಭಾರತ 260

Advertisement

Udayavani is now on Telegram. Click here to join our channel and stay updated with the latest news.

Next